ನಮ್ಮದು ಹೃದಯಗಳ ಸಂಗಮ ಪವಿತ್ರಾ ಲೋಕೇಶ್ ಕೈ ಹಿಡಿದು ನರೇಶ್  ಸ್ಪಷ್ಟನೆ

ಮದುವೆ ಅನ್ನುವುದು ಪವಿತ್ರವಾದದ್ದು.ಅದರ ಬಗ್ಗೆ ಗೌರವವಿದೆ. ಮದುವೆ ಆಗಿದೆ ಎಂದು ತೋರಿಸಲು ಕಾಲುಂಗರ , ಮಂಗಳ ಸೂತ್ರ ಮಾತ್ರ ಆಗಬೇಕೆಂದಿಲ್ಲ. ನನ್ನ ಮತ್ತು ನಟಿ ಪವಿತ್ರಾ ಲೋಕೇಶ್ ನಡುವಿನ ಸಂಬಂದ ಹೃದಯಗಳ ಸಂಗಮ. ಹೀಗಂತ ಸ್ಪಷ್ಟನೆ ನೀಡಿದರು ತೆಲುಗು ನಟ,ನಿರ್ಮಾಪಕ ಡಾ.ನರೇಶ್.

” ಮತ್ತೆ ಮದುವೆ” ಚಿತ್ರದ ಪ್ರಚಾರಕ್ಕೆ ಬಂದಿದ್ದ ನಟಿ ಪವಿತ್ರಾ ಲೋಕೇಶ್ ಮತ್ರು ನಟ,ನಿರ್ಮಾಪಕ ನರೇಶ್ ತಮ್ಮ ನಡುವಿನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತು ಹಂಚಿಕೊಂಡರು.

ಅದರಲ್ಲಿಯೂ ನಟ ನರೇಶ್, ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆಗೆ ಉತ್ತರಿಸಿ ನಾನು ಮತ್ತು ನಟಿ ಪವಿತ್ರ ಲೋಕೇಶ್ ” ಲಿವಿಂಗ್ ರಿಲೇಷನ್ ನಲ್ಲಿ ಇದ್ದೇವೆ. ಇರುವ ವಿಷವನ್ನು ಹೇಳಲು ಮುಚ್ಚು ಮೊರೆ ಯಾಕೆ ಎಂದರು.

ಮತ್ತೆ ಮದುವೆ ಚಿತ್ರ ನಿಮ್ಮ ನಿಜ ಜೀವನದ ಕುರಿತತಾದ ಚಿತ್ರವೇ ಅಥವಾ ನಿಮ್ಮನ್ನು ಟೀಕಿಸಿದವರಿಗೆ ಉತ್ತರನಾ ಕೊಡುತ್ತಿದ್ದೀರಾ ಎನ್ನುವ ಪ್ರಶ್ನೆಗೆ ಚಿತ್ರ‌ ನೋಡಿ ನಿಮಗೆ ಗೊತ್ತಾಗಲಿದೆ ಎನ್ನುವ ಮಾಹಿತಿ ಹಂಚಿಕೊಂಡರು.

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ” ಮತ್ತೆ ಮದುವೆ” ತೆರೆಗೆ ಬರಲು ಸಜ್ಜಾಗಿದೆ. ಮೊದಲು ತೆಲುಗಿನಲ್ಲಿ ಮುಂದಿನ ವಾರ ಚಿತ್ರ ಬಿಡುಗಡೆ ಮಾಡಿ  ಆ ನಂತರ ಕನ್ನಡದಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು. ಚಿತ್ರ ನೋಡಿ ಎಲ್ಲರೂ ಸಹಕಾರ ನೀಡಿ ಎಂದು ಕೇಳಿಕೊಂಡರು.

ಪವಿತ್ರಾ ಲೋಕೇಶ್, ಮಾತನಾಡಿ ತುಂಬಾ ವರ್ಷದ ಮೇಲೆ ಬೇಟಿ ಅಗ್ತಾ ಇದ್ದೇನೆ.  ಯಾರನ್ನೋ ದೋಚಲು, ಯಾರದೋ ದಡ್ಡಿನಲ್ಲಿ ಮಜಾ ಮಾಡುವ ಇದ್ದೇಶ ಇಲ್ಲ. ಕನ್ನಡದ ನಟಿಯಾಗಿ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದುಡಿದಿದ್ದೇನೆ. ಇದಕ್ಕೆ ಕನ್ನಡದ ಅನೇಕ ಸಹ ಕಲಾವಿದರು ಹೆಮ್ಮೆ ವ್ಯಕ್ತಪಡಿಸಿದ್ದಾರೆ ಎಂದರು.

ನಮ್ಮನೆಯಲ್ಲಿ ಇರುವ ನೂರು ದಿನಗಳ ಶೀಲ್ಡ್ ಗಳನ್ನು ನೋಡಿಕೊಂಡು ಬೆಳೆದವಳು ನಾನು. ಡಾ.ಕುಮಾರ್ ಕುಟುಂಬ ನೂರು ದಿನದ ಸಂದರ್ಭರದಲ್ಲಿ ಬೆಳ್ಳಿ ಲೋಟ ಕೊಡ್ತಾ ಇದ್ದರು ಅದರಲ್ಲಿಯೇ ಕಾಫಿ ಕುಡಿಯೋದು ನಾವು. ಚಿತ್ರರಂಗಕ್ಕೆ ಬಂದದ್ದು ಆಕಸ್ಮಿಕ. ತೆಲುಗು ಚಿತ್ರರಂಗ ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ ಇದು ಖುಷಿಯ ಸಂಗತಿ ಎಂದರು.

ನಿರ್ದೇಶಕ ಎಂ.ಎಸ್ ರಾಜು ಮಾತನಾಡಿ, ವಿಜಯ್ ಕೃಷ್ಣ ಮೂವೀಸ್ ಸಂಸ್ಥೆ 50 ವರ್ಷ ಪೂರ್ಣಗೊಳಿಸಿದೆ. ನರೇಶ್ ಅವರು  ಎಂಟು ಒಂಭತ್ತು ವರ್ಷಗಳಲ್ಲಿ ನಟನೆ ಆರಂಭಿಸಿದ್ದರು.ಅವರು ಬಣ್ಣದ ಬದುಕಿನಲ್ಲಿ 50 ವರ್ಷ ಪೂರ್ಣಗೊಳಿಸಿದ್ದಾರೆ.ನಟಿ ಪವಿತ್ರಾ ಲೋಕೋಶ್ ಅದ್ಬುತ ನಟಿ,ಚಿತ್ರದಲ್ಲಿ ಅವರ ನಟನೆ ಅಭೂತಪೂರ್ವವಾಗಿದೆ. ಚಿತ್ರಕ್ಕೆ ನರೇಶ್ ಸರ್ ಸಾಕಷ್ಟು ಹಣ ಹಾಕಿದ್ದಾರೆ.ಮತ್ತೆ ಮದುವೆ ಎಲ್ಲರ ಸಹಕಾರ ವಿರಲಿ ಎಂದರು.

 ಬಣ್ಣದ ಬದುಕಿಗೆ ಸುವರ್ಣ ಸಂಭ್ರಮ

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ನಟ ಡಾ‌.ನರೇಶ್ ಅವರು ಚಿತ್ರರಂಗಕ್ಕೆ ಪ್ರವೇಶಿಸಿ 5೦ ವರ್ಷ ಪೂರ್ಣಗೊಳಿಸಿದ್ದಾರೆ. ಇದೇ ವೇಳೆ ವಿಜಯ ಕೃಷ್ಣ ಮೂವೀಸ್ ಸಂಸ್ಥೆಗೂ 50 ವರ್ಷ ಆಗಿರುವ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಹೊಸದಾಗಿ ಬಿಡುಗಡೆ ಮಾಡಲಾಯಿತು.

ನಾನೇ ಡಬ್ ಮಾಡಿದ್ದೇನೆ

ಮತ್ತೆ ಮದುವೆ ಚಿತ್ರದಲ್ಲಿ ಕನ್ನಡದಕ್ಕೆ ನಾನೇ ಡಬ್ ಮಾಡಿದ್ದೇನೆ.ಕನ್ನಡ ತೆಲುಗು ಸಹೋದರ ಭಾಷೆ. ಲಿಪಿ ಎತಡು ಭಾಷೆಯದು ಹೆಚ್ಚು‌ಕಡಿಮೆ ಒಂದೆ.  ಎರಡೂ ಇಂಡಸ್ಟ್ರಿ ಗಳು ಜೊತೆಯಾಗಿ ಬೆಳದಿವೆ.  ಶಿವಣ್ಣ ಕ್ಲಾಸ್ ಮೇಟ್  ಸಾಕಷ್ಟು ಬಾರಿ ಭೇಟಿ ಆಗಿದ್ದೇವೆ.

ಅಂಬರೀಷ್ ,ಸುಮಲತಾ, ರಮೇಶ್, ರಾಕ್ ಲೈನ್ ಲೈನ್ ಸ್ನೇಹಿತರು ಇದ್ದಾರೆ. ಈ ಮುಂಚೆಯೇ ಕನ್ನಡಕ್ಕೆ ಬರಬೇಕಾಗಿತ್ತು ತಡವಾಗಿ ಬಂದಿದ್ದೇನೆ ಎಂದರು

ಚಿತ್ರರಂಗ ಸಾಕಷ್ಟು ಕೊಟ್ಟಿದೆ.

“ತೆಲುಗು ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿಯಾಗಿದ್ದೇನೆ.ಅದಕ್ಕೆಲ್ಲಾ ಕನ್ನಡ ಚಿತ್ರರಂಗ ಕಾರಣ. ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬೆಳೆಯಲು ಕನ್ನಡ ಚಿತ್ರರಂಗದ ಕೊಡುಗೆ ಅಪಾರ.ಅದೇ ರೀತಿ ತೆಲುಗು ಚಿತ್ರರಂಗದಿಂದ ಸಾಕಷ್ಟು ದುಡಿದಿದ್ದೇನೆ. ಅಲ್ಲಿನವರು ನನ್ನನ್ನು ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕಿಂತ ಖುಷಿ ಇನ್ನೇನು ಬೇಕು..”

– ನಟಿ ಪವಿತ್ರಾ ಲೋಕೇಶ್