ನಮೋ 3 ನೇ ಬಾರಿ ಪ್ರಧಾನಿ ಸಂಭ್ರಮಾಚರಣೆ

ಕಾಳಗಿ.ಜೂ.10: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಂಬೇಡ್ಕರ್ ವೃತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

ಚಿಂಚೋಳಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೇಂಗಟಿ ಮಾತನಾಡಿ ಜವಹರ್ ಲಾಲ್ ನೆಹರು ಅವರು ಸತತ 3 ಬಾರಿ ದೇಶದ ಪ್ರಧಾನಿಯಾಗಿದ್ದರು. ಆನಂತರ ಯಾರು ಆಗಿರಲಿಲ್ಲ. ಆದರೆ ನರೇಂದ್ರ ಮೋದಿ ಅವರು ಆ ನಿಟ್ಟಿನಲ್ಲಿ ದಾಪುಗಾಲಿಟ್ಟಿದ್ದು, ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ ಎಂದರು. ಕಳೆದ 10 ವರ್ಷದಲ್ಲಿ ಪ್ರಧಾನಿಯಾಗಿ ದೇಶವನ್ನು ಉತ್ತಮವಾಗಿ ಅಭಿವೃದ್ಧಿಗೊಳಿಸಿ ಮುನ್ನಡೆಸಿದ್ದಾರೆ. ಮುಂದಿನ 5 ವರ್ಷದಲ್ಲೂ ಅವರ ನಾಯಕತ್ವದಲ್ಲಿ ಹೊಸ ಯೋಜನೆಗಳು ಅಭಿವೃದ್ಧಿ ಕಾರ್ಯ ನಡೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಶಾಂತ ಕದಂ ಮಾತನಾಡಿ ದೇಶದ ಇತಿಹಾಸದಲ್ಲಿ ಇಂದು ಐತಿಹಾಸಿಕ ಕ್ಷಣ. ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಏನ್ ಡಿಎ ನಾಯಕರಾಗಿ ಭಾರತವನ್ನು ವಿಕಸಿತ ರಾಷ್ಟ್ರವಾಗಿಸುವತ್ತ ಕೊಂಡೊಯ್ಯಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಮೇಶ ಕಿಟ್ಟದ, ಜಗದೀಶ ಪಾಟೀಲ, ಶಿವಕುಮಾರ ಕಮಕನೂರ, ಕಾಳಶೆಟ್ಟಿ ಪಡಶೆಟ್ಟಿ, ರಾಜೇಂದ್ರಬಾಬು ಹೀರಾಪೂರ, ದೇವೀಂದ್ರ ಕದಂ, ಭೀಮರಾಯ ಮಲಘಾಣ, ರಾಮು ರಾಠೋಡ, ವಿಜಯಕುಮಾರ ಅಲ್ಲಾಪುರ, ಗಣೇಶ ಸಿಂಗಶೆಟ್ಟಿ, ಜಗನ್ನಾಥ ತೇಲಿ, ಬಲರಾಮ ವಲ್ಲ್ಯಾಪುರ, ಸುನೀಲ ರಾಜಾಪುರ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.