ನಮೋ ವೇದಿಕೆ ಸದೃಢವಾದ ಸಂಘಟನೆ

ಸೊರಬ. ನ.೨೫: ನಮೋ ವೇದಿಕೆಯು ದೃಢವಾದ ಸಂಘಟನಾತ್ಮಕತೆಯಿಂದ ಅಸ್ತಿತ್ವಕ್ಕೆ ಬಂದಿರುವ ವೇದಿಕೆಯಾಗಿದೆ ಎಂದು ಜಿ ಪಂ ಮಾಜಿ ಉಪಾಧ್ಯಕ್ಷ ಹಾಗೂ ನಮೋ ವೇದಿಕೆ ತಾಲೂಕು ಅಧ್ಯಕ್ಷ ಪಾಣಿ ರಾಜಪ್ಪ ಹೇಳಿದರು. ಪಟ್ಟಣದ ನಮೋ ವೇದಿಕೆ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ    ತಾಲೂಕಿನ ನಮೋ ವೇದಿಕೆ ಕಾರ್ಯಕರ್ತರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ನಮೋ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಪ್ರಮುಖರನ್ನು ಪಕ್ಷದ ವಿವಿಧ ಹುದ್ದೆಗಳಿಂದ ಮುಕ್ತಗೊಳಿಸಿರಬಹುದು ಆದರೆ ಪಕ್ಷದಿಂದಲ್ಲ ಆದರೆ ಪಕ್ಷದಿಂದಲ್ಲ. ನಾವು ಈಗಲೂ ಬಿಜೆಪಿಯ ಮೂಲ ಕಾರ್ಯಕರ್ತರು ಹಾಗೂ ಮುಖಂಡರಾಗಿದ್ದೇವೆ ಎಂದ ಅವರು ಶಾಸಕ ಕುಮಾರ್ ಬಂಗಾರಪ್ಪ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಇದೆ. ಶಾಸಕರ ಹಟಾವೋ ಬಿಜೆಪಿ ಬಚಾವೋ ಎಂಬ ಘೋಷಣೆಯೊಂದಿಗೆ ಪ್ರತಿ ಬೂತ್ ಮಟ್ಟದಲ್ಲಿ ನಮೋ ವೇದಿಕೆಯು ಸಂಘಟನೆಯನ್ನು ಮಾಡಲಾಗುವುದು. ಸೊರಬದಲ್ಲಿ ನಮೋ ವೇದಿಕೆ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ತೆರಳದಂತೆ ಕೆಲವರು ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದರು. ಆದರೆ ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ನಮೋ ಅಭಿಮಾನಿಗಳು ಆಗಮಿಸಿದ್ದರು. ಆನವಟ್ಟಿಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆಗೆ ನಮೋ ಕಾರ್ಯಕರ್ತರು ಸ್ವಇಚ್ಛೆಯಿಂದಲೇ ಹೋಗಿರಲಿಲ್ಲ. ನಮೋ ವೇದಿಕೆಯ ಮುಖಂಡರು ತೆರಳುತ್ತಿಲ್ಲ ಎಂದಾದರೆ ನಾವೇಕೆ ಹೋಗಬೇಕು ಎಂದು ತೀರ್ಮಾನಿಸಿದ್ದರು. ಇದರಿಂದ 30000 ಜನ ಆಗಮಿಸಲಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಕಾರ್ಯಕ್ರಮದ ಮುಂಚೂಣಿ ವಹಿಸಿದ್ದ ಶಾಸಕರಿಗೆ ತಕ್ಕ ಉತ್ತರ ಲಭಿಸಿದೆ ಹಾಗೂ ಬಂದ ಸಂಖ್ಯೆ ಎಷ್ಟು ಎಂಬುದು ಬಹಿರಂಗಗೊಂಡಿದೆ ಎಂದರು. ಪ್ರಧಾನ ಕಾರ್ಯದರ್ಶಿ ಮಂಜಪ್ಪ ನೀರಲಗಿ, ಅರುಣ್ ಕುಮಾರ್, ಏ ಎಲ್. ಅರವಿಂದ್, ಗಜಾನನ ರಾವ್, ಪ್ರಸನ್ನ ಕುಮಾರ್ ಸಮನವಳ್ಳಿ, ಕುಸುಮ ಪಾಟೀಲ್, ಗುರುಪ್ರಸನ್ನ ಗೌಡ, ಚಂದ್ರಣ್ಣ ಬರಿಗಿ, ಮಲ್ಲಿಕಾರ್ಜುನ ಗುತ್ತೇರ್, ಆನಂದಪ್ಪ, ಅಶೋಕ್ ಪಾಟೀಲ್, ಶಿವಯೋಗಿ, ವಿಜಯೇಂದ್ರ ಕುಮಾರ್, ಮೊದಲಾದವರು ಇದ್ದರು.