ನಮೋ ವೇದಿಕೆಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲ

ಸೊರಬ.ಜ.20: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಬೇಕು ಎನ್ನುವ ಅಧಿಕಾರ ವರಿಷ್ಠರಿಗೆ ಹಾಗೂ  ಬಿಜೆಪಿ ಕಾರ್ಯಕರ್ತರಿಗೆ  ಹೊರತು ನಮೋ ವೇದಿಕೆ ಮುಖಂಡರಿಗೆ ಇಲ್ಲ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಹೇಳಿದರು.ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.ಬಿಜೆಪಿಯಲ್ಲಿ ಒಡಕು ಮೂಡಲು‌ ಕಾರಣವಾಗಿರುವ ನಮೋ ವೇದಿಕೆ ಮುಖಂಡರನ್ನು ಬಿಜೆಪಿಯ ವಿವಿಧ ಸಮಿತಿಯಿಂದ ವಜಾ ಮಾಡಲಾಗಿದೆ. ಬಿಜೆಪಿಗೂ ಹಾಗೂ ನಮೋ‌ ವೇದಿಕೆಗೂ ಯಾವುದೇ ಸಂಬಂಧವಿಲ್ಲ. ಅವರು ಮಾಡುವ ಯಾವುದೇ ಆರೋಪ ನಿರಾಧಾರವಾಗಿದ್ದು, ಅವರು ನೀಡುವ ಹೇಳಿಕೆ ವ್ಯೆಯಕ್ತಿಕವಾಗಿರುವುದರಿಂದ ಮನ್ನಣೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ತಾಲ್ಲೂಕಿನಾದ್ಯಂತ ಸರ್ಕಾರದ ವಿವಿಧ ಯೋಜನೆಗಳಡಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕುಮಾರ್ ಬಂಗಾರಪ್ಪ ಆದ್ಯತೆ ನೀಡಿ ಪ್ರತಿ ವ್ಯಕ್ತಿಗೂ ಸೌಲಭ್ಯ ಒದಗಿಸಲು ಶ್ರಮಿಸುತ್ತಿದ್ದಾರೆ. ತಮ್ಮ ವ್ಯೆಯಕ್ತಿಕ ಕೆಲಸ ಕಾರ್ಯಗಳಿಗೆ ಮಾನ್ಯತೆ ನೀಡಲಿಲ್ಲ ಎನ್ನುವ ಉದ್ದೇಶದಿಂದ ಶಾಸಕರ‌ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದರಲ್ಲಿ ಹುರುಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.239 ಬೂತ್ ಮಟ್ಟದಲ್ಲಿ ಪರಿಶೀಲನೆ ಸಭೆ ನಡೆಸಲು ವಿಜಯ ಅಭಿಯಾನ ಹಮ್ಮಿಕೊಂಡಿದ್ದು, ಮತದಾರರ ಪಟ್ಟಿಯಲ್ಲಿ 30ಮತದಾರಿಗೆ ಒಬ್ಬ ಪೇಜ್ ಪ್ರಮುಖರನ್ನು ನೇಮಿಸಲಾಗಿದೆ. ಸಾಮಾಜಿಕ ಆಗುಹೋಗುಗಳನ್ನು ಪರಿಶೀಲಿಸಲು ಕಾರ್ಯಕರ್ತರನ್ನು ನಿಯುಕ್ತಿ ಮಾಡಲಾಗಿದೆ.239 ಬೂತ್ ಗಳಲ್ಲಿ 7950ಪೇಜ್ ಪ್ರಮುಖರು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಪಟ್ಟಿ ಮಾಡಿ ಸವಲತ್ತು ತಲುಪಿಸುವ ನಿಟ್ಟಿನಲ್ಲಿ ಜ.21ರಿಂದ 29ರವೆರೆಗೆ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸರ್ಕಾರದ ಯೋಜನೆಗಳ ಬಗ್ಗೆ ಕರಪತ್ರವನ್ನು ಹಂಚಿಕೆ ಮಾಡುವುದು. ‌ಸಾಧನೆವುಳ್ಳ ಚಿತ್ರದ ಸ್ಟಿಕರ್, ಗೋಡೆ ಬರಹ, ಸದಸ್ಯತ್ವ ಅಭಿಯಾನ, ಪ್ರತಿ ಬೂತ್ ನಲ್ಲಿ ಕನಿಷ್ಠ 250 ಸದಸ್ಯರನ್ನು ಮಾಡಿಸುವುದು. ಮನ್ ಕಿ‌ಬಾತ್, ರೈತರ‌ಬಗ್ಗೆ‌ ಹಾಗೂ ಪ್ರತಿಭೆಗಳನ್ನು ಗುರುತಿಸಿ ವ್ಯಾಪಕವಾಗಿ ಮನ್ ಕಿ‌ಬಾತ್ ಆಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಚಿಕ್ಕಮಗಳೂರಿನಲ್ಲಿ  ಕಾಫಿ, ಕಾಳುಮೆಣಸು, ಏಲಕ್ಕಿ ಬೆಳೆಯುತ್ತಿರುವ ಸಣ್ಣ ರೈತರ ಜಮೀನನ್ನು ಮಂಜೂರಾತಿ ಮಾಡಲಾಗಿದ್ದು, ಅದರನ್ವಯ ಮಲೆನಾಡು ಭಾಗದಲ್ಲಿ ಬಗರ್ ಹುಕುಂ ರೈತರ ಜಮೀನನ್ನು ಸಕ್ರಮಾತಿ ಮಾಡಲು ಸರ್ಕಾರ ಮುಂದಾಗಿದೆ‌ ಎಂದರು.ಜನವರಿ ಅಂತ್ಯದೊಳಗೆ ಮುಖ್ಯ ಮಂತ್ರಿ ಬಸವರಾಜ‌ ಬೊಮ್ಮಾಯಿ ಮೂಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ  ಹಾಗೂ ದಂಡಾವತಿ ‌ನದಿಗೆ ಅಡ್ಡಲಾಗಿ ಸರಣಿ ಬ್ಯಾರೇಜ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.ವಿಸ್ತಾರ್ ಯೋಜನೆಯಡಿ ನಿರ್ಮಾಣವಾಗಲಿರುವ ಕಾಮಗಾರಿಯನ್ನು‌ ಭೂಮಿ‌ಪೂಜೆ‌ ಮಾಡಲಿದ್ದಾರೆ‌ ಎಂದು ತಿಳಿಸಿದರು.ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಅಶೋಕ್ ಶೇಟ್, ಶಿವಕುಮಾರ್, ರಂಗನಾಥ ಮೊಗವೀರ, ಪ್ರಭಾಕರ ಇದ್ದರು.