ನಮೋ ಕೈ ಬಲಪಡಿಸೋಣ :ಚರಂತಿಮಠ


ಬಾಗಲಕೋಟೆ: ಎ. 7 : ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ದೇಶದ ಜನತೆ, ಪಕ್ಷದ ಕಾರ್ಯಕರ್ತರು ಯುವಕರು ಮುಂದೆ ಬರಬೇಕು ಎಂದು ಶಾಸಕ ಡಾ. ವೀರಣ್ಣ ಚರಂತಿಮಠ ಕರೆ ನೀಡಿದರು.
ನಗರದ ಬಿಜೆಪಿ ಕಛೇರಿಯಲ್ಲಿ ಪಕ್ಷದಿಂದ ಆಯೋಜಿಸಿದ್ದ ಬಿಜೆಪಿ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತೀಯ ಜನಸಂಘವನ್ನು ಡಾಕ್ಟರ್ ಶಾಮಪ್ರಸಾದ ಮುಖರ್ಜಿ ಪಂಡಿತ್ ದೀನದಯಾಳ್ ಉಪಾಧ್ಯಾಯರು ಸ್ಥಾಪನೆ ಮಾಡಿ 1977 ರಲ್ಲಿ ಜನತಾ ಪಕ್ಷದಲ್ಲಿ ವಿಲೀನ ಮಾಡಿ ಮುಂದೆ 1980 ರಲ್ಲಿ ಭಾರತೀಯ ಜನತಾ ಪಾರ್ಟಿ ಸ್ಥಾಪನೆಯಾಯಿತು. ಮೊದಲ ಜನತಾ ಪಕ್ಷದ ಅಧಿವೇಶನವನ್ನು ಮುಂಬೈ ನಗರದಲ್ಲಿ ಅಂದಿನ ವಿದೇಶಾಂಗ ಮಂತ್ರಿ ಮಹ್ಮದ್ ಕರೀಮ್ ಚಾಗಲಾ ಉದ್ಘಾಟಿಸಿದರು ಎಂದರು.
ಒಂದು ದೇಶ ಒಂದು ಕಾನೂನು ಜಾರಿಗೆ ತರಲು ಅಂದಿನ ದಿನದಲ್ಲಿ ಚಾಗಲಾ ಅವರ ಹೋರಾಟ ನಡೆದಿತ್ತು. 1980-84ರಲ್ಲಿ ಸಾರ್ವರ್ತಿಕ ಚುನಾವಣೆಯಲ್ಲಿ ದೇಶದಲ್ಲಿ ಕೇವಲ ಎರಡು ಸಂಸದರು ಆಯ್ಕೆಯಾಗಿದ್ದರು. ಒಂದು ಆಂಧ್ರದ ಜಂಗಾರೆಡ್ಡಿ ಇನ್ನೊಬ್ಬ ಗುಜರಾತಿನ ಏ. ಕೆ ಪಟೇಲ್ 2014ರಿಂದ ಸತತ ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮೆಚ್ಚಿ 300 ಸಂಸದರನ್ನು ಹೊಂದಿರುವ ಪಕ್ಷ ದೇಶದಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಇದೆ ಎಂದು ಹೇಳಿದರು.
ಪಕ್ಷದ ಹಿರಿಯರು ಆದರ್ಶ, ಮಾದರಿ ಜೀವನ ನಡೆಸಿದ್ದಾರೆ ಅವರ ಮಾರ್ಗದರ್ಶನದಲ್ಲಿ ನಡೆಯಬೇಕಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಪೂಜಾರಿ ಮಾತನಾಡಿ ಜನಪ್ರತಿನಿಧಿಗಳು, ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವ ಮೂಲಕ ಸಂಘಟಿತರಾಗಿ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ಮಾತನಾಡಿ, ಭಾರತ ಇಂದು ಭಾರತವಾಗಿ ಉಳಿದಿಲ್ಲ ಬದಲಾಗಿ ವಿಶ್ವಗುರುವಾಗಿ ಹೊರ ಹೊಮ್ಮುತ್ತಿದೆ. ಜಗತ್ತಿನ ಎಲ್ಲ ದೇಶಗಳು ಭಾರತದತ್ತ ಆಶಾಭಾವನೆಯಿಂದ ನೋಡುತ್ತೀವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದÀ ಯೋಜನೆಗಳನ್ನು ಮನೆಮನೆಗೆ ತಲುಪಿಸಬೇಕಾಗಿದೆ ಎಂದರು.
ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್ ಪಾಟೀಲ ಮಾತನಾಡಿ, ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿ, ಅವರ ಕೆಲಸದಲ್ಲಿ ಕೈಗೂಡಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡೋಣ ಎಂದು ಹೇಳಿದರು.
ನಗರ ಮಂಡಲ ಅಧ್ಯಕ್ಷ ಬಸವರಾಜ ಅವರಾದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಈರಪ್ಪ ಐಕೂರ ಗುಂಡು ಶಿಂಧೆ, ಶಿವಾನಂದ ಟವಳಿ ,ನಗರ ಪ್ರಧಾನ ಕಾರ್ಯದರ್ಶಿÀ ಬಸವರಾಜ್ ಹುನಗುಂದ, ಉಮೇಶ ಹಂಚಿನಾಳ, ಯುವ ಮೋರ್ಚಾ ಅಧ್ಯಕ್ಷ ಚಂದು ಸರೂರ, ಬಸು ಅಂಬಿಗರ, ಮಲ್ಲಿಕಾರ್ಜುನ ಐಕೂರ, ರಾಜು ಬಳೂಲಮಠ, ವಿಶ್ವನಾಥ ವಿಜಾಪುರ, ಸಂಗಪ್ಪ ಸಜ್ಜನ್ ನಗರಸಭೆಯ ಎಲ್ಲ ಸದಸ್ಯರು, ಪದಾಧಿಕಾರಿಗಳು, ಬೂತ್ ಸಮೀತಿ ಅಧ್ಯಕ್ಷರು ಕಾರ್ಯಕರ್ತರು ಭಾಗವಹಿಸಿದ್ದರು.