ನಮೋಶಿಯವರಿಗೆ ಪರಿಷತ್ ವಿಪಕ್ಷ ನಾಯಕನಾಗಿ ಮಾಡಿ : ಆನಂದ ಕಣಸೂರ್

ಕಲಬುರಗಿ:ಡಿ.21: ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುತ್ಸದಿ ನಾಯಕ ವಿಧಾನಪರಿಷತ್ ಚುನಾವಣೆಯಲ್ಲಿ ಶಿಕ್ಷಕ ವೃಂದದವರ ಮನಗೆದ್ದು ಈಶಾನ್ಯ ಶಿಕ್ಷಕರ ಮತಕ್ಷೇತ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ಶಶೀಲ್ ಜಿ ನಮೋಶಿ ಅವರಿಗೆ ವಿಧಾನ ಪರಿಷತ್ ವಿ ಪಕ್ಷ ನಾಯಕನ್ನಾಗಿ ನೇಮಕ ಮಾಡಬೇಕು ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ಕಲಬುರಗಿ ಜಿಲ್ಲಾ ಸಮಿತಿ ವತಿಯ ಜಿಲ್ಲಾ ಸಹ ಸಂಘಟನೆ ಕಾರ್ಯದರ್ಶಿ ಆನಂದ ಕಣಸೂರ್ ಅವರು ಭಾರತೀಯ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಿಗೆ ಪತ್ರಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.