ನಮೋಭೂತಾತ್ಮ ಭಾಗ -2 ಚಿತ್ರಕ್ಕೆ ಪ್ರೇಕ್ಷಕರಿಂದ ಸ್ಪಂದನೆ; ನಟ ಕೋಮಲ್ 

ದಾವಣಗೆರೆ.ಆ.೯: ಹಾರಾರ್ ಹಾಗೂ ಹ್ಯೂಮರ್ ಕಥಾಹಂದರ ಹೊಂದಿರುವ ನಮೋಭೂತಾತ್ಮ ಭಾಗ -2 ಚಿತ್ರವು 2ನೇ ವಾರವೂ ರಾಜಾದ್ಯಂತ 109 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ನಟ ಕೋಮಲ್ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂಭತ್ತು ವರ್ಷಗಳ ನಂತರ ನಮೋಭೂತಾತ್ಮ ಎರಡನೇ ಭಾಗವನ್ನು ಚಿತ್ರೀಕರಣ ಮಾಡಲಾಗಿದೆ. ಎಲ್ಲಾ ಯಶಸ್ಸಿನ ಕಥೆಗಳ ಹಿಂದೆ ಭಯಾನಕ ಕಥೆಗಳ ಜೊತೆಗೆ ತಮಾಷೆಯು ಉತ್ತಮವಾಗಿ ಸಾಥ್ ನೀಡುತ್ತದೆ ಎನ್ನುವುದಕ್ಕೆ ಹಲವಾರು ಸಿನಿಮಾಗಳ ಯಶಸ್ಸು ಕಂಡಿರುವುದೇ ಉದಾಹರಣೆ ಎಂದರು.ಈ ಚಿತ್ರದ ಬಹುತೇಕ ಚಿತ್ರೀಕರಣ ರಾತ್ರಿ ವೇಳೆಯಲ್ಲಿ ಮಾಡಲಾಗಿದೆ. ಇದಕ್ಕೆ ಕಥೆಯೇ ಕಾರಣ. ಕಳೆದ ವಾರ ರಾಜಾದ್ಯಂತ ಬಿಡುಗಡೆಯಾದ ಸಿನಿಮಾಕ್ಕೆ ಪ್ರೇಕ್ಷಕರಿಂದ ಭಾರಿ ಪ್ರಮಾಣದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಈವರೆಗೆ ನೃತ್ಯ ನಿರ್ದೇಶನ ಮಾಡಿದ್ದ ಮುರುಳಿ ನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಿದರು.ಈ ಚಿತ್ರಕ್ಕೆ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಎಲ್ಲರ ಪ್ರೋತ್ಸಾಹ ಇದೇ ರೀತಿ ನಿರಂತರವಾಗಿ ಇದೇ ರೀತಿ ಇರಲಿ. ಸಿನಿಮಾಕ್ಕಾಗಿಯೇ ನನ್ನ ತೂಕ ಇಳಿಸಿಕೊಂಡಿದ್ದೇನೆ. ಉಳಿದಂತೆ ಸಿನಿಮಾ ಎಲ್ಲಾ ವರ್ಗದವರು ಕುಳಿತು ನೋಡಬಹುದು ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ಸಿನಿಮಾದ ನಿರ್ದೇಶಕ ಮುರುಳಿ, ಮಹಾಂತೇಶ್, ಸಂತೋಷ ಇತರರು ಇದ್ದರು.