ನಮಾಜ್ ಅಡ್ಡಿ-೪೦ ಮಂದಿ ಬಂಧನ

ಗುರ್‌ಗಾಂವ್, ಡಿ.೪- ಗುರ್‌ಗಾಂವ್‌ದ ಸೆಕ್ಟರ್ ೩೭ ಪ್ರದೇಶದಲ್ಲಿ ಶುಕ್ರವಾರದ ನಮಾಜ್ ಸಲ್ಲಿಕೆಗೆ ಬಲಪಂಥೀಯ ಸಂಘಟನೆಗಳು ಮತ್ತೆ ತಡೆಯೊಡ್ಡಿದ್ದು ಸುಮಾರು ೩೦-೪೦ ಮಂದಿಯನ್ನು ಬಂಧಿಸಲಾಗಿದೆ.
ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿ ನಮಾಜ್ ಗೆ ಅಡ್ಡಿಯುಂಟು ಮಾಡಲು ಯತ್ನಿಸಿದರು.
ಕೊನೆಗೆ ಮಧ್ಯಪ್ರವೇಶಿಸಿದ ಪೊಲೀಸರು ಸಂಘಟನೆಗಳ ಸುಮಾರು ೩೦-೪೦ ಮಂದಿಯನ್ನು ಬಂಧಿಸಿ ಮೈದಾನದ ಕೆಲವೆಡೆ ನಮಾಝ್ ಸಲ್ಲಿಕೆಗೆ ಬಿಗು ಭದ್ರತೆಯ ನಡುವೆ ಅವಕಾಶ ಒದಗಿಸಿದರು.
ಈ ಸ್ಥಳದಲ್ಲಿ ಕಳೆದ ಮೂರು ವಾರಗಳಿಂದ ಶುಕ್ರವಾರದ ನಮಾಜ್ ವಿರೋಧಿಸಿ ಪ್ರತಿಭಟನೆಗಳು ಮುಂದುವರಿದಿವೆ.ಇನ್ನೂ ಕಳೆದ ಶುಕ್ರವಾರ ಇಲ್ಲಿ ಸಂಯುಕ್ತ ಹಿಂದು ಸಂಘರ್ಷ ಸಮಿತಿಯ ಸದಸ್ಯರು ಹವನವನ್ನೂ ನಡೆಸಿದ್ದರು.
ಮೂರು ವರ್ಷಗಳ ಹಿಂದೆ ಜಿಲ್ಲಾಡಳಿತ ಗುರ್‌ಗಾಂವ್‌ದ ೧೦೦ ತೆರೆದ ಸ್ಥಳಗಳಲ್ಲಿ ನಮಾಜ್‌ಗೆ ಅವಕಾಶ ನೀಡಿತ್ತು. ಇದೀಗ ೨೦ಕ್ಕೆ ಇಳಿದಿದೆ ಎಂದು ಸ್ಥಳೀಯರು ಹೇಳಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.