ನಮನ ಅಕಾಡೆಮಿಯಿಂದ ಶಿವ ಸ್ಮರಣೆ ನೃತ್ಯ ಜಾಗರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೧೦; ನಮನ ಅಕಾಡೆಮಿ* ಯು ಸತತ ನಾಲ್ಕು ವರ್ಷಗಳಿಂದ ಶಿವರಾತ್ರಿ ಎಂದು ವಿಭಿನ್ನವಾಗಿ ನಡೆಸುತ್ತಿರುವ *ಶಿವ ಸ್ಮರಣೆ ನೃತ್ಯ ಜಾಗರಣೆ* ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ  ರವಿಚಂದ್ರನ್ ಉದ್ಘಾಟಿಸಿ ನಮನ ಅಕಾಡೆಮಿಯವರು ಸದಾ ವಿಶೇಷವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಅವರು ಪ್ರಸ್ತುತ ಪಡಿಸುವ ನೃತ್ಯಗಳು ಬಹಳ ಸೊಗಸಾಗಿ ಮೂಡಿ ಬರುತ್ತವೆ, ನೃತ್ಯಗಳಲ್ಲಿ ಅವರ ಶ್ರಮ ಹಾಗೂ ಸೃಜನಶೀಲತೆ ಕಾಣುತ್ತವೆ. ನೃತ್ಯ ಜಾಗರಣೆಯನ್ನು ಮಾಡುತ್ತಿರುವ ಕಲಾವಿದರಿಗೆ ಆ ಶಿವನು ಒಳ್ಳೆಯದನ್ನು ಮಾಡುವನು ಹಾಗೂ ನಮನ ಅಕಾಡೆಮಿಯು ಅತಿ ಎತ್ತರಕ್ಕೆ ಬೆಳೆದು ಪ್ರಪಂಚದಾದ್ಯಂತ ನಮ್ಮ ಸಂಸ್ಕೃತಿಯನ್ನು ಬಿಂಬಿಸಲಿ ಎಂದು ಹಾರೈಸಿದರು.ಮುಖ್ಯ ಅತಿಥಿಗಳಾದ ಶಂಕರ ಸೇವಾ ಸಂಘದ ಅಧ್ಯಕ್ಷರಾದ ಡಾ. ಬಿ ಟಿ ಅಚ್ಯುತ ರವರು ನಮನ ಅಕಾಡೆಮಿಯ ಈ ವಿಶೇಷ ಕಾರ್ಯಕ್ರಮವು ಪ್ರತಿ ವರ್ಷ ನಮ್ಮ ಶಾರದಾ ಮಂದಿರದಲ್ಲಿ ಉದ್ಘಾಟನೆಗೊಂಡು ಇನ್ನೂ ಮೂರು ದೇವಸ್ಥಾನಗಳಲ್ಲಿ ನಡೆಯಲಿದ್ದು ಪ್ರತಿ ವರ್ಷವೂ ಅಚ್ಚುಕಟ್ಟಾಗಿ ನಡೆಸಿ ಕೊಂಡು ಹೋಗುತ್ತಿರುವರು. ನೃತ್ಯಕ್ಕೆ ಅಧಿಪತಿಯಾದ ಪರಮೇಶ್ವರ, ವಿದ್ಯಾದೇವತೆ ಶಾರದೆ ಹಾಗೂ ವಿಘ್ನ ನಿವಾರಕ ಗಣೇಶನ ಸನ್ನಿಧಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಲಾವಿದರಿಗೆ ಭಗವಂತ ಆಶೀರ್ವದಿಸುವರು ಎಂದರು.ಕಾರ್ಯಕ್ರಮದಲ್ಲಿ ನಮನ ಅಕಾಡೆಮಿಯ ಅಧ್ಯಕ್ಷರಾದ  ಗೋಪಾಲಕೃಷ್ಣ, ಕಾರ್ಯದರ್ಶಿ ಹಾಗೂ ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ಮಾಧವಿ ಡಿ ಕೆ, ಉಪಾಧ್ಯಕ್ಷರಾದ ಆರ್ ಎಲ್ ನಾಗಭೂಷಣ, ನಿರ್ದೇಶಕರಾದ ರಾಮನಾಥ ಪಿ ಸಿ, ಅನಿಲ್ ಬಾರಂಗಲ್, ವೇದಬ್ರಹ್ಮ ನಾರಾಯಣ ಶಾಸ್ತ್ರಿ, ಕಲಾವಿದರಾದ ರವಿ ಹುದ್ದಾರ್, ನೃತ್ಯಸೇವೆ ಸಲ್ಲಿಸಿದ ನೀಲು ಅರೋರ್ ಎಸ್, ಋತು ಹಿರೇಮಠ್, ಸಂಸ್ಕೃತಿ ಆಚಾರ್, ಯುಕ್ತಿ ಎಸ್, ಗೌರಿ ಬಿ ಟಿ, ನಿಧಿ ಪಿ ಧೂಳೇಹೊಳೆ, ಪವನ್ ಕುಮಾರ್ ಎನ್ ಟಿ, ಸಂಜನಾ ಎಸ್ ಉಪಸ್ಥಿತರಿದ್ದರು.