ನಮಗೂ ವಕೀಲರಿದ್ದಾರೆ-ಜಾರಕಿಹೊಳಿ

ಬೆಂಗಳೂರು.ಮಾ೨೬: ರಾಸಲೀಲೆ ಸಿಡಿಯಲ್ಲಿನ ಯುವತಿ ಇಂದು ಮೂರನೇ ವೀಡಿಯೋ ರಿಲೀಸ್ ಮಾಡಿರುವ ಕುರಿತಂತೆ ಮಾತನಾಡಿರುವ ರಮೇಶ್ ಜಾರಕಿಹೊಳಿ ನಮಗೂ ವಕೀಲರಿದ್ದಾರೆ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಬೆತ್ತಲೆ ಪ್ರದರ್ಶನ ಮಾಡಿದವಳಿಗೆ ಇದೇನು ದೊಡ್ಡದಲ್ಲ. ಆಕೆ ವಕೀಲರ ಮೂಲಕ ದೂರು ನೀಡಲಿ. ನಮಗೂ ವಕೀಲರಿದ್ದಾರೆ. ಅವರ ಭೇಟಿಗೆ ಈಗ ತೆರಳುತ್ತಿರುವುದಾಗಿ ತಿಳಿಸಿದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಇದು ನನ್ನ ವಿರುದ್ಧದ ಷಡ್ಯಂತ್ರವಾಗಿದೆ. ಅವಳು ದೂರು ನೀಡಲಿ. ನಾನು ಎದುರಿಸೋದಕ್ಕೆ ರೆಡಿ ಆಗಿದ್ದೇನೆ. ನನ್ನ ಬಳಿಯೂ ವಕೀಲರಿದ್ದಾರೆ. ಏನೂ ಟೆನ್ಷನ್ ಮಾಡಿಕೊಳ್ಳೋ ಅಗತ್ಯವಿಲ್ಲ. ಇನ್ನೂ ಹತ್ತು ಇಂಥ ವೀಡಿಯೋ ಬಿಡಲಿ. ಕಂಪ್ಲೆಂಟ್ ಕೊಡೋ ಹಾಗಿದ್ರೆ ಮೊದಲೇ ಕೊಡಬೇಕಿತ್ತು. ಇನ್ನೂ ಬಹಳಷ್ಟು ವಿಷಗಳು ಹೊರಗೆ ಬರಬೇಕಿದೆ. ಕಾದು ನೋಡಿ ಎಂಬುದಾಗಿ ಹೇಳುವ ಮೂಲಕ, ಸಿಡಿ ಗ್ಯಾಂಗ್ ವಿರುದ್ಧ ಹರಿಹಾಯ್ದರು.