ನಮಗಿರುವುದು ಒಂದೇ ಭೂಮಿ ರಕ್ಷಣೆ ಸರ್ವರ ಹೊಣೆ : ಮೋಹನ್ ಎಸ್ ಪೆÇೀಳ

ಸಂಜೆವಾಣಿ ವಾರ್ತೆ
ಹುಮನಾಬಾದ್:ಏ.24: ನಮಗಿರುವದು ಒಂದೇ ಭೂಮಿ ರಕ್ಷಣೆ ಸರ್ವರ ಹೊಣೆಯಾಗಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಮೋಹನ್ ಎಸ್ ಪೆÇೀಳ ಪಟ್ಟಣದ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ಕಾನೂನು ಸೇವೆಗಳ ಸಮಿತಿ ಹಾಗೂ ಕಂದಾಯ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಭೂಮಿ ದಿನಾಚರಣೆ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು.
ಪರಿಸರ ಅಸಮತೋಲದಿಂದಾಗಿ ಭೂಮಿಯ ಆರೋಗ್ಯ ಹದಗೆಟ್ಟಿದೆ ದಿನೆದಿನೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವುದರಿಂದ ಭೂಮಿಯ ಮಾಲಿನ್ಯವಾಗುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯ ಹೋಗಲಾಡಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧಿಸಲು ಮನವಿ ಮಾಡಿದರು.
ಪಟ್ಟಣದಲ್ಲಿ ಪ್ಲಾಸ್ಟಿಕ ಬಳಕೆ ದಿನೆ ದಿನೆ ಹೆಚ್ಚಾಗುತ್ತಿರುವುದಕ್ಕೆ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದರು. ಪ್ಲಾಸ್ಟಿಕ ಬಳಕೆ ನಿಷೇಧಿಸಲು ಮನವಿ ಮಾಡಿದರು ಪಟ್ಟಣದಲ್ಲಿ ಹಳೆಯ ವಾಹನಗಳಿಂದ ಇಂಗಲ ಆಮ್ಲಾ ಹೊರಸೋಸುವಿಕೆ ಹೆಚ್ಚಾಗುತ್ತಿದೆ ವಾಹನಗಳ ಓಡಾಟಕ್ಕೆ ಓಡಾಟಕ್ಕೆ ಅನುಮತಿ ನೀಡಬಾರದೆಂದು ಸಾರಿಗೆ ಇಲಾಖೆಯವರಿಗೆ ಕಿವಿ ಮಾತು ಹೇಳಿದರು,
ತಹಶೀಲ್ದಾರ್ ಅಂಜುಮ್ ತಬ್ಸಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದಿನದಿಂದ ದಿನಕ್ಕೆ ಭೂತಾಪಮಾನ ಹೆಚ್ಚಳವಾಗುತ್ತಿದೆ. ಹಲವಾರು ಪ್ರಕೃತಿ ವಿಕೋಪಗಳು ಸಂಭವಿಸಲಾಂಬಿಸಿವೆ. ಭೂತಾಪಮಾನ ಕಡಿಮೆ ಮಾಡಲು ಅತ್ಯಧಿಕ ಪ್ರಮಾಣದ ಮರ ಗಿಡಗಳು ಬೆಳೆಸಬೇಕೆಂದು ಕರೆ ನೀಡಿದರು.
ಪರಿಸರವಾದಿ ಶೈಲೇಂದ್ರ ಕಾವಡಿ ಭೂಮಿ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಪ್ಲಾಸ್ಟಿಕ್ ಮಾಲಿನ್ಯ ನಮ್ಮ ನಮ್ಮ ಭೂ ಗ್ರಹದ ಮೇಲೆ ಪರಿಣಾಮ ಬೀರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಕಾರಣದಿಂದ 2024ನೇ ವರ್ಷ ಭೂ ದಿನಾಚರಣೆ ಘೋಷ ವಾಕ್ಯವಾದ ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ ಯಾಗಿದೆ. ಒಂದು ಅಂದಾಜಿನ ಪ್ರಕಾರ 2050ರ ಹೊತ್ತಿಗೆ ಸಾಗರ ಸಮುದ್ರಗಳಲ್ಲಿ ಮೀನುಗಳಿಗಿಂತ ಪ್ಲಾಸ್ಟಿಕ್ ಪ್ರಮಾಣ ಹೆಚ್ಚುತ್ತದೆ ಎಂದ ಕಾವಡಿ ಕಳವಳ ವ್ಯಕ್ತಪಡಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀನಿವಾಸ್ ಪಾಟೀಲ್. ಮಂಜುನಾಥ್ ರೆಡ್ಡಿ, ತಾಲೂಕ ಪಂಚಾಯತ್ ಕಾರ್ಯನಿರ್ವಾಧಿಕಾರಿ ಶಿವಲೀಲಾ, ಡಾ ಗೋವಿಂದ್, ತಾಲೂಕ ಅನುಷ್ಟಾಣಾಧಿಕಾರಿಗಳು ಉಪಸಿತರಿದ್ದರು ಕಿಶೋರ ಕುಲಕಂರ್ಣಿ ಕಾರ್ಯಕ್ರಮ ನಿರ್ಮಿಸಿ ವಂದಿಸಿದರು.