ನವದೆಹಲಿ,ಜು.೩೦- ಇತ್ತೀಚೆಗಷ್ಟೇ ಚಂದ್ರಯಾನ-೩ ಉಪಗ್ರಹ ಯಶಸ್ವಿಯಾಗಿ ಉಡಾವಣೆ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಇಂದು ಬೆಳಗ್ಗೆ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ೭ ಉಪಗ್ರಹಗಳನ್ನು ಹೊತ್ತ ಇಸ್ರೋ ರಾಕೆಟ್ ಉಡಾವಣೆ ಮಾಡಿದೆ.
ಹಗಲು ಮತ್ತು ರಾತ್ರಿಯಲ್ಲಿ ಹವಾಮಾನದ ಕುರಿತು ಎಲ್ಲಾ ರೀತಿಯ ಮಾಹಿತಿ ಒದಗಿಸುವ ಉದ್ದೇಶದಿಂದ ಇಸ್ರೋ ಉಪಗ್ರಹವನ್ನು ಉಡಾವಣೆ ಮಾಡಿದೆ. ಪಿಎಸ್‌ಎಲ್‌ವಿ -ಸಿ೫೬ ಅನ್ನು ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್ ನಿಂದ ಬೆಳಗ್ಗೆ ೬.೩೦ಕ್ಕೆ ಉಡಾವಣೆ ಮಾಡಲಾಯಿತು ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಸ್‌ಎಲ್‌ವಿ ಫ್ಲೈಟ್ ಕೋರ್ ಅಲೋನ್ ಕಾನ್ಫಿಗರೇಶನ್ ಬಳಸಿಕೊಂಡು ಹವಾಮಾನ ಮುನ್ಸೂಚನೆಯ ಮಾಹಿತಿ ನೀಡಲಿದೆ. ಇದರ ಜೊತೆಗೆ ಕಕ್ಷೆ ಖಚಿತಪಡಿಸಿಕೊಳ್ಳಲು ಎಲ್ಲಾ ಉಪಗ್ರಹ ತಲುಪಿದ ನಂತರ ರಾಕೆಟ್‌ನ ಕಕ್ಷೆಯಲ್ಲಿ ಇಳಿಯಲಿದೆ.
ಇದರ ಜೊತೆಗೆ ಸಿಂಗಾಪುರಕ್ಕೆ ಸೇರಿದ ಆರು ಸಹ-ಪ್ರಯಾಣಿಕ ಗ್ರಾಹಕ ಉಪಗ್ರಹಗಳೂ ಇವೆ. ಎಲ್ಲಾ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ನಭಕ್ಕೆ ಜಿಗಿದಿವೆ ಎಂದು ಇಸ್ರೋ ಅಧಿಕಾರಿಗಳು ಮಾಹಿತಿ ನೀಡಿವೆ.
ಡಿಎಸ್- ಎಸ್ ಎಆರ್ ಉಪಗ್ರಹವನ್ನು ಡಿಎಸ್‌ಟಿಎ -ಸಿಂಗಾಪೂರ್ ಸರ್ಕಾರವನ್ನು ಪ್ರತಿನಿಧಿಸುತ್ತದೆ ಮತ್ತು ಎಸ್ ಟಿ ಇಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಎಸ್ ಟಿ ಇಂಜಿನಿಯರಿಂಗ್ ತಮ್ಮ ವಾಣಿಜ್ಯ ಗ್ರಾಹಕರಿಗೆ ಬಹು-ಮಾದರಿ ಮತ್ತು ಹೆಚ್ಚಿನ ಪ್ರತಿಕ್ರಿಯೆ ಚಿತ್ರಣ ಮತ್ತು ಜಿಯೋಸ್ಪೇಷಿಯಲ್ ಸೇವೆಗಳಿಗಾಗಿ ಇದನ್ನು ಬಳಸುತ್ತದೆ.
ಚಂದ್ರಯಾನ-೩ ಯಶಸ್ವಿ ಉಡಾವಣೆ ಬಳಿಕ ಮತ್ತೊಂದು ಉಡಾವಣೆ
- ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ
- ಬೆಳಗ್ಗೆ ೬.೩೦ಕ್ಕೆ ನಭಕ್ಕೆ ಜಿಗಿದ ರಾಕೆಟ್
- ಎಲ್ಲಾ ಮಾದರಿಯ ಹವಾಮಾನ ಮಾಹಿತಿ ನೀಡಲು ನೆರವು
- ಸಿಂಗಪುರದ ಉಪಗ್ರಹ ಸೇರಿ ೭ ಉಪ್ರಗ್ರಹಗಳ ಉಡಾವಣೆ