ನಬಾರ್ಡ ವತಿಯಿಂದ ತರಬೇತಿ

ಬೀದರ,ಜೂ 22: ನಗರದ ಡಾ.ಗುರುಪಾದಪ್ಪಾ ನಾಗಮಾರಪಳ್ಳಿ ಸಹಾರ್ದ
ತರಬೇತಿ ಸಂಸ್ಥೆಯಲ್ಲಿ ಧಾರವಾಡ, ಬಾಗಲಕೋಟೆ, ಬಳ್ಳಾರಿಜಿಲ್ಲೆಗಳ ಪ್ಯಾಕ್ಸಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತುನಿರ್ದೇಶಕ ಮಂಡಳಿಗೆ ನಬಾರ್ಡ ವತಿಯಿಂದ ತರಬೇತಿ ಆಯೋಜಿಸಲಾಯಿತು. ತರಬೇತಿಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಎಸ್ ಪಾಟೀಲ ಗಾದಗಿ ಅವರು ಉದ್ಘಾಟಿಸಿ ಮಾತನಾಡಿ,ಸಮಾಜದ ಕಟ್ಟಕಡೆಯ
ವ್ಯಕ್ತಿಗೂ ಸಹಾಯ ಮಾಡುವುದೇ ಸಹಕಾರಿ ಸಂಸ್ಥೆಗಳ
ವೈಶಿಷ್ಟವಾಗಿದೆ. ಸಹಕಾರ ಕ್ಷೇತ್ರದಲ್ಲಿ ಸೇವೆಯೊಂದಿಗೆ ಲಾಭದ
ಗುರಿಯನ್ನಿಟ್ಟುಕೊಂಡು ಬಡವರ, ದುರ್ಬಲರ ಧ್ವನಿಯಾಗಿರಬೇಕು.
ಇದಕ್ಕಾಗಿ ಪಾರದರ್ಶಕ ವ್ಯವಸ್ಥೆ, ಅನುಭವಿ ಆಡಳಿತ, ವಿಶಾಲ
ಚಿಂತನೆಗಳು ಮುಖ್ಯವಾಗಿವೆ. ಸಹಕಾರ ಸಂಸ್ಥೆಗಳಲ್ಲಿ ಜನರ
ಅನುಭವವೇ ಅರ್ಹತೆಯಾಗಿದ್ದು, ವಿದ್ಯಾರ್ಹತೆ ಎನ್ನುವುದು
ಮಾಡುವ ಕೆಲಸಕ್ಕೆ ಪೂರಕವಾದ ಸಂಗತಿಯಷ್ಟೇ ಆಗಿದೆ.
ಸಂಸ್ಥೆಗಳಲ್ಲಿ ಅನುಭವಿ ಜನರಿಗೆ ಹೊಸ ದೃಷ್ಟಿಕೋನಗಳನ್ನು
ರೂಢಿಸಿಕೊಳ್ಳಲು ತರಬೇತಿಗಳು ಅಗತ್ಯವಾಗಿದ್ದು ನಬಾರ್ಡನ
ವತಿಯಿಂದ ತರಬೇತಿಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಗಾದಗಿ ಸಹಕಾರ ಸಂಘದ ಅಧ್ಯಕ್ಷರಾಗಿ
ಆಯ್ಕೆಯಾಗಿರುವ ವಿಜಯ ಕುಮಾರ ಪಾಟೀಲ ಅವರನ್ನುಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರುಬೀದರ್ ಡಿ.ಸಿ.ಸಿ ಬ್ಯಾಂಕ್‍ಗ್ರಾಹಕ ಸೇವೆಗಳನ್ನು ನೀಡುವಲ್ಲಿ ಮತ್ತು ಪ್ಯಾಕ್ಸಗಳಿಗೆಮಾರ್ಗದರ್ಶನ ನೀಡುವುದರಲ್ಲಿ, ಮಹಿಳಾ ಸ್ವ-ಸಹಾಯಸಂಘಗಳಿಗೆ ಆರ್ಥಿಕ ನೆರವು ನೀಡುವುದರಲ್ಲಿ ಕ್ರಾಂತಿಯನ್ನೇಉಂಟುಮಾಡಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ವಿಠಲ ರೆಡ್ಡಿ
ಯಡಮಲ್ಲೆಯವರು ಪ್ಯಾಕ್ಸಗಳ ಮೂಲಕ ರೈತರಿಗೆ ನೀಡುವ
ಜನೋಪಯೋಗಿ ಸೇವೆಗಳು ಸಂಸ್ಥೆ ಮೇಲಿನವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತವೆ. ಇದರಿಂದ ಸಂಘಕ್ಕೆ ಹೆಚ್ಚಿನ ಠೇವಣಿ ಬರುತ್ತದೆ. ಆರ್ಥಿಕ ವ್ಯವಹಾರ ಹೆಚ್ಚುತ್ತದೆ. ಜನಪರವಾಗಿ ಕಮ್ಮಿ ಖರ್ಚಿನಲ್ಲಿ ಮನೆ ಬಾಗಿಲಿಗೆ ಉತ್ತಮಗುಣಮಟ್ಟದ ಸೇವೆ ನೀಡುವ ಕೆಲಸ ಸಹಕಾರಿ ರಂಗದಿಂದ ಮಾತ್ರಸಾಧ್ಯಎಂದು ಹೇಳಿದರು.ತರಬೇತಿ ಉದ್ದೇಶಗಳನ್ನು ವಿವರಿಸಿದ ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭುರವರು ಸರಕಾರದಿಂದ ಅಭಿವೃದ್ಧಿ -ಸಹಕಾರದಿಂದ ಸಮೃದ್ಧಿ ಎಂಬ ದೃಷ್ಟಿಕೋನದಿಂದ ಸಹಕಾರಿರಂಗವು ಸರಕಾರದ ಯೋಜನೆಗಳೊಂದಿಗೆ ಕೆಲಸ ಮಾಡುತ್ತಿದೆ.ಹಳ್ಳಿಗಳಲ್ಲಿರುವ ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಿ
ಸಮಾನತೆ ತರುವಲ್ಲಿ ಸಹಕಾರ ಸಂಘಗಳು ಸಹಕಾರಿಯಾಗಿದೆ.
ಜನರ ನಡುವೆ ಭ್ರಾತೃತ್ವ, ಸಹೋದರತೆ, ಪರಸ್ಪರ ಸಹಾಯಮಾಡುವ ಮನೋಭಾವನೆ ಬೆಳೆಸುವಲ್ಲಿ ಸ್ವಯಂ ಸೇವಾಭಾವನೆಯನ್ನು ಪ್ರಚೋದಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಗಮನಾರ್ಹವಾಗಿದೆ ಎಂದು ನುಡಿದರು.
ಸಮಾರಂಭದಲ್ಲಿ ಧಾರವಾಡದ ಹಗೇಧಾಳಿನ ಅಧ್ಯಕ್ಷೆರೇಣುಕಾ ಬಾಗಲಕೋಟೆ ಸಂಘದ ಅಧ್ಯಕ್ಷಪ್ರಕಾಶ ಪಾಟೀಲ ಮತ್ತಿತ್ತರರು ಉಪಸ್ಥಿತರಿದ್ದರು.ಡಾ ಗುರುಪಾದಪ್ಪಾ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಉಪನ್ಯಾಸಕ ಎಸ್.ಜಿಪಾಟೀಲ ವಂದಿಸಿದರು. ಅನಿಲ ಪಿ ಮತ್ತು ಅಪ್ಪಣ್ಣ ಕಾರ್ಯಕ್ರಮ
ನಿರ್ವಹಿಸಿದರು.