ನನ್ನ ಹಾಗೂ ಸವದಿ ನಡುವೆ ಯಾವುದೇ ಒಪ್ಪಂದವಾಗಿಲ್ಲ: ಶಾಸಕ ಕುಮಠಳ್ಳಿ

ಅಥಣಿ :ಮಾ.17: ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿ ನಾನು ಪಕ್ಷಕ್ಕೆ ಬಂದಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶಕ್ಕಲ್ಲ. ನಮ್ಮ ಹಾಗೂ ವಿ.ಪ ಸದಸ್ಯ ಲಕ್ಷ್ಮಣ ಸವದಿ ಮಧ್ಯೆ ಎಲ್ಲಿಯೂ ಯಾವುದೇ ರೀತಿಯಾದ ಒಪ್ಪಂದವಾಗಿಲ್ಲ ಹಾಗೂ ಯಾವುದೇ ರೀತಿಯ ಭಿನ್ನಾಭಿಪ್ರಾಯವೂ ಇಲ್ಲ. ಸವದಿ ಹಾಗೂ ಹೈಕಮಾಂಡ್ ಜೊತೆ ಸ್ಪಷ್ಟವಾಗಿ ಮಾತನಾಡಿ ನಾವು ಪಕ್ಷಕ್ಕೆ ಬಂದಿದ್ದೇವೆ. ಈಗಲೂ ಕೂಡ ನಾವು ಹೈಕಮಾಂಡ್ ನಿರ್ಣಯಕ್ಕೆ ಬದ್ಧ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು,
ಅಥಣಿ ಗ್ರಾಮೀಣ ಶಿವಯೋಗಿ ನಗರದಲ್ಲಿ
3 ಕೋಟಿ 50 ಲಕ್ಷ ರೂ ವೆಚ್ಚದ ಜೆಜೆಎಂ ಕಾಮಗಾರಿ, ಸಂಕ್ಕೋನಟ್ಟಿ ಗ್ರಾಮದಲ್ಲಿ 1 ಕೋಟಿ 65 ಲಕ್ಷ ರೂ ವೆಚ್ಚದ ಜೆಜೆಎಂ ಕಾಮಗಾರಿ, 75 ಲಕ್ಷ ರೂ, ಎಫ್ ಎಸ್,ಟಿಪಿಸಿ ಮಲ ಹೂಳುವ ಸಂಸ್ಕರಣಾ ಘಟಕದ ಕಾಮಗಾರಿ,1 ಕೋಟಿ 5 ಲಕ್ಷ ರೂ ವೆಚ್ಚದ ವಡ್ರಟ್ಟಿ- ಸಿನ್ಮಾಳ ಮುಖ್ಯ ರಸ್ತೆ ವರೆಗೆ ರಸ್ತೆ ಕಾಮಗಾರಿ, ತಂಗಡಿ ಗ್ರಾಮದಲ್ಲಿ 24 ಲಕ್ಷ ರೂ ವೆಚ್ಚದ ಸರ್ಕಾರಿ ಪ್ರೌಡ ಶಾಲೆಯ 2 ಕೊಠಡಿ ಕಾಮಗಾರಿ, ಐಗಳಿ ಗ್ರಾಮದಲ್ಲಿ 3 ಕೋಟಿ 50 ಲಕ್ಷ ರೂ ವೆಚ್ಚದ ಜೆಜೆಎಂ ಕಾಮಗಾರಿ,13 ಲಕ್ಷ 90 ಸಾವಿರ ರೂ ವೆಚ್ಚದ ಮಹಾವೀರ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಯ 1 ಶಾಲಾ ಕೊಠಡಿ ಕಾಮಗಾರಿ ಹಾಗೂ ಕಕಮರಿ ಗ್ರಾಮದಲ್ಲಿ 3 ಕೋಟಿ ರೂ ವೆಚ್ಚದ ಜೆಜೆಎಂ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ
ಕೆಲವು ಮಾಧ್ಯಮದಲ್ಲಿ ಕೆಲ ದಿನಗಳಿಂದ ನಮ್ಮ ಹಾಗೂ ಸವದಿ ಅವರ ಮಧ್ಯೆ ಒಪ್ಪಂದವಾಗಿದೆ ಎಂದು ಬಿತ್ತರಗೊಳ್ಳುತ್ತಿದೆ. ಅದು ಅವರು ಹೇಳಿದ್ದೂ ಅಲ್ಲ. ನಾನು ಹೇಳಿದ್ದೂ ಅಲ್ಲ. ಈ ವಿಚಾರ ಹೈಕಮಾಂಡ್ ಮಟ್ಟದಲ್ಲಿದೆ. ಪಕ್ಷದ ನಿರ್ಣಯಕ್ಕೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಗುತ್ತಿಗೆದಾರರಾದ ನಾನಾಸಾಬ ಅವತಾಡೆ, ಎಮ್ ಪಿ ಐಗಳಿ, ಡಿ.ಸಿ ನಾಯಿಕ, ಸಂತೋಷ ಕಕಮರಿ, ತಿಪ್ಪಣ್ಣ ಭಜಂತ್ರಿ, ಲಕ್ಷ್ಮಣ ತೆಲಸಂಗ, ಎಸ್ ಬಿ ಬೆವನೂರ, ಶ್ರೀಮಂತ ಸಲಗರ, ಶಿವಾನಂದ ಸಿಂಧೂರ, ಮಲ್ಲು ಕುಂಬಾರ ಮುಖಂಡರಾದ ಸಿ ಎಸ್ ನೇಮಗೌಡ, ಗ್ರಾಪಂ ಅಧ್ಯಕ್ಷೆ ರಾಜಶ್ರೀ ಪಾಟೀಲ, ಯಲ್ಲಪ್ಪ ಮಿರ್ಜಿ, ಗುರಪ್ಪಾ ದಾಶ್ಯಾಳ, ಬಸವರಾಜ ಬಿರಾದಾರ, ಅಪ್ಪಾಸಾಬ ಪಾಟೀಲ, ನಿಂಗಪ್ಪ ನಂದೇಶ್ವರ, ಅನಿಲ ಭಜಂತ್ರಿ, ಬಸವರಾಜ ಹಳ್ಳದಮಳ, ಮೋಹನ ಸರಗರ ಸೇರಿದಂತೆ ಇತರರು ಉಪಸ್ಥಿತರಿದ್ದರು,