ನನ್ನ ಹಾಗೂ ಸವದಿಯವರ ಮಧ್ಯೆ ಭಿನ್ನಾಭಿಪ್ರಾಯವಿಲ್ಲ, ಅವರು ಮುಖ್ಯಮಂತ್ರಿ ಯಾದರೆ ನನಗೆ ಸಂತೋಷ : ಶಾಸಕ ಮಹೇಶ ಕುಮಟಳ್ಳಿ

ಅಥಣಿ : ಜ.22:ಕ್ಷೇತ್ರದ ಜನ ನನ್ನಿಂದ ಅಭಿವೃದ್ದಿ ಬಯಸಿದ್ದಾರೆ ಅವರ ಅಪೇಕ್ಷೇಯಂತೆ ನಾನು ಅಥಣಿ ಮತಕ್ಷೇತ್ರದ ಸವಾಂಗೀಣ ಅಬಿವೃದ್ದಿ ಮಾಡುತ್ತಿದ್ದೇನೆ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಮಾಡುವುದರ ಜೊತೆಗೆ ಗ್ರಾಮಗಳ ಮೂಲಭೂತ ಸೌಲಭ್ಯಗಳನ್ನು ಈಡೇರಿಸಿ ಜನರ ವಿಶ್ವಾಸವನ್ನ ಗಳಿಸುವುದೇ ನನ್ನ ಕರ್ತವ್ಯವಾಗಿದೆ ಎಂದು ಅಥಣಿ ಶಾಸಕ ಹಾಗೂ ಕರ್ನಾಟಕ ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಹೇಳಿದರು.
ಅವರು ತಾಲೂಕಿನ ಶೇಗುಣಸಿ ಹಾಗೂ ಅರಟಾಳ ಗ್ರಾಮಗಳಲ್ಲಿ 4.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದಾದರೆ ನನ್ನಷ್ಟು ಸಂತೋಷ ಯಾರಿಗಿಲ್ಲ ನಮ್ಮವರೇ ಒಬ್ಬರು ರಾಜ್ಯದ ಉನ್ನತ ಸ್ಥಾನಕ್ಕೇರುತ್ತಾರೆ ಎಂದರೆ ನನಗೆ ಸಂತೋಷವಾಗುತ್ತದೆ, ಬಿಜೆಪಿ ಹೈ ಕಮಾಂಡ್ ಯಾರಿಗಾದರೂ ಟಿಕೇಟ್ ನೀಡಲಿ ನಾವಿಬ್ಬರೂ ಕೂಡ ಬಿಜೆಪಿ ಪರ ಕೆಲಸ ಮಾಡುತ್ತೇವೆ ಇದರಲ್ಲಿ ನಮ್ಮಿಬ್ಬರಲ್ಲಿ ಅಷ್ಟೇ ಅಲ್ಲ ನಮ್ಮ ಕಾರ್ಯಕರ್ತರ ಮಧ್ಯೆಯೂ ಕೂಡ ಯಾವುದೇ ಗೊಂದಲ ಇಲ್ಲ ಎಂದ ಅವರು ಅಥಣಿ ಮತಕ್ಷೇತ್ರದ ಪೂರ್ವ ಭಾಗದ ಕೊಟ್ಟಲಗಿ ಸುತ್ತಮುತ್ತ ನೀರಾವರಿ ಒದಗಿಸುವ 1486.41 ಕೋಟಿ ರೂ.ಗಳ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಫೆಬ್ರುವರಿ ಕೊನೆ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದರು. .
ಶಾಸಕ ಮಹೇಶ ಕುಮಠಳ್ಳಿಯವರು ಶೇಗುಣಸಿ ಗ್ರಾಮದಲ್ಲಿ 20 ಲಕ್ಷ ವೆಚ್ಚದ ಸಿದ್ಧಾರೂಢ ದೇವಸ್ಥಾನ ಸಮುದಾಯ ಭವನ, 150 ಲಕ್ಷ ವೆಚ್ಚದಲ್ಲಿ ಕೂಡನ ಹಳ್ಳ ರಸ್ತೆ ಸುಧಾರಣೆ, 5 ಲಕ್ಷ ವೆಚ್ಚದ ಕೂಡನಹಳ್ಳ ಎಲ್ಲಮ್ಮ ದೇವಸ್ಥಾನ ಹತ್ತಿರ ಸಮುದಾಯ ಭವನ, 30 ಲಕ್ಷ ವೆಚ್ಚದ ಶೇಗುಣಸಿ-ಶಂಕ್ರಟ್ಟಿ ಒಳ ರಸ್ತೆ ಸುಧಾರಣೆ ಹಾಗೂ ಅರಟಾಳ ಗ್ರಾಮದಲ್ಲಿ 12 ಲಕ್ಷ ವೆಚ್ಚದ ಮಾಳಿಂಗೇಶ್ವರ ದೇವಸ್ಥಾನ ಸಮುದಾಯ ಭವನ ಹಾಗೂ 203 ಲಕ್ಷ ವೆಚ್ಚದ ಜಲಜೀವನ ಮೀಶನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಧುರೀಣ ಈ ವೇಳೆ ವಿವೇಕ ನಾರಗೊಂಡ, ರಾಜು ಮರಡಿ, ಬಸವರಾಜ ಮಗದುಮ್, ಶಿವಪುತ್ರ ನಾಯಿಕ, ಲಕ್ಷ್ಮಣ ಆಲೂರ, ಅಣ್ಣಪ್ಪ ಹಳ್ಳೂರ, ಮಹಾವೀರ ಕೆಮ್ಮಣ್ಣವರ, ರವಿ ಶಿರಗುಪ್ಪಿ, ಶ್ರೀಶೈಲ ಮೋಪಗಾರ, ಸಂಗಣ್ಣ ಸವದತ್ತಿ, ನಿಂಗಪ್ಪ ನಂದೇಶ್ವರ, ಶಿವಾನಂದ ಚೌಗಲಾ, ಶಿವಪ್ಪ ಹಟ್ಟಿ, ಶಂಕರ ಹಟ್ಟಿ, ಅಣ್ಣಪ್ಪ ಕಾಂಬಳೆ, ಶಿವಲಿಂಗಪ್ಪ ಜಂಬಗಿ, ದುಂಡನಗೌಡ ಪಾಟೀಲ, ಶಿವಪ್ಪ ಪೂಜಾರಿ , ನಿಂಗಪ್ಪ ಪೂಜಾರಿ ಹಾಗೂ ಶೇಗುಣಸಿ ಮತ್ತು ಅರಟಾಳ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.


ನಾನು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಒಂದು ವೇಳೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ಟಿಕೇಟ್ ನೀಡಿದರೂ ಕೂಡ ನಾನು ಹಾಗೂ ಅವರು ಜವಾಬ್ದಾರಿಯಿಂದ ಚುನಾವಣೆಯ ಕೆಲಸ ನಿರ್ವಹಿಸುತ್ತೇವೆ ಇದರಲ್ಲಿ ಯಾವುದೇ ಸಂಶಯ ಇಲ್ಲ. ನನ್ನ ಹಾಗೂ ಲಕ್ಷ್ಮಣ ಸವದಿಯವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಆದರೆ ಕೆಲ ಸಂದರ್ಭದಗಳಲ್ಲಿ ನಮ್ಮ ಹಾಗೂ ಅವರ ಅಭಿಮಾನಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನದಿಂದ ಪೆÇಸ್ಟ್ ಮಾಡುತ್ತಾರೆ ಹೊರತು ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ

          ಮಹೇಶ ಕುಮಟಳ್ಳಿ. 

ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ