ನನ್ನ ಹತ್ತಿರವೂ ಪೆನ್ ಡ್ರೈವ್ ಇದೆ, ಎಚ್ಡಿಕೆಗೆ ಶಾಸಕ ಲಕ್ಷ್ಮಣ ಸವದಿ ತಿರುಗೇಟು

ಅಥಣಿ : ಆ.8:ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ, ವಿರೋಧ ಪಕ್ಷ ಇದೆಯೆಂದು ತೋರಿಸಲು ಮಾಜಿ ಸಿಎಂ ಕುಮಾರಸ್ವಾಮಿ ಅವರು ಪೆನ್ ಡ್ರೈವ್ ಬಗ್ಗೆ ಮಾತನಾಡಿದ್ದಾರೆ, ಹೊರತು ಪುರಾವೆಗಳಿಲ್ಲ, ನನ್ನ ಹತ್ತಿರ ಕೂಡಾ ಪೆನ್ ಡ್ರೈವ್ ಇದೆ ಸಂದರ್ಭ ಬಂದರೆ ಬಿಡುಗಡೆ ಮಾಡಲಾಗುವುದು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಮಾಜಿ ಸಿಎಂ ಕುಮಾರಸ್ವಾಮಿ ಪೆನ್ ಡ್ರೈವ್ ವಿಚಾರಕ್ಕೆ ಸವದಿ ತಿರುಗೇಟು ನೀಡಿದರು.
ಅವರು ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಮಾದ್ಯಮದಲ್ಲಿ ಕುಮಾರಸ್ವಾಮಿ ಅವರ ಮಾತನ್ನು ಕೇಳಿದ್ದೇನೆ ಹಾಗೂ ನೋಡಿದ್ದೇನೆ, ತುಂಬಾ ಕಡೆ ಪೆನ್ ಡ್ರೈವ್ ಇದ್ದಾವೆ ನನ್ನ ಹತ್ತಿರ ಕೂಡ ಒಂದು ಪೆನ್ ಡ್ರೈವ್ ಇದೆ ಕಾಲಾನುಸಾರ, ಸಂದರ್ಭಾನುಸಾರ ಬಿಡುಗಡೆ ಮಾಡಲಾಗುವುದು ಎಂದರು