ನನ್ನ ಶಕ್ತಿ ಇರುವವರೆಗೂ ಬಡವರಿಗಾಗಿ ಶ್ರಮಿಸುತ್ತೇನೆ; ಸಿ .ಎನ್ ಅಕ್ಮಲ್

ಚಿಕ್ಕಮಗಳೂರು.ಜೂ.೩;  ಮಾಜಿ ನಗರಸಭಾ ಉಪಾಧ್ಯಕ್ಷ ದಿವಂಗತ ಟಿಲ್ಲು ಸಾಬ್ ರವರ ಕುಟುಂಬ  ಮತ್ತು  ಅಂಡೆ ಚತ್ತರ್ ಯುವಕರಿಂದ  ಸಿ ಎನ್ ಅಕ್ಮಲ್  ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು  ಸಭೆಯನ್ನುದ್ದೇಶಿಸಿ  ಮಾತನಾಡಿದ್ದ ಅಕ್ಮಲ್ ರವರು   ಕೊರೊನಾ ಎರಡನೆ ಅಲೆಯಲ್ಲಿ ಸುಮಾರು ಸಾವುನೋವುಗಳನ್ನು ಸಾರ್ವಜನಿಕರು ಕಂಡು ಆತಂಕದಲ್ಲಿದ್ದಾರೆ ಹಾಗೂ  ಲಾಕ್  ಡೌನ್  ಕಾರಣದಿಂದ ಕೂಲಿ ಕಾರ್ಮಿಕರು ನಿರ್ಗತಿಕರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ ಕೆಲಸಕ್ಕೆ ಹೋಗದೆ ಆಹಾರ ಧಾನ್ಯ ಪದಾರ್ಥಗಳನ್ನು ಪಡೆದುಕೊಳ್ಳಲು ಹಲವು ಸಮಸ್ಯೆಗಳಾಗಿವೆ  ಇಂತಹ ಸಂದರ್ಭದಲ್ಲಿ  ಬಡವರ ಹಸಿವನ್ನು ತಿಳಿದು  ತಿಳಿಯದ ಹಾಗೆ ಕೂರಲು ಸಾಧ್ಯವಿಲ್ಲ ಇದುವರೆಗೂ ದೇವರು ನಮ್ಮನ್ನು ಆರೋಗ್ಯ ಐಶ್ವರ್ಯ ನೀಡಿದ್ದಾನೆ ಇದು ಬಡವರಿಗಾಗಿ  ಮೀಸಲಿಡಬೇಕೆಂದು ಮನಸ್ಸು ಮಾಡಿದ್ದೇನೆ.ನನ್ನ ದೇಹದಲ್ಲಿ ಶಕ್ತಿ ಇರುವವರೆಗೂ ಬಡವರಿಗಾಗಿ ಶ್ರಮಿಸುತ್ತೇನೆ ನಮ್ಮ ಜನಾಂಗದವರು ಜಾತಿ ಧರ್ಮವನ್ನು ಬಿಟ್ಟು ಪ್ರಾಮಾಣಿಕ ವಾಗಿ ಮಾನವೀಯ ಧರ್ಮಕ್ಕೆ ಬೆಲೆ ಕೊಡಬೇಕು ಹಸಿವಿದ್ದವರಿಗೆ ಆಹಾರವನ್ನು ನೀಡಬೇಕು ಕಷ್ಟದಲ್ಲಿದ್ದವರಿಗೆ ಕೂಡಲೇ ಸ್ಪಂದಿಸಬೇಕು ಸ್ನೇಹಿತರ ಕೈಯಲ್ಲಿ ಸಹಾಯ ಮಾಡಲು ಸಾಧ್ಯವಿಲ್ಲವಾದರೆ  ನನಗೆ ಮಾಹಿತಿಯನ್ನು ನೀಡಬೇಕೆಂದು ಸಿ ಎನ್ ಅಕ್ಮಲ್ ರವರು ಮನವಿ ಮಾಡಿಕೊಂಡರು. ಮಾಜಿ ನಗರಸಭಾ ಉಪಾಧ್ಯಕ್ಷ ದಿವಂಗತ    ಟಿಲ್ಲು     ಸಾಬ್ ರವರ ಪುತ್ರ ವಸೀಮ್ ಮಾತನಾಡಿ  ಇದುವರೆಗೂ ಸಿ ಎನ್ ಅಕ್ಮಲ್ ರವರು  ಸಾವಿರಾರು ಆಹಾರಧಾನ್ಯ ಕಿಟ್ ಗಳನ್ನು ನೀಡಿದ್ದಾರೆ  ಜೊತೆಯಲ್ಲಿ ತನ್ನ ಸ್ವಂತ ಕಟ್ಟಡವನ್ನು ಕೋವಿಡ್ ಕೇರ್   ಸೆಂಟರ್ ಆಗಿ ಬಳಸಿಕೊಳ್ಳಲು  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ  ನಲವತ್ತೈದು ಕೊಠಡಿಗಳಿರುವ ಕಟ್ಟಡ ವನ್ನು  ನಗರದ ಜನರ ಆರೋಗ್ಯಕ್ಕಾಗಿ  ಅರ್ಪಿಸಿರುವುದನ್ನು ಕಂಡು ಸೋಷಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಇದನ್ನು ಗಮನಿಸಿ ಅಂಜುಮನ್ ನಿವಾಸಿಗಳು ಮತ್ತು   ಅಂಡೆ ಚತ್ತರ್ ಯುವಕರು ಶ್ರೀಯುತ ಸಿ ಎನ್ ಅಕ್ಮಲ್ ಅವರಿಗೆ  ಗೌರವಿಸಿದ್ದೇವೆ  ಮತ್ತು ಅವರ ಉತ್ತಮವಾದಂತಹ ಕೆಲಸಕ್ಕೆ ನಮ್ಮ ಬೆಂಬಲವನ್ನು ನೀಡಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗುಲ್ಫಾಮ್. ನದೀಮ್ ಪರ್ವೀಜ್ .ಅನೀಸ್ ಕೇಸರ್ .ಮಸೂದ್ ಜುನೇದ್ ಉಪಸ್ಥಿತರಿದ್ದರು