ನನ್ನ ಲೈಫ್ ನನ್ನ ಸ್ವಚ್ಛ ನಗರ ಅಭಿಯಾನಕ್ಕೆ ಎಸ್.ನಂಜುಂಡಸ್ವಾಮಿ ಚಾಲನೆ

ನಂಜನಗೂಡು: ಮೇ.21:- ಸ್ವಚ್ಛ ಭಾರತ ಮಿಷಿನ್ 2.0 ಯೋಜನೆ ಅಡಿ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ನನ್ನ ಲೈಫ್ ನನ್ನ ಸ್ವಚ್ಛ ನಗರ ಅಭಿಯಾನಕ್ಕೆ ನಗರಸಭೆ ಪೌರವಯುಕ್ತ ಎಸ್ ನಂಜುಂಡಸ್ವಾಮಿ ಚಾಲನೆ ನೀಡಿದರು.
ನಗರಸಭೆಯಲ್ಲಿ ಸ್ಥಾಪಿಸಿರುವ ಆರ್ ಆರ್ ಆರ್ ಕೇಂದ್ರದಲ್ಲಿ ಸಾರ್ವಜನಿಕರಿಂದ ಹಳೇ ದಿನಪತ್ರಿಕೆ ಹಳೆಯ ಬಟ್ಟೆ ಹಳೆಯ ಪ್ಲಾಸ್ಟಿಕ್ ಮುಂತಾದವುಗಳನ್ನು ಸಂಗ್ರಹಿಸುವ ಮೂಲಕ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛ ಭಾರತ ಮಿಷಿನ್ ಎರಡನೇ ಹಂತದ ಕಾರ್ಯಕ್ರಮವಾಗಿ ಕೇಂದ್ರ ಸರ್ಕಾರ ಅಭಿಯಾನ ಆರಂಭಿಸಿದೆ ಸ್ಥಳೀಯ ಸಂಸ್ಥೆಗಳ ಮಟ್ಟದಿಂದ ಕಾಪೆರ್Çರೇಟ್ ಮಟ್ಟದವರೆಗೂ ಮೇ 20 ರಿಂದ ಜೂನ್ 5 ರ ವರೆಗೆ ಅಭಿಯಾನ ಜಾರಿಯಲ್ಲಿರುತ್ತದೆ ಮರು ಬಳಸು ಬಹುದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುವ ಉದ್ದೇಶವನ್ನು ಅಭಿಯಾನ ಹೊಂದಿದೆ
ಆಟಿಕೆ ವಸ್ತುಗಳು ಹಳೆ ಬಟ್ಟೆ ಹಳೆ ಸೀರೆಗಳು ಸಮವಸ್ತ್ರ ದಿನಪತ್ರಿಕೆ ಹಳೆಯ ಪುಸ್ತಕಗಳು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳು ಎಲೆಕ್ಟ್ರಾನಿಕ್ ವಸ್ತುಗಳನ್ನು ಕೇಂದ್ರದಲ್ಲಿ ಪಡೆಯಲಾಗುವುದು ಕೇಂದ್ರದಲ್ಲಿ ವಸ್ತುಗಳನ್ನು ನೀಡುವ ಗ್ರಾಹಕರಿಗೆ ಪೆÇ್ರೀತ್ಸಾಹ ಡಿಜಿಟಲ್ ಪ್ರಮಾಣ ಪತ್ರ ಹಾಗೂ ಒಂದು ಕೆಜಿ ಸಾವಯವ ಗೊಬ್ಬರ ನೀಡುತ್ತೇವೆ ಎಂದು ಮಾಹಿತಿ ನೀಡಿದರು
ಈ ಸಾವಯವ ಗೊಬ್ಬರವನ್ನು ತಮ್ಮ ಮನೆಯ ಬೆಳೆದಿರುವ ಹೂವಿನ ಗಿಡ ತುಳಸಿ ಗಿಡ ಮುಂತಾದ ಗಿಡಗಳಿಗೆ ಈ ಸಾವಯವ ಗೊಬ್ಬರವನ್ನು ಬಳಸಿ ಎಲ್ಲರೂ ಕೂಡ ನಗರಸಭೆಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಪೌರಯುಕ್ತ ಎಸ್ ನಂಜುಂಡಸ್ವಾಮಿ ಮೈತ್ರಾವತಿ ಆರ್ ಅಶೋಕ್ ನಗರಸಭೆ ಸದಸ್ಯ ಮಹದೇವ ಪ್ರಸಾದ್ ಪ್ರಕಾಶ್ ಎಸ್ ಏನ್ ಮಾದಯ್ಯ ಮೇಸ್ತ್ರಿ ಸೇರಿದಂತೆ ಇತರರು ಇದ್ದರು