ನನ್ನ ಲೈಫ್ ನನ್ನ ಪರಿಸರ ಸ್ವಚ್ಛತೆ ಅಭಿಯಾನಕ್ಕೆ ಕೈ ಜೋಡಿಸಿ  

ಜಗಳೂರು.ಮೇ.೨೨;- ಪಟ್ಟಣದಲ್ಲಿ ಸಾರ್ವಜನಿ ಕರು ತ್ಯಾಜ್ಯ ದೇಣಿಗೆದಾ ರರಾಗಿ ನನ್ನ ಲೈಫ್,ನನ್ನ ಸ್ವಚ್ಛ ನಗರ ಅಭಿ ಯಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ಪಟ್ಟಣ ಪಂಚಾ ಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಕರೆ ನೀಡಿದರು.ಪಟ್ಟಣದ ಪಂಪ್ ಹೌಸ್ ಬಳಿ ಮರುಬಳಕೆ,ಪುನರ್ಬಳಕೆ ತ್ಯಾಜ್ಯ ವಸ್ತುಗಳ ಸಂಗ್ರಹಣಾಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತ ನಾಡಿದರು.ಸರಕಾರದ ನಿರ್ದೇಶನದಂತೆ ಸ್ವಚ್ಛಭಾರತ್ ಮಿಷನ್ ನಗರ-2 ಯೋಜನೆಯಡಿ ಪ್ಲಾಸ್ಟಿಕ್ ಚೀಲ,ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ,ಆಟಿಕೆ ವಸ್ತುಗಳು,ಬಳಸಿದ ಬಟ್ಟೆಗಳು,ದಿನಪತ್ರಿಕೆಗಳು,ಹಳೆಯ ಪುಸ್ತಕ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ 6 ಬಗೆಯ ನವೀಕರಿಸಿ ಮರುಬಳಸಬಹುದಾದ ವಸ್ತುಗಳನ್ನು ಹಾಗೂ ಉತ್ಪಾದನೆ ರಕ್ಷಿಸು ವ ಉದ್ದೇಶದಿಂದ ಜೂನ್ 5ರವರೆಗೆ ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಿದ್ದು.ತಮ್ಮ ಮನೆಯಲ್ಲಿನ ತ್ಯಾಜ್ಯ ನೀಡಿ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಸು ಸ್ಥಿರ ಜೀವನ ಪದ್ದತಿ ಅಳವಡಿಸಿಕೊಂಡು ಪರಿಸರ ಸ್ವಚ್ಛತೆಗೊಳಿಸಬೇಕು ಎಂದು ತಿಳಿಸಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಲೊಕೇಶ್ ಮಾತನಾಡಿ,ಪ್ರತಿ ಶಾಲಾ ಕಾಲೇಜು ಹಂತಗಳಲ್ಲಿ ಮಕ್ಕಳಿಗೆ ಪರಿ ಸರ ಸ್ವಚ್ಛತೆ ಜಾಗೃತಿ ಮೂಡಿಸಲಾಗುತ್ತಿದೆ.ಪ್ಲಾಸ್ಟಿಕ್ ಪರಿಸರಕ್ಕೆ ಅಪಾಯಕಾರಿ ಯಾಗಿದ್ದು.ಪ್ರಕೃತಿಯಲ್ಲಿ ವಿಷಪೂರಿತ ಗಾಳಿ ಪಸರಿ ಸುತ್ತದೆ. ಮನುಷ್ಯನ ಉತ್ತಮ ಆರೋಗ್ಯಕ್ಕೆ ಆಮ್ಲಜಕನ ಅಗತ್ಯ ವಾಗಿದೆ.ಆದ್ದರಿಂದ ಪರಿಸರ ಸ್ವಚ್ಛತೆಗೆ ಮುಂದಾಗಬೇಕು ಸರಕಾರ ದ ಕಾರ್ಯಕ್ರಮಗಳು ಪ್ರತಿಮನೆಬಾಗಿಲಿಗೆ ತಲುಪಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ಮಾತನಾಡಿ,ಪ್ರತಿ ಮನೆಗಳ ನ್ನು ಹಬ್ಬ ಹರಿದಿನಗಳಲ್ಲಿ ಸ್ವಚ್ಛಗೊಳಿಸಿದಾಗ ಬಳಸಿದ ಪ್ಲಾಸ್ಟಿಕ್ ವಸ್ತುಗಳನ್ನು,ಹಳೆಯ ಪುಸ್ತಕ,ಬಟ್ಟೆಗಳನ್ನು ಸಂಗ್ರಹಿಸಿ ಇತರರಿಗೆ ಮರುಬಳಕೆಮಾಡಲು ಅವಕಾಶ ನೀಡಿದರೆ ನಮ್ಮ ನೆರೆಹೊರೆಯ ಪರಿಸರ ಸ್ವಚ್ಛತೆ ಸಾಧ್ಯ ಎಲ್ಲೆಂದರಲ್ಲಿ ಎಸೆದರೆ ಅವುಗಳಿಂದ ರೋಗ ರುಜನೆಗಳು ಆಕ್ರಮಿಸುತ್ತವೆ ಎಂದರು.