ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ) ಚನ್ನಮ್ಮನ ಕಿತ್ತೂರ,ಆ22: ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ಯ ತಾ.ಪಂ. ಆಯೋಜಿಸಿರುವನನ್ನ ಮಣ್ಣು ನನ್ನ ದೇಶ”À ಅಭಿಯಾನದಡಿ ವೀರರ ಗ್ರಾಮಗಳು, ನದಿಗಳು ಮತ್ತು ಐತಿಹಾಸಿಕ ಸ್ಥಳ ತಾ.ಪಂ.ಗೆ ಒಳಪಡುವ 17 ಗ್ರಾ.ಪಂ.ಗಳಿಂದ ಕ್ರೂಢಿಕರಿಸಿದ ಮಣ್ಣನ್ನು ಅಮೃತ ಕಳಸದ ಮೂಲಕ ನೆಹರು ಯುವ ಕೇಂದ್ರ ಸ್ವಯಂ ಸೇವಕರಿಗೆ ತಾ.ಪಂ. ಮುಖ್ಯಾಧಿಕಾರಿ ಸುಭಾಸ್ ಸಂಪಗಾಂವಿ ನೀಡಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಡಿ ಮಣ್ಣು ಸಂಗ್ರಹ ಸರೋವರ ದಡದಲ್ಲಿ 75 ಸಸಿಗಳನ್ನು ನೆಟ್ಟು ಧ್ವಜಾರೋಹಣ ನೇರವೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು ಎಂದರು. ನಂತರ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ವೇಳೆ ತಾ.ಪಂ. ಸಹಾಯಕ ಅಧಿಕಾರಿ ಲಿಂಗರಾಜ ಹಲಕರ್ಣಿಮಠ, ಸಹಾಯಕ ಲೆಕ್ಕಾಧಿಕಾರಿ ಈರಣ್ಣಾ ಕಂಬಾರ, ಪಿಡಿಓಗಳು ಸೇರಿದಂತೆ ಸಿಬ್ಬಂದಿ ಇನ್ನಿತರಿದ್ದರು.