ನನ್ನ ಮಣ್ಣು ನನ್ನ ದೇಶ ಅಭಿಯಾನ

ಮಾನ್ವಿ.ಅ.೧೮- ತಾಲೂಕ ಪಂಚಾಯತ ಸಹಯೋಗದೊಂದಿಗೆ ನನ್ನ ಮಣ್ಣು ನನ್ನ ದೇಶದ ಅಭಿಯನದಡಿ ಮಣ್ಣು ಸಂಗ್ರಹಣೆ ಹಾಗೂ ಅಕ್ಕಿ ಸಂಗ್ರಹಣೆ ತಾಲೂಕಿನ ವ್ಯಾಪ್ತಿಯ ೧೭ ಗ್ರಾ.ಪಂ ಗಳಿಂದ ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ಮಾನವಿ ತಾ.ಪಂ ಯಲ್ಲಿ ಮಣ್ಣು ಸಂಗ್ರಹಣೆ ಕಾರ್ಯಕ್ರಮ ಅಯೋಜನೆ ಮಾಡಿದ್ದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಮಾನವಿ ಸಂಯುಕ್ತಾಶ್ರಯದಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನದ ಕಾರ್ಯಕ್ರಮದಲ್ಲಿ ಗ್ರಾ.ಪಂ ಮಟ್ಟದಿಂದ ಮಣ್ಣು ಸಂಗ್ರಹಣೆ ಮಾಡಲು ಘನ ಸರ್ಕಾರಗಳ ನಿರ್ದೇಶನದಂತೆ ಇಂದು ತಾಲೂಕಿನ ೧೭ ಗ್ರಾಮ ಪಂಚಾಯತಿಗಳಿಂದ ಗ್ರಾ.ಪಂ. ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಂದ ತರಲಾದ ಮಣ್ಣನ್ನು ಹಾಗೂ ಅಕ್ಕಿಯನ್ನು ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯತ ಎರಡು ಕಳಸದಲ್ಲಿ ಮಣ್ಣು ಹಾಗೂ ಅಕ್ಕಿಯನ್ನು ಸಂಗ್ರಹಣೆ ಮಾಡಲಾಯಿತು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ, ಎಂ.ಡಿ.ಸೈಯದ್ ಪಾಟೀಲ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ ಮಾನವಿ ರವರು ಮಾತನಾಡಿ, ನಮ್ಮ ತಾಲೂಕಿನ ಎಲ್ಲಾ ಗ್ರಾ.ಪಂ. ಗಳಿಂದ ಸಂಗ್ರಹಿಸಲಾದ ಮಣ್ಣನ್ನು ರಾಷ್ಟ್ರದ ರಾಜಧಾನಿಯಾದ ನವದೆಹಲಿಗೆ ನಮ್ಮ ದೇಶಕ್ಕಾಗಿ ಶ್ರಮಿಸಿದ, ತ್ಯಾಗ ಮತ್ತು ಬಲಿದಾನವಾದ ವ್ಯಕ್ತಿಗಳ ಸ್ಮರಣೆಗಾಗಿ ಈ ಮಣ್ಣನ್ನು ರಾಷ್ಟ್ರದ ರಾಜಧಾನಿಯಲ್ಲಿ ಯುನೀಕ್ ಪವಿತ್ರವಾದ ಉದ್ಯಾನ ವನ ನಿರ್ಮಿಸಲು ಉಪಯೋಗಿಸುವುದಕ್ಕಾಗಿ ಕಳುಹಿಸುತ್ತಿರುವುದು ಹೆಮ್ಮೆಯ ವಿಷಯವೆಂದು ಸಂತಸ ವ್ಯಕ್ತಪಡಿಸಿದರು.
ಪ್ರತಿ ಗ್ರಾ.ಪಂ.ಯ ಆಡಳಿತ ವೃಂದದವರಿಂದ ತಾಲೂಕಿನ ಮುಖ್ಯವಾದ ಕಳಶಕ್ಕೆ ಮಣ್ಣನ್ನು ಸಮರ್ಪಣೆ ಮಾಡಿದರು. ನಂತರ ನೆಹರು ಯುವ ಕೇಂದ್ರದ ಸ್ವಯಂ ಸೇವಕರಾದ ಶ್ರೀಧರ್ ರವರಿಗೆ ನನ್ನ ಮಣ್ಣು ನನ್ನ ದೇಶದ ಅಭಿಯಾನದ ಮಣ್ಣನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ರವರ ಮೂಕ ನೆಹರು ಯುವ ಕೇಂದ್ರ ರಾಯಚೂರು ಇವರ ಮೂಲಕ ದೆಹಲಿಗೆ ಕಳಿಸಿಕೊಡಲಾಗವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಸಿಬ್ಬಂದಿಗಳು, ತಾಲೂಕಿನ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ತಾಲೂಕ ಪಂಚಾಯತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.