ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ

ಸಂಜೆವಾಣಿ ವಾರ್ತೆ

ಹೊನ್ನಾಳಿ ಆ.21;  ಭಾರತ ಕೇವಲ ಒಂದು  ಭೂಮಿ ಪ್ರದೇಶವಲ್ಲ ಅದೊಂದು ಪುಣ್ಯಭೂಮಿ  ಇಂತಹ ಭೂಮಿಯಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು ಎಂದು ಶಾಸಕ ಡಿಜಿ ಶಾಸನಗೌಡ  ಅಭಿಪ್ರಾಯ ವ್ಯಕ್ತಪಡಿಸಿದರು. ಪುರಸಭೆ ವತಿಯಿಂದ ಆಯೋಜಿಸಿದ ನನ್ನ ಮಣ್ಣು ನನ್ನ ದೇಶ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶ ಮೊದಲು ಎನ್ನುವ ಮನೋಭಾವ ಎಲ್ಲರಲ್ಲೂ ಇರಬೇಕು ಹಾಗೆಯೇ ಈ ದೇಶಕ್ಕಾಗಿ ಹೋರಾಡಿದ ಎಲ್ಲಾ ಸ್ವತಂತ್ರ ಹೋರಾಟಗಾರರನ್ನು ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೊಂಡ ಯೋಧರಿಗೂ ಗೌರವ ಸಲ್ಲಿಸುವ ಕೆಲಸ ಇಡೀ ದೇಶದಲ್ಲಿ ಆಗಬೇಕು ದೇಶಪ್ರೇಮ ಕೇವಲ ವೇದಿಕೆಯಲ್ಲಿ ಮಾತನಾಡುವುದಕ್ಕೆ ಸೀಮಿತವಾಗದೆ ಎಲ್ಲರಲ್ಲೂ ದೇಶಪ್ರೇಮ ಹಾಗೂ ದೇಶಭಕ್ತಿ ನರನಾಡಿಗಳಲ್ಲಿ ಹರಿಯಬೇಕು ಆಗ ಮಾತ್ರ ನಮ್ಮ ಹಿರಿಯ ಹಾಗೂ ವೀರ ಯೋಧರು ನಮಗಾಗಿ ಹೋರಾಡಿದ್ದಕ್ಕೆ ಸಾರ್ಥಕತೆ ಬರುತ್ತದೆ ಎಂದು ತಿಳಿಸಿದರು.ರಾಷ್ಟ್ರ ನಿರ್ಮಾಣವನ್ನು ತಯಾರು ಮಾಡುವ ಶಿಕ್ಷಕನಾಗಬೇಕೆಂದು ಯಾರು ಸಹ ಪ್ರಾರ್ಥಿಸುವುದಿಲ್ಲ ಎಂದ ಅವರು ಈಗಲಾದರೂ ಪಾಲಕರು ತಮ್ಮ ಮಕ್ಕಳಿಗೆ ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರು ಹಾಗೂ ಸ್ವತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಹೋರಾಟಗಾರರ ಪರಿಚಯ ಮಾಡಿಕೊಡಿ ಮಕ್ಕಳು ಅವರಂತೆ  ದೇಶಕ್ಕಾಗಿ ಹೋರಾಟ ಮಾಡುವ ದೇಶಭಕ್ತರಾಗಲಿ ಎಂದು ಪಾಲಕರಿಗೆ ಕರೆ ನೀಡಿದರು. ಪುರಸಭಾ ಸದಸ್ಯರಾದ ಮೈಲಪ್ಪ, ರಾಜೇಂದ್ರ, ವಿಜೇಂದ್ರಪ್ಪ, ತನ್ವೀರ್, ಗಿರೀಶ್, ಕಂದಾಧಿಕಾರಿ ವಸಂತ್, ಇಂಜಿನಿಯರ್ ದೇವರಾಜ್, ರವಿಕುಮಾರ್ ಹಾಗೂ ಇತರರಿದ್ದರು.