
ಸಿರವಾರ,ಆ.೧೪-
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನಕ್ಕೆ ಪಟ್ಟಣ ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ಸದಸ್ಯರು ಸಸಿ ನೆಟ್ಟು ಚಾಲನೆ ನೀಡಿದರು.
ನಂತರ ಮಾತನಾಡಿದ ಪ.ಪಂ.ಸದಸ್ಯ ಮೌಲಸಾಬ್ ವರ್ಚಸ್ ಅವರು, ಜನತೆ ಸಸಿ ನೆಡುವ, ಪರಿಸರ ಸಂರಕ್ಷಿಸುವ ಮೂಲಕ ಭವಿಷ್ಯದ ಭಾರತಕ್ಕೆ ಕೊಡುಗೆ ನೀಡಬೇಕು, ಕೇವಲ ಸಸಿ ನೆಟ್ಟರೆ ಸಾಲದು ಪೋಷಿಸುವುದು ಕೂಡ ನಮ್ಮ ಕರ್ತವ್ಯ ಎಂದರು.
ಸ್ವಾತಂತ್ರೋತ್ಸವ, ಆಗಸ್ಟ್‌ಕ್ರಾಂತಿ ಮತ್ತು ಭಾರತ ಬಿಟ್ಟು ತೊಲಗಿ ಚಳವಳಿ ಸ್ಮರಣಾರ್ಥ ಕೇಂದ್ರ ಸರ್ಕಾರ ಯೋಜಿಸಿರುವ ಈ ಅಭಿಯಾನವನ್ನು ಪರಿಸರ ಸಂರಕ್ಷಣೆ ಮಾಡುವ ಮೂಲಕ ಯಶಸ್ವಿ ಗೊಳಿಸೋಣ ಎಂದು ಹೇಳಿದರು.
ಈ ವೇಳೆ ಪ.ಪಂ.ಸದಸ್ಯ ಕೃಷ್ಣ ನಾಯಕ ಮಾತನಾಡಿದರು. ಮುಖಂಡರಾದ ಮಲ್ಲಪ್ಪ ಕಜ್ಜಿ, ರಾಜೇಶ, ಹಾಗು ಆರೋಗ್ಯ ನಿರೀಕ್ಷಕಿ ಸುನೀತಾ ಸಜ್ಜನ ಹಾಗು ಸಿಬ್ಬಂದಿ ಇದ್ದರು.