ನನ್ನ ನಿಷ್ಠೆ ಏನಿದ್ದರೂ ಜೆಡಿಎಸ್ ಪಕ್ಷಕ್ಕೆ ಮಾತ್ರ

ಕೆ.ಆರ್.ಪೇಟೆ. ಜ.09: ನನ್ನ ನಿಷ್ಠೆ ಏನಿದ್ದರೂ ಜೆಡಿಎಸ್ ಪಕ್ಷಕ್ಕೆ ಮಾತ್ರ, ಬೇರೆ ಪಕ್ಷದ ಮುಖಂಡರು ಎಷ್ಟೇ ಕೊಡುತ್ತೇನೆ ಎಂದರೂ ಮತದಾರ ಪ್ರಭುಗಳಿಗೆ ದ್ರೋಹ ಬಗೆಯುವುದಿಲ್ಲ, ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ತಲಾ 39 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದ ಹಾಗೂ ದಂಪತಿಗಳಿಬ್ಬರೂ ಆಟೋ ಗುರುತಿನಲ್ಲಿ ಜಯಶೀಲರಾದ ಶೀಳನೆರೆ ಸಿದ್ದೇಶ್ ದಂಪತಿಗಳು ಸ್ಪಷ್ಟನೆ ನೀಡಿದರು.
ಅವರು ಪಟ್ಟಣದ ರಾಮದಾಸ್ ಹೋಟೆಲ್‍ನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾವು ಮೊದಲು ಬಿಜೆಪಿ ಪಕ್ಷದಲ್ಲಿಯೆ ಇದ್ದು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದ ನಮ್ಮ ಗ್ರಾಮದ ಬಿಜೆಪಿ ಮುಖಂಡರೊಬ್ಬರ ವರ್ತನೆಗೆ ಬೇಸತ್ತು ಜೆಡಿಎಸ್ ಪಕ್ಷದ ಬೆಂಬಲಿತನಾಗಿ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ ಮತದಾರರು ನನ್ನ ಮತ್ತು ನನ್ನ ಪತ್ನಿಯನ್ನು 39 ಮತಗಳ ಅಂತರದಿಂದ ಇಬ್ಬರನ್ನೂ ಗೆಲ್ಲಿಸಿ ಆಶೀರ್ವಾದ ಮಾಡಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಕೆಲವರು ಸಿದ್ದೇಶ್‍ಅವರನ್ನು ಆಗಲೇ ಬಿಜೆಪಿಯವರು ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗಿದ್ದಾರೆ ಎಂಬೆಲ್ಲಾ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾದವು. ಮತದಾರ ಬಂಧುಗಳು ಯಾವುದೇ ಕಾರಣಕ್ಕೂ ಇಂಥಹ ಊಹಾಪೋಹಗಳಿಗೆ ಕಿವಿಗೊಡಬಾರದು.
ನವಿಲುಮಾರನಹಳ್ಳಿ ಗ್ರಾಮದ ಮತಬಾಂಧವರು ಮತ್ತು ಶಿವರಾಮು ಹಾಗೂ ಹರೀಶ್ ನನ್ನೊಡನೆ ಹಗಲಿರುಳು ಹೆಗಲುಕೊಟ್ಟು ನಮ್ಮಿಬ್ಬರ ದಂಪತಿಗಳ ಗೆಲುವಿನಲ್ಲಿ ಶ್ರಮಿಸಿದ್ದಾರೆ. ಜಿಪಂ ಹೆಚ್.ಟಿ.ಮಂಜು ತಾಪಂ.ಮಾಜಿ ಸದಸ್ಯ ನಿಂಗರಾಜು , ಟಿಎಪಿಸಿಎಂಎಸ್ ನಿರ್ಧೇಶಕ ಮೋಹನ, ಜಯದೇವ್, ಬುಲೆಟ್‍ರಾಘು, ಹಾಗೂ ಗ್ರಾಮದ ಮುಖಂಡರುಗಳು ಮತ್ತು ನನ್ನ ಸಹೋದರರು ಅವರುಗಳಿಗೆ ನಾವು ಯಾವಾಗಲೂ ಆಭಾರಿಯಾಗಿದ್ದೇವೆ.
ಗೆದ್ದ ನಂತರ ಹಲವರು ನೀನೇನು ದೇವೇಗೌಡರ ಹಾಗೂ ಕುಮಾರಣ್ಣನ ಸಮ್ಮುಖದಲ್ಲಿ ಬಾವುಟ ಹಿಡಿದು ಜೆಡಿಎಸ್ ಸೇರಿಲ್ಲ ಗ್ರಾಮ ಪಂಚಾಯಿತಿಯಲ್ಲಿ ಇವೆಲ್ಲಾ ಸಾಮಾನ್ಯ ಈಗಲಾದರೂ ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಆಸೆ, ಆಮಿಷ ತೋರಿಸುತ್ತಿದ್ದು ನಾವು ಯಾವುದೇ ಕಾರಣಕ್ಕೂ ಬಿಜೆಪಿ ಸೇರಿ ಮತದಾರರಿಗೆ ದ್ರೋಹ ಮಾಡುವುದಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಗಾಯಿತ್ರಿಸಿದ್ದೇಶ್, ಉಷಾ, ಜೆಡಿಎಸ್ ಮುಖಂಡ ಹರೀಶ್, ಶಿವರಾಮು ಸೇರಿದಂತೆ ಹಲವರು ಹಾಜರಿದ್ದರು.