ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಚಾಲನೆ

ಬೆಂಗಳೂರು, ನ.೨೪-ಸಿಲಿಕಾನ್ ಸಿಟಿ ಬೆಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದ ೨೦೨೨-೨೩ನೇ ಸಾಲಿನ ಆಯವ್ಯಯದ ಪೂರಕವಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ನನ್ನ ನಗರ-ನನ್ನ ಬಜೆಟ್ ಅಭಿಯಾನಕ್ಕೆ ಬಿಬಿಎಂಪಿ ಚಾಲನೆ ನೀಡಿದೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಜನಾಗ್ರಹ ಸಂಸ್ಥೆಯ ಸಹಯೋಗದೊಂದಿಗೆ ಬಿಬಿಎಂಪಿ ೨೦೨೨-೨೩ನೇ ಸಾಲಿನ ಅಯವ್ಯಯದ ಪೂರಕವಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ನನ್ನ ನಗರ-ನನ್ನ ಬಜೆಟ್ ಅಭಿಯಾನದ ವಾಹನಕ್ಕೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ವಾರ್ಷಿಕ ನಗರ ಬಜೆಟ್ ಗಾಗಿ ಸಾರ್ವಜನಿಕ ಸಲಹೆಗಳನ್ನು ಸಂಗ್ರಹಿಸಲಿದ್ದು, ನಗರದ ೨೪೪ ವಾರ್ಡ್‌ಗಳಲ್ಲೂ ಈ ವಾಹನ ಸಂಚಾರ ಮಾಡಲಿದ್ದು, ನಾಗರೀಕರು ಸಲಹೆಗಳನ್ನು ನೀಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಹಣಕಾಸು ವಿಭಾಗದ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, ೨೦೧೫ರಿಂದಲೂ ಅಭಿಯಾನವನ್ನು ನಡೆಸಿಕೊಂಡು ಬರುತ್ತಿದ್ದು, ಆ ಮೂಲಕ ನಗರದ ಬಜೆಟ್‌ನಲ್ಲಿ ಜನರು ಭಾಗವಹಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಪಾದಚಾರಿ ಮಾರ್ಗ, ಸಾರ್ವಜನಿಕರ ಶೌಚಾಲಯ, ರಸ್ತೆ, ಕೊಂದುಕೊರತೆ ಸೇರಿದಂತೆ ನಾಗರೀಕ ಪ್ರತಿಕ್ರಿಯೆ ಪಡೆಯಲಿದ್ದೇವೆ. ಕಳೆದ ಬಾರಿ ಪ್ರತಿ ವಾರ್ಡಿಗೆ ೧ ಕೋಟಿ ರೂ. ಮೀಸಲಿಡಲಾಗಿತ್ತು. ಈ ಬಾರಿಯೂ ಇಂತಹ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.