ನನ್ನ ಜ್ಞಾನ ವಿದ್ಯಾರ್ಥಿಗಳಿಗಾಗಿ ಮೀಸಲು:ರಮೇಶ ಬಲ್ಲಿದ್


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ29.  ಇಲ್ಲಿಯವರೆಗೆ ಒಂದು ಸಾವಿರಕ್ಕೂ ಹೆಚ್ಚು ಮೋಟಿವೇಶನ್ ತರಗತಿಗಳನ್ನು ವಿದ್ಯಾರ್ಥಿಗಳಿಗೆ ನಡೆಸಿಕೊಟ್ಟಿದ್ದೇನೆ. ಕುರಿ ಕಾಯುತ್ತಿದ್ದ ನನಗೆ ಅಚಾನಕ್ಕಾಗಿ ಎನ್‍ಜಿಒ ಕಂಪನಿಯಿಂದ ದೊರೆತ 6ತಿಂಗಳ ಇಂಗ್ಲೀಷ್ ತರಬೇತಿಯಿಂದ ನಿಮಗೆ ನನ್ನ ಜ್ಞಾನ ಹಂಚುತ್ತಿದ್ದೇನೆ. ನನ್ನ ಸಮಯ ಮತ್ತು ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಲು ಯಾವತ್ತೂ ಸಿದ್ದನಿದ್ದೇನೆ ಎಂದು ತಿಳಿಸಿದರು. ಗ್ರಾಮದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಿನ್ನೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಪರೀಕ್ಷೆಯಲ್ಲಿ ಫೇಲಾದರೂ ಚಿಂತೆಯಿಲ್ಲ ಜೀವನದಲ್ಲಿ ಫೇಲಾಗಬೇಡಿ, ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ, ಕಲ್ಲಲ್ಲಿ ದೇವರನ್ನು ಕಾಣುವ ಬದಲು ವಿದ್ಯಾರ್ಥಿಗಳು ಶಿಕ್ಷಕರಲ್ಲಿ ಪೋಷಕರಲ್ಲಿ, ಶಿಕ್ಷಕರು ಪೋಷಕರು ಮಕ್ಕಳಲ್ಲಿ ದೇವರನ್ನು ಕಾಣಿರೆಂದು ತಿಳಿಸಿದರು.
ನಂತರ ಮುಂದುವರಿದು ಇಂಗ್ಲೀಷ್ ಭಾಷೆಯನ್ನು ಸರಳೀಕರಿಸಿಕೊಳ್ಳುವುದು ಹೇಗೆಂಬುದನ್ನು ಲುಕ್, ವಾಚ್, ಸೀ, ಮತ್ತು ಹ್ಯಾಂಡ್‍ಸಂ, ಬ್ಯೂಟಿಫುಲ್, ಪ್ರಿಟೀ ಅದೇರೀತಿ ಫೈಟ್, ವಾರ್, ಬಾಟ್ಲ್ ಮೂರು ಶಬ್ದಗಳು ನೀಡುವ ಅರ್ಥಗಳು ಒಂದೇ ಆದರೂ ಆ ಅರ್ಥದ ಭಿನ್ನತೆ ಗುರುತಿಸಬೇಕು. 2ವಾಕ್ಯಗಳ ಉದಾಹರಣೆ ಕೇಳಿದರೆ 8ವಾಕ್ಯಗಳಲ್ಲಿ ಉದಾಹರಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಇದೇವೇಳೆ ಮುಖ್ಯಗುರು ಕೆ.ವೀರಪ್ಪ ಮಾತನಾಡಿ ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸಿದ ಬಳ್ಳಾರಿ ಡಿಡಿಪಿಐ ಮತ್ತು ಸಿರುಗುಪ್ಪ ಬಿಇಓ ಅಧಿಕಾರಿಗಳನ್ನು, ಉಪನ್ಯಾಸಕ ರಮೇಶ ಹಾಗೂ ಸಾಥ್ ನೀಡಿದ ಉಳಿದ 6ಶಾಲೆ ಪ್ರೌಢಶಾಲೆ ಮುಖ್ಯಗುರುಗಳಿಗೆ ವಿಶೇಷ ಅಭಿನಂದನೆ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ರಮೇಶ್ ಹಾಗೂ ಬಿಇಒ ಪಿಡಿ.ಭಜಂತ್ರಿಯವರನ್ನು ಸನ್ಮಾನಿಸಿ ಗೌರವಿಸಿದರು. ತಾಲೂಕು ಇಸಿಓ ಅಧಿಕಾರಿಗಳಾದ ಪಂಪಾಪತಿ, ಚನ್ನಬಸವನಗೌಡ. ಮುಖ್ಯಗುರುಗಳಾದ ಕೆ.ವೀರಪ್ಪ, ಫರ್ವೆಜ್‍ಅಹಮ್ಮದ್, ವೆಂಕಟೇಶ್, ಸವಿತಾ, ಎನ್.ಪಂಪಾಪತಿ, ಜೆ.ವಿರುಪಾಕ್ಷಗೌಡ, ಪ್ರಭುಲಿಂಗಗಣಾಚಾರಿ, ಎಸ್‍ಡಿಎಂಸಿ ಅಧ್ಯಕ್ಷ ವಿ.ಹುಲುಗಪ್ಪ, ಸಹಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.