ನನ್ನ ಜೀವನ ಹಾಳು ಮಾಡಿದ್ದು ಶಾರುಕ್

ಮುಂಬೈ, ಸೆ. ೧೨- ಬಾಲಿವುಡ್‌ನಟಿ ಶಾರುಖ್ ಖಾನ್ ತಮ್ಮ ಪ್ರೇಮ ಜೀವನವನ್ನು ಹಾಳು ಮಾಡಿದ್ದಾರೆ ಎಂದು ನಟಿ ಸ್ವರಾ ಭಾಸ್ಕರ್ ಆರೋಪಿಸಿದ್ದಾರೆ .
ಇತ್ತೀಚಿನ ಸಂದರ್ಶನವೊಂದರಲ್ಲಿ, ‘ನನ್ನ ಲವ್ ಲೈಫ್ ಹಾಳು ಮಾಡಲು ಆದಿತ್ಯ ಚೋಪ್ರಾ ಮತ್ತು ಶಾರುಖ್ ಖಾನ್ ಅವರೇ ಕಾರಣ’ ಎಂದು ಸ್ವರಾ ಹೇಳಿದ್ದಾರೆ.
ಇದೀಗ ಮತ್ತೊಮ್ಮೆ ಗಂಭೀರ ಹೇಳಿಕೆ ನೀಡುವ ಮೂಲಕ ಸ್ವರಾ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ ಆದರೆ, ಈ ಬಾರಿ ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ಮೇಲೆ ಗಂಭೀರ ಆರೋಪ ಮಾಡಿರುವ ಸ್ವರಾ ಭಾಸ್ಕರ್ ’ನಟ ನನ್ನ ಲವ್ ಲೈಫ್ ಆನ್ ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಪ್ರೇಮ ಜೀವನವನ್ನು ಹಾಳುಮಾಡಲು ನಾನು ಆದಿತ್ಯ ಚೋಪ್ರಾ ಸರ್ ಮತ್ತು ಶಾರುಖ್ ಖಾನ್ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತೇನೆ. ನಾನು ಚಿಕ್ಕವಯಸ್ಸಿನಲ್ಲಿ ಶಾರುಖ್ ಅವರ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರವನ್ನು ನೋಡಿದ್ದೇನೆ ಮತ್ತು ಅಂದಿನಿಂದ ನಾನು ಶಾರುಕ್ ನಂತೆಯೇ ಕಾಣುವ ಆ ’ರಾಜ್’ ಗಾಗಿ ಹುಡುಕಾಟ ನಡೆಸಿದೆ . ನಿಜ ಜೀವನದಲ್ಲಿ ಯಾವುದೇ ವ್ಯಕ್ತಿ ‘ರಾಜ್’ ನಂತೆ ಇರಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಹಲವು ವರ್ಷಗಳೇ ಬೇಕಾದವು. ಹೀಗಾಗಿ ಸಂಬಂಧಗಳಲ್ಲಿ ನಾನು ತುಂಬಾ ಒಳ್ಳೆಯವಳಾಗಿಲ್ಲ ಎಂಬುದು ನನಗೆ ಅನಿಸುವುದಿಲ್ಲ. ಒಂಟಿ ಜೀವನ ತುಂಬಾ ಕಷ್ಟದಿಂದ ಕೂಡಿರುತ್ತದೆ, ಆದರೆ, ಸಂಗಾತಿಯನ್ನು ಹುಡುಕುವುದು ಕಸವನ್ನು ಜಾಲಾಡಿದಂತಿದೆ’ ಎಂದು ಸ್ವರಾ ಹೇಳಿದ್ದಾರೆ. ಹೀಗೆ ತಮಾಷೆಯ ಉತ್ತರ ನೀಡುವ ಮೂಲಕ ಸ್ವರಾ ಎಲ್ಲರ ಗಮನ ಸೆಳೆದಿದ್ದಾರೆ.

ಸ್ವರಾ ಭಾಸ್ಕ್ ಶೀಘ್ರದಲ್ಲೇ ’ಜಹಾ ಚಾರ್ ಯಾರ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ವರಾ ಜೊತೆಗೆ, ನಟಿಯರಾದ ಪೂಜಾ ಚೋಪ್ರಾ, ಶಿಖಾ ತಲ್ಸಾನಿಯಾ ಮತ್ತು ಮೆಹರ್ ವಿಜ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಲ್ವರು ಮಹಿಳಾ ಸ್ನೇಹಿತೆಯರ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ವುಮನ್ ಸೆಂಟ್ರಿಕ್ ಕಥಾ ಹಂದರ ಹೊಂದಿರುವ ಈ ಚಿತ್ರ ಸೆಪ್ಟೆಂಬರ್ ೧೬ ರಂದು ಬಿಡುಗಡೆಯಾಗಲಿದೆ.