ನನ್ನ ಗೆಲುವಿಗೆ ಎಲ್ಲ ಸಮುದಾಯಗಳ ಪಾತ್ರ ಬಹುಮುಖ್ಯ : ಶಾಸಕ ಲಕ್ಷ್ಮಣ ಸವದಿ

ಅಥಣಿ :ಜು.3: ಉಪಕಾರ ಮಾಡಿದವರನ್ನು ಸದಾ ಸ್ಮರಿಸುವುದು ಮಾನವೀಯ ಧರ್ಮ, ಚುನಾವಣೆಯಲ್ಲಿ ನನ್ನ ಗೆಲುವಿಗೆ ಎಲ್ಲಾ ಸಮುದಾಯಗಳನ್ನು ಒಳಗೊಂಡಂತೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಪಾತ್ರ ಅತಿಮುಖ್ಯವಾಗಿದ್ದು ನನಗೆ ಬಂದ ಕಷ್ಟದ ಸಂದರ್ಭಗಳಲ್ಲಿ ನನಗೆ ಸಹಾಯ ಸಹಕಾರ ಮಾಡಿದ್ದಾರೆ ಆ ಋಣ ಎಂದು ತೀರಿಸಲು ಸಾಧ್ಯವಿಲ್ಲ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು,

ಅವರು ಅಥಣಿ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಪಟ್ಟಣದ ಶಿವಣಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸತ್ಕಾರ ಸಮಾರಂಭದಲ್ಲಿ ಪಂಚಮಸಾಲಿ ಸಮಾಜ ಬಾಂಧವರಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ನನ್ನ ಜೊತೆಗಿದ್ದ ಮುಖಂಡರು ಅಂದಿನಿಂದ ಇಂದಿನವರೆಗೂ ಕೂಡ ನನ್ನನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ, ನಾನು ಯಾವುದೇ ಪಕ್ಷದಲ್ಲಿದ್ದರೂ ಕೂಡ ನನ್ನ ಜೊತೆಗಿದ್ದಾರೆ. ನಾನು ಹಾಗೂ ಕ್ಷೇತ್ರದ ಮತದಾರರು ಒಂದೇ ಕುಟುಂಬದ ಸದಸ್ಯರಿದ್ದಂತೆ. ನನ್ನನ್ನು ಅಭೂತ ಪೂರ್ವವಾಗಿ ಗೆಲ್ಲಿಸಲು ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ನಿಮ್ಮ ಈ ಋಣ ಕ್ಷೇತ್ರದ ಅಭಿವೃದ್ಧಿ ಮಾಡುವುದರ ಮೂಲಕ ತೀರಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿ, ಎಲ್ಲಾ ಸಮುದಾಯದವರು ತಮ್ಮ ಸಮುದಾಯವನ್ನು ಕಟ್ಟಿ ಬೆಳೆಸುವುದರ ಜೊತೆಗೆ ಇನ್ನೊಂದು ಸಮುದಾಯವನ್ನು ಪ್ರೀತಿಸಿದಾಗ ಮಾತ್ರ ನಮ್ಮ ಸಮುದಾಯಕ್ಕೆ ಗೌರವ ಹೆಚ್ಚಾಗುತ್ತದೆ, ನಮ್ಮ ಸಮಾಜವನ್ನು ಗೌರವಿಸಬೇಕು.ಇತರ ಸಮಾಜವನ್ನು ನಾವು ಪ್ರೀತಿಸಬೇಕು, ಎಲ್ಲಾ ಸಮುದಾಯಗಳ ಕಟ್ಟ
ಕಡೆಯ ವ್ಯಕ್ತಿಗೂ ನಾವು ಸಹಾಯ ಸಹಕಾರ ಮಾಡುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ನಾನು ಮತ್ತು ಲಕ್ಷ್ಮಣ ಸವದಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಎಂದರು,

ಈ ವೇಳೆ ಸುರೇಶ ಬುಕಿಟಗಾರ, ಮಹಾಂತೇಶ ಠಕ್ಕಣ್ಣವರ, ಶ್ರೀಕಾಂತ ಪೂಜಾರಿ, ಶ್ರೀಶೈಲ ನಾರಗೊಂಡ, ಬಿ ಆರ್ ಪಾಟೀಲ, ಸುರೇಶಗೌಡ ಪಾಟೀಲ(ಶೇಗುಣಸಿ) ಸಂಗನಗೌಡ ಪಾಟೀಲ, ಘಟವಾಳಪ್ಪಾ ಗುಡ್ಡಾಪೂರ, ರಾಮಣ್ಣಾ ಧರಿಗೌಡ, ಬಸನಗೌಡ ಪಾಟೀಲ, ಶಿವು ಗುಡ್ಡಾಪೂರ, ಶಿವಾನಂದ ಸೌದಾಗರ, ಹಲವರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ರಾಮನಗೌಡ ಪಾಟೀಲ ನ್ಯಾಯವಾದಿ ಡಿ ಬಿ ಠಕ್ಕಣ್ಣವರ, ನಿರೂಪಿಸಿ ವಂದಿಸಿದರು,