ನನ್ನ ಗೆಲುವಲ್ಲ ಕ್ಷೇತ್ರದ ಗೆಲುವು – ಶಾಸಕ ಡಾ ಶ್ರೀನಿವಾಸ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 14 :- ಕೂಡ್ಲಿಗಿ ಕ್ಷೇತ್ರದಿಂದ ಜಯಭೇರಿ ಬಾರಿಸಿದ ಕಾಂಗ್ರೇಸ್ ನ ನೂತನ ಶಾಸಕ ಡಾ ಶ್ರೀನಿವಾಸ ಅವರಿಗೆ ಕೂಡ್ಲಿಗಿಯಲ್ಲಿ ಅದ್ದೂರಿ ಸ್ವಾಗತ ಕೋರಿದ ನಂತರ ಕೂಡ್ಲಿಗಿ ಕ್ಷೇತ್ರದ ಗೆಲುವು ನನ್ನ ಗೆಲುವಲ್ಲ ನಿಮ್ಮೆಲ್ಲರ ಗೆಲುವು ಎಂದು ಗೆಲುವನ್ನು ಕ್ಷೇತ್ರದ ಜನತೆಗೆ ಅರ್ಪಿಸುವೆ ಎಂದು ಕೂಡ್ಲಿಗಿ ನೂತನ ಶಾಸಕ ಡಾ ಶ್ರೀನಿವಾಸ ತಿಳಿಸಿದರು.
ಅವರು ಪಟ್ಟಣದ ಪ್ರಮುಖ ನಾಯಕರುಗಳಾದ ಮದಕರಿ ವೃತ್ತ ಹಾಗೂ ಅಂಬೇಡ್ಕರ್ ವೃತ್ತಕ್ಕೆ ಪುಷ್ಪಮಾಲೆ ಹಾಗೂ ನಮನ ಅರ್ಪಿಸಿ ನಂತರ ಕೂಡ್ಲಿಗಿಯ ಪವಿತ್ರ ಗಾಂಧೀಜಿ ಚಿತಾಭಸ್ಮ ರಾಷ್ಟ್ರೀಯ  ಹುತಾತ್ಮ ಸ್ಮಾರಕಕ್ಕೆ ಪತ್ನಿ ಡಾ ಪುಷ್ಪ ಹಾಗೂ ಇತರೆ ಮುಖಂಡರ ಜೊತೆ ಭೇಟಿ ನೀಡಿ ಪುಷ್ಪನಮನ ಅರ್ಪಿಸಿ ಮಹಾದೇವ ಮೈಲಾರ ಕ್ರೀಡಾಂಗಣದ ಸ್ಟೇಡಿಯಂನಲ್ಲಿ ಕುಳಿತು ಪತ್ರಕರ್ತರೊಂದಿಗೆ ಮಾತನಾಡುತ್ತ ಕ್ಷೇತ್ರದ ಜನತೆ ಅಭಿಮಾನದ  ಗೆಲುವಿನ ಜೊತೆಗೆ  ಜವಾಬ್ದಾರಿ ಹೆಚ್ಚಿಸಿದ್ದಾರೆ. ಹಗಲಿರುಳು ಶ್ರಮಿಸಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುವೆ ಸ್ವಚ್ಛತೆ, ಶಿಕ್ಷಣ, ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವೆ ವೃತ್ತಿಯಲ್ಲಿ ವೈದ್ಯನಾಗಿರುವ ನನಗೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ವ ಬದಲಾವಣೆ ಬಯಸುವೆ ಅಲ್ಲದೆ ಕೂಡ್ಲಿಗಿಯಂತಹ ಹಿಂದುಳಿದ ತಾಲೂಕಿನಲ್ಲಿ ದೊಡ್ಡದೊಂದು ಕಣ್ಣಿನ ಆಸ್ಪತ್ರೆ ನಿರ್ಮಿಸುವೆ ಎಂದರು. ಕೂಡ್ಲಿಗಿ ಕ್ಷೇತ್ರದಲ್ಲಿ ಗೆದ್ದು ತಂದೆಯ ಕನಸನ್ನು ನನಸು ಮಾಡಿದ್ದೀರಿ ಹೇಗೆ ಅನ್ನಿಸುತ್ತಿದೆ ಎಂದಾಗ ಕ್ಷೇತ್ರದ ಜನತೆಯ ಆಶೀರ್ವಾದಿಂದ ತಂದೆಯ ಮಹದಾಸೆಯ ಕನಸು ನನಸು ಮಾಡಿದೆ ಎನ್ನುವ ಸಂತಸ ನನಗಿದೆ. ಪಕ್ಷಭೇದ ಮರೆತು ಜಾತಿಭೇಧ ಮರೆತು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವೆ ಯಾವುದೇ ತಪ್ಪುಗಳಿದ್ದರು ತಿದ್ದಿಕೊಳ್ಳುವೆ ನಿಮ್ಮೆಲ್ಲರ ಸಲಹೆ ಸೂಚನೆ ನೀಡಿದಲ್ಲಿ ಅದನ್ನು  ಅವಶ್ಯಕವಾಗಿದೆ ಸ್ವೀಕರಿಸುವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವೆಂಕಟೇಶ, ಸಾವಜ್ಜಿ ರಾಜೇಂದ್ರಪ್ರಸಾದ, ಕಾಂಗ್ರೆಸ್ಸಿನ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯಜನ್ನು, ಕಾವಲ್ಲಿ ಶಿವಪ್ಪ ನಾಯಕ,ಜಯರಾಮನಾಯಕ,ಗುಡೇಕೋಟೆ ವಿಶಾಲಾಕ್ಷಿರಾಜಣ್ಣ, ಗುರುಸಿದ್ದನಗೌಡ,ಜಿಂಕಲ್ ನಾಗಮಣಿ, ವಕೀಲ ದುರುಗೇಶ, ಮಿನಿಕೆರೆ ಪಂಪಾಪತಿ,ಶಫಿಉಲ್ಲಾ,ಹಾಗೂ ಇತರೆ ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು ಇದ್ದರು.