ನಂಜನಗೂಡು: ಜೂ.22:- ಇದೇ ತಿಂಗಳು 24ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಕೃತಜ್ಞತಾ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಪತ್ರಿಕೆ ಘೋಷ್ಠಿಯಲ್ಲಿ ತಿಳಿಸಿದರು
ಮುಂದುವರೆದು ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 47 ಸಾವಿರದ ಮತನೀಡಿ ಗೆಲ್ಲಲು ಸಹಕರಿಸಿದ ನಮ್ಮ ಮತದಾರರ ದೇವರುಗಳಿಗೆ ಪಕ್ಷದ ಕಾರ್ಯಕರ್ತರಿಗೆ ಮುಖಂಡರಿಗೆ ಮತ್ತು ಚುನಾವಣೆಯಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಗೆಲ್ಲಲು ಸಹಕರಿಸಿದ ಎಲ್ಲರಿಗೂ ಒಂದು ಕೃತಜ್ಞತೆ ಸಲ್ಲಿಸುವ ದೃಷ್ಟಿಯಿಂದ ಇದೆ ತಿಂಗಳು 24 ನೇ ತಾರೀಕು ನಗರದ ವಿದ್ಯಾವರ್ಧಕ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ದರ್ಶನ್ ಧ್ರುವ ತಿಳಿಸಿದರು
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಸಚಿವ ಡಿಕೆ ಶಿವಕುಮಾರ್ ಮತ್ತು ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಾದೇವಪ್ಪ ಸೇರಿದಂತೆ ಹಲವಾರು ಶಾಸಕರು ಸಚಿವರು ಎಲ್ಲರಿಗೂ ಆಹ್ವಾನ ನೀಡಿದ್ದೇವೆ ಎಂದರು.
ಈ ಕಾರ್ಯಕ್ರಮ ತಾರೀಕು ಬೆಳಿಗ್ಗೆ ಹನ್ನೊಂದು ಗಂಟೆಗೆ ಪಟ್ಟಣದ ವಿದ್ಯಾವರ್ಧಕ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ ಇವರಿಗೆ ಊಟದ ವ್ಯವಸ್ಥೆಯು ಕೂಡ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಶಾಸಕರಿಗೆ ಪತ್ರಕರ್ತರು ಹಲವಾರು ಪ್ರಶ್ನೆಗಳನ್ನು ಕೇಳಿದರು ಮಾಜಿ ಶಾಸಕ ಹರ್ಷವರ್ಧನ್ 800 ಕೋಟಿ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಅದರ ಮೇಲೆ ಒಂದು ರೂ ತಂದು ಕೆಲಸ ಮಾಡಲಿ ಎಂದಿದ್ದಾರೆ ಇದಕ್ಕೆ ನಿಮ್ಮ ಉತ್ತರ ಏನು ಅಂದಾಗ ನನ್ನ ಕ್ಷೇತ್ರದ ಬಗ್ಗೆ ಅರಿವಿದೆ ಮೂಲಭೂತ ಸೌಕರ್ಯ ಗುಣಮಟ್ಟದ ಕಾಮಗಾರಿ ಆಗಿಲ್ಲ ಎಂದು ಕ್ಷೇತ್ರದಲ್ಲಿ ತಿಳಿದಿದೆ ಮತ್ತು ಹೆಚ್ಚಿನ ಕಮಿಷನ್ ದಂದೆ ನಡೆದಿದೆ ಎಂದು ಕಳೆದ ಚುನಾವಣೆಯಲ್ಲಿ ಪತ್ರಿಕೆಗಳಲ್ಲಿ ಕ್ಷೇತ್ರದಲ್ಲಿ ತಿಳಿದ ಬಂದಿದೆ ಇದನ್ನು ಕಡಿವಾಣ ಹಾಕಲು ಕಾನೂನುಗಳಿವೆ, ಅದನ್ನು ಮುಂದೆ ಅನುಸರಿಸುತ್ತೇನೆ.
ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದಲ್ಲಿ ಯಾವುದೇ ರೀತಿಯ ಕಮಿಷನ್ ದಂಧೆ ಇರುವುದಿಲ್ಲ ಯಾವುದೇ ಕಾಮಗಾರಿ ನಡೆದರೂ ಕೂಡ ಗುಣಮಟ್ಟದ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳುತ್ತೇನೆ. ಅಧಿಕಾರಿಗಳಿಗೂ ಕೂಡ ಸರ್ಕಾರದ ಸೌಲತ್ತುಗಳನ್ನು ಪ್ರತಿಯೊಬ್ಬರಿಗೂ ತಲುಪುವಂತೆ ನಿಗಾ ವಹಿಸುತ್ತೇನೆ ಮುಂದೆ ನನ್ನ ಕ್ಷೇತ್ರ ಶಾಂತಿಯುತವಾಗಿ ಸರ್ಕಾರದ ಸೌಲತ್ತುಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಂತೆ ಅಧಿಕಾರಿಗಳಿಗೆ ಕ್ರಮ ವಹಿಸುತ್ತೇನೆ.
ಕ್ಷೇತ್ರ ಅಭಿವೃದ್ಧಿಗೆ ವಿಶೇಷ ಯೋಜನೆ ತರುತ್ತೇನೆ ನಮ್ಮ ಪಕ್ಷದ ಸರ್ಕಾರವಿದೆ ಸಂಪೂರ್ಣ ಅಭಿವೃದ್ಧಿ ಪಡಿಸಲು ಕ್ಷೇತ್ರಕ್ಕೆ ಕ್ರಮವಹಿಸಿ. ಕ್ಷೇತ್ರದಲ್ಲಿ ಇದ್ದು ಕಾರ್ಯಕರ್ತರ ಜೊತೆ ಕೈಜೋಡಿಸಿ ಉತ್ತಮ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಪಡಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬ್ಲಾಕ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ಸಿಎಂ ಶಂಕರ್ ಶ್ರೀಕಂಠ ನಾಯಕ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಲತಾ ಸಿದ್ದಶೆಟ್ಟಿ ಶಿವಪ್ಪ ದೇವ್ರು ಎನ್ ಎಂ ಮಂಜುನಾಥ್ ಶಿವಕುಮಾರ್ ಸತೀಶ್ ಅಡ್ವಕೇಟ್ ನಾಗರಾಜಯ್ಯ ಸೇರಿದಂತೆ ಇತರರು ಇದ್ದರು