ನನ್ನ ಕೊಲೆಗೆ ಸ್ಕೆಚ್ ಈಶ್ವರಪ್ಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.14: ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಬಳ್ಳಾರಿ ನಗರದಲ್ಲಿರುವ ತಮ್ಮ ಮನೆ ದೇವರಿಗೆ ಕುಟುಂಬ ಸದಸ್ಯರೊಂದಿಗೆ ಬಂದ ಪೂಜೆ ಸಲ್ಲಿಸಿ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂದು ಹೇಳಿದ್ದಾರೆ.
ಬೆಳಗಾವಿಯ ಹಿಂಡಲಗ ಜೈಲಿನಲ್ಲಿದ್ದ ಜಯೇಶ್ ಪುಜಾರಿ ಅಲಿಯಾಸ್ ಶಾಹಿದ್ ಶೇಖ್ ತಮ್ಮ ಕೊಲೆಗೆ ಸ್ಕೆಚ್ ಹಾಕಿರೋ ವಿಚಾರ ಗೊತ್ತಾಗಿದೆ. ಈ ವ್ಯಕ್ತಿ ಗಡ್ಕರಿ ಅವರಿಗೆ ಬೆದರಿಕೆ ಹಾಕಿದ್ರು. ನನ್ನ ಕೊಲೆಗೂ  ಸ್ಕಚ್ ಹಾಕಿದ್ರಂತೆ. ಈ ಬಗ್ಗೆ  ಗೃಹ ಸಚಿವ ಅರಗ ಜ್ಞಾನೇಂದ್ರ  ಹಿರಿಯ ಪೊಲೀಸ್ ಅಧಿಕಾರಿಗಳ  ಜೊತೆಗೆ ಮಾತನಾಡಿದ್ದೇನೆ. ಈ ಆರೋಪಿಯ ಹಿಂದೆ ಪಿಎಫ್ ಐ ನವರ ಬೆಂಬಲ ಇದೆ ಎಂದ ಅವರು. ನನಗೆ ಹೆಚ್ಚಿನ ಭದ್ರತೆ ನೀಡಿ ಎಂದು ಅರ್ಜಿ ಹಾಕಲ್ಲ. ಸರ್ಕಾರ ಕೊಡಬಹುದು ಎಂದಿದ್ದಾರೆ.
ಈ ಹಿಂದೆಯೂ ಕೊಲೆ ಬೆದರಿಕೆ ಬಗ್ಗೆ ಕರೆ ಬಂದಿತ್ತು. ಈವಿಚಾರ ಅಧಿವೇಶನದಲ್ಲಿಯೇ ಹೇಳಿದ್ದೆ ಆಗ  ಕಾಂಗ್ರೆಸ್ ಸರ್ಕಾರವಿತ್ತು ನನಗೆ ಭದ್ರತೆ ನೀಡಿದ್ರು ಎಂದರು.
ಈ‌ ಬಗ್ಗೆ  ಹೆಚ್ಚಿನ ಮಾಹಿತಿ ಇಲ್ಲ ಆದ್ರೇ ಯಾವುದೇ ಬೆದರಿಕೆ ಬಗ್ಗಲ್ಲ. ಹಿಂದುತ್ವ ವಾದಿಗಳಿಗೆ ಬೆದರಿಕೆ ಸಾಮಾನ್ಯ ಎದುರಿಸುತ್ತೇವೆ. ಇದಕ್ಕೆ ನನ್ನ ನಿಲುವು ಬದಲಾಯಿಸಲ್ಲ. ಪೊಲೀಸರು ನನಗೆ ನೀಡಿದ ಮಾಹಿತಿ ಮಾದ್ಯಮಗಳ ಜೊತೆಗೆ ಹಂಚಿಕೊಂಡಿದ್ದೇನೆಂದರು.
 ಚುನಾವಣಾ ರಾಜಕೀಯ ಬೇಡ:
ಪಕ್ಷದ ರಾಷ್ಟ್ರೀಯ ಮುಖಂಡ ಧರ್ಮೇಂದ್ರ ಪ್ರಧಾನ ಕರೆ ಮಾಡಿ ಚುನಾವಣಾ ರಾಜಕೀಯ ಬೇಡ ಎಂದು ಹೇಳಿದ್ರು. ಪಕ್ಷದ  ಶಿಸ್ತಿನ ಸಿಪಾಯಿಯಂತೆ ಅವರು ಹೇಳಿದಂತೆ ಚುನಾವಣಾ ನಿವೃತ್ತಿ ಪತ್ರ ಬರೆದು ಕಳುಹಿಸಿದ್ದೇನೆ.
ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಜಗದೀಶ್ ಶೆಟ್ಟರ್ ಲಾಭಿ‌ ವಿಚಾರ‌  ನನಗೆ ಸಂಬಂಧ ಇಲ್ಲ ನಾನು ಪಕ್ಷ ಹೇಳಿದಂತೆ ಕೇಳ್ತೇನೆ. ಕಾಲ ಕಾಲಕ್ಕೆ ಪಕ್ಷ ಹೇಳಿದಂತೆ ಕೇಳಿ ಕೊಂಡು ಬಂದಿದ್ದೇನೆಂದರು
 ಕೊಟ್ಟರೆ ಸಂತೋಷ:
ಮಗನಿಗೆ ಟಿಕೆಟ್ ಕೊಟ್ಟರೇ ಸಂತೋಷ. ಬೂತ್ ಮಟ್ಟದ ಕಾರ್ಯಕರ್ತನಿಂದ ಉಪಮುಖ್ಯಮಂತ್ರಿ ಮಾಡಿದ್ರು.
ಇದೀಗ ಪಕ್ಷದ ಕೆಲಸ ಮಾಡು ಎಂದಿದ್ದಾರೆ ಮಾಡ್ತೇನೆ.ಬಿಜೆಪಿ ಅಧಿಕಾರಕ್ಕೆ ಬರೋಕೆ ಯಾವ ಕೆಲಸ‌ ಮಾಡೋದಕ್ಕೆ ಸಿದ್ದ.
ಆಕಾಂಕ್ಷಿಗಳು ಹೆಚ್ಚಾಗಿರೋದು ನೋಡಿದ್ರೇ ಪಕ್ಷ ಬೆಳೆದಿರೋ ಗೊತ್ತಾಗ್ತದೆ. ಟಿಕೆಟ್ ಗಾಗಿ‌ ಇದೀಗ ಹಠಕ್ಕೆ ಬಿದ್ದಿದ್ದಾರೆ. ಹಿಂದೆ ಪಕ್ಷಕ್ಕೆ ಕ್ಯಾಂಡೇಟ್ ಇರಲಿಲ್ಲ. ರಾಷ್ಟ್ರೀಯ ನಾಯಕರು ಯೋಚನೆ ಮಾಡಿ ತೀರ್ಮಾನ ಮಾಡ್ತಾರೆ. ಬಿಜೆಪಿ ಬಿಟ್ಟು ಹೋಗ್ತಾರೆ ಅಂದ್ರೇ ಅವರು ಬಿಜೆಪಿ ಪಕ್ಷಕ್ಕೆ ಅನ್ಫಿಟ್ (ಯೋಗ್ಯರಲ್ಲ) ಎಂದು ಪರೋಕ್ಷವಾಗಿ ಸವದಿಗೆ ಟಾಂಗ್ ಕೊಟ್ಟರು ಈಶ್ವರಪ್ಪ.