ನನ್ನ ಊರು ನನ್ನ ಬೇರು ವಾಲ್ ಪೇಂಟಿಂಗ್

ಅಫಜಲಪುರ:ನ.14: ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಆಯಾ ಗ್ರಾಮಗಳ ಐತಿಹಾಸಿಕ ಹಿನ್ನೆಲೆ ಸಾಂಸ್ಕøತಿಕ ಪರಿಚಯ ಕುರಿತು ನನ್ನ ಊರು ನನ್ನ ಬೇರು ಎನ್ನುವ ಶಿರ್ಷೀಕೆ ಅಡಿ ವಾಲ್ ಪೇಂಟಿಂಗ್ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ತಾ.ಪಂ.ಸಹಾಯಕ ನಿರ್ದೇಶಕ ರಮೇಶ ಪಾಟೀಲ್ ಹೇಳಿದರು. ತಾಲೂಕಿನಲ್ಲಿರುವ ಫ್ರೌಡ ಶಾಲೆಯ ಚಿತ್ರಕಲಾ ಶಿಕ್ಷಕರಾದ ಅಶೋಕ ನೆಲ್ಲಗಿ, ಎಚ್.ವಿ. ಸುತಾರ, ಗುಲಾಬ ಚಂದ್ರ ಪಾಂಡ್ರೆ, ಅಣ್ಣಾರಾವ ಕೋಬಾಳ, ಸೂರ್ಯಕಾಂತ ಗೊಬ್ಬುರವಾಡಿ, ಶಿವಶಂಕರ ಕಟಗಿಗಾಣಾ, ಚಂದ್ರಕಾಂತ ಸೇರಿದಂತೆ ಹಲವಾರು ಜನರು ವಾಲ್‍ಪೇಂಟಿಂಗ್ ಕೆಲಸದಲ್ಲಿ ತೊಡಗಿದ್ದು ಅಂದವಾಗಿ ಚಂದವಾಗಿ ಚಿತ್ರಗಳು ಬಿಡಿಸಿ ಬಣ್ಣ ತುಂಬುವ ಮೂಲಕ ಜನರ ಆಕರ್ಷಣೆ ಹೆಚ್ಚಾಗಿದೆ. ಹೀಗಾಗಿ ಪರಿಸರ ಸ್ವಚ್ಛತೆ, ರೋಗಗಳು ಹರಡದಂತೆ ಜಾಗೃತಿ ಮೂಡಿಸುವುದು ಇಂತಹ ಚಿತ್ರಗಳಿಂದ ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಯಶಸ್ವಿಗಾಗಿ ಬಿಇಓ ಚಿತ್ರಶೇಖರ ದೇಗಲಮಡಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಎಲ್ಲಾ ಅಭಿವೃದ್ಧಿ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಆಯಾ ಗ್ರಾಮಗಳಲ್ಲಿ ಸಾರ್ವಜನಿಕರು ಕೂಡ ಈ ಕಾರ್ಯಕ್ರಮ ಕಂಡು ಸಂತಸ ಹಂಚಿಕೊಳ್ಳುತ್ತಿರುವುದು ಕಂಡು ಬರುತ್ತಿದೆ ಎಂದು ರಮೇಶ ಪಾಟೀಲ ತಿಳಿಸಿದರು.