ನನ್ನ ಅವಧಿಯಲ್ಲಿ ಅಧಿಕಾರಿ ವರ್ಗ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು-ಶಾಸಕ ಶಾಂತನಗೌಡ

ಹೊನ್ನಾಳಿ.ಜೂ.೧೯: ಸರ್ಕಾರಿ ನೌಕರರ ಸೇವಾ ಭದ್ರತೆ ಹಾಗೂ ನಿವೃತ್ತಿ ಜೀವನ ಸುಗಮವಾಗಿ ಸಾಗಲು ಮುಂಬರುವ ಬಜೆಟ್‌ನಲ್ಲಿ ವಿಷಯ ಮಂಡಿಸಿದರೆ ತಮ್ಮ ಎರಡೂ ಕೈಗಳನ್ನು ಎತ್ತುವ ಮೂಲಕ ಎನ್.ಪಿ.ಎಸ್.ನೌಕರರ ಪರವಾಗಿ ನಿಲ್ಲುತ್ತೇನೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.ಅವರು ಗೊಲ್ಲರಹಳ್ಳಿಯ ನಿವಾಸದಲ್ಲಿ ಎನ್.ಪಿ.ಎಸ್.ನೌಕರರ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.14 ದಿನಗಳ ಕಾಲ ಎನ್.ಪಿ.ಎಸ್.ನೌಕರರ ವರ್ಗದವರು ತಮ್ಮ ಇಚ್ಚಾ ಶಕ್ತಿ ಪ್ರದರ್ಶಿಸಿ ಮುಷ್ಕರ ನಡೆಸಿ ಸರ್ಕಾರವನ್ನು ಮಣಿಸಿದ್ದೀರಿ.ಚುನಾವಣಾ ಸಮಯದಲ್ಲಿ ಎನ್.ಪಿ.ಎಸ್.ನೌಕರರು ನಮ್ಮ ಜೊತೆಗಿದ್ರಿ ಇನ್ನು ಮುಂದೆ ನಮ್ಮ ಸರ್ಕಾರ ನಿಮ್ಮ ಜೊತೆಗಿರುತ್ತೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.ಕಾಂಗ್ರೆಸ್ ಪಕ್ಷವು ನಿಮ್ಮ ಬೇಡಿಕೆಗಳನ್ನು ಈಡೇರಿಸಲಿದೆ ನೀವು ಜೀವನ ಪರ್ಯಂತ ಕಾಂಗ್ರೆಸ್ ಪಕ್ಷಕ್ಕೆ ಚಿರಋಣಿಯಾಗಿರಬೇಕು ಎಂದು ಮನವಿ ಮಾಡಿದರು. ಹೊಸ ಪಿಂಚಣಿ ಯೋಜನೆಯ ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನು ಎಲ್ಲಾ ಸರ್ಕಾರಿ ನೌಕರರ ಹಿತದೃಷ್ಠಿಯಿಂದ ನೀವುಗಳು ಕಳೆದ 10 ವರ್ಷಗಳಿಂದ ಸತತವಾಗಿ ಹೋರಾಟ ಮಾಡುತ್ತಾ ಬಂದಿರುವ ಉದ್ದೇಶವನ್ನು ನಮ್ಮ ಕಾಂಗ್ರೆಸ್ ಸರ್ಕಾರ ಈಡೇರಿಸಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿದೆ ಎಂದು ವಿವರಿಸಿದರು.ಎನ್.ಪಿ.ಎಸ್.ನೌಕರರ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣ ಮಾತನಾಡಿ ಈ ಸಂಘಟನೆಯು ಹುಟ್ಟಲಿಕ್ಕೆ ಮೂಲ ಕಾರಣ ದಾವಣಗೆರೆ ಜಿಲ್ಲೆಯಾಗಿದೆ.ಫ್ರೀಡಂ ಪಾರ್ಕಿನಲ್ಲಿ ಸತತ 14 ದಿನಗಳ ಕಾಲ ಐತಿಹಾಸಿಕ ಹೋರಾಟ ಮಾಡಿದ್ದಲ್ಲದೇ “ವೋಟ್ ಫಾರ್ ಒಪಿಎಸ್” ಅಭಿಯಾನದ ಮೂಲಕ ನಮ್ಮ ಸಂಘಟನೆಯವರು ಗುಪ್ತಗಾಮಿನಿಯ ರೀತಿಯಲ್ಲಿ ಕಾರ್ಯಪ್ರವೃತ್ತರಾಗಿ 135 ಸೀಟುಗಳಿಂದ ಕಾಂಗ್ರೆಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯುವ ಹಾಗಾಯಿತು ಎಂದರು.ನಮ್ಮ ಹೋರಾಟವು ಯಾವುದೇ ಪಕ್ಷ-ವ್ಯಕ್ತಿಯ ವಿರುದ್ಧವಾಗಿರದೇ ನಮ್ಮ ಅಸ್ತಿತ್ವದ ಹೋರಾಟವಾಗಿದ್ದಿತು ಎಂದು ವಿವರಿಸಿದರು.ಎನ್.ಪಿ.ಎಸ್.ನೌಕರರ ಜಿಲ್ಲಾಧ್ಯಕ್ಷ ಶಿವಕುಮಾರ್ ಮಾತನಾಡಿ ಎಲ್ಲಾ ಜಾತಿಯ ನೌಕರರು ಪಕ್ಷ_ಭೇದ ಮರೆತು ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.ನಮ್ಮ ಬೇಡಿಕೆಗಳನ್ನು ಈಡೇರಿಸಿದ್ದೇ ಆದರೆ ನಮ್ಮಗಳ ಮನೆ-ಮನೆಗಳಲ್ಲಿ ತಮ್ಮ ಫೋಟೋಗಳು ಶಾಶ್ವತವಾಗಿರುತ್ತವೆ ಎಂದು ತಿಳಿಸಿದರು.ಎನ್.ಪಿ.ಎಸ್.ನೌಕರರ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ನಾಯ್ಕ್ ಮಾತನಾಡಿ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಿದ ಏಕೈಕ ಸಂಘ ನಮ್ಮ ಎನ್.ಪಿ.ಎಸ್.ನೌಕರರ ಸಂಘವೆAದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.ಹಳೆಯ ಪಿಂಚಣಿ ಯೋಜನೆಯವರಿಗೆ 100% ವೇತನ ದೊರೆತರೆ ನಮ್ಮ ವೇತನದಲ್ಲಿ 10% ವೇತನ ಕಡಿತಗೊಳ್ಳುತ್ತದೆ ಎಂದರು.5 ವರ್ಷ ಶಾಸಕರಾದವರಿಗೆ ಅವರ ಜೀವಿತಾವಧಿಯವರೆಗೂ ಪಿಂಚಣಿ ದೊರೆಯುತ್ತದೆ ಆದರೆ ನಮಗ್ಯಾಕೆ ಈ ತಾರತಮ್ಯವೆಂದು ಪ್ರಶ್ನಿಸಿದರು.ಸಭೆಯಲ್ಲಿ ಹಳೆಯ ಪಿಂಚಣಿಗೆ ಒತ್ತಾಯಿಸಿ ಟೋಪಿ ಮತ್ತು ಟೀ-ಶರ್ಟ್ ಧರಿಸಿ ಬಂದದ್ದು ಗಮನ ಸೆಳೆಯಿತು.ಎಚ್.ಜಿ.ಎಂ.ಬಸವರಾಜ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕ.ರಾ.ಸ.ಎನ್.ಪಿ.ಎಸ್.ನೌ.ಸಂಘ,ಎಸ್.ಎA.ಸAಗಮೇಶ್ ಜಿಲ್ಲಾಧ್ಯಕ್ಷರು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ,ವಿಜಯ್ ಕುಮಾರ್ ಕ.ರಾ.ಸ.ನೌ.ಸಂಘ ನ್ಯಾಮತಿ,ಎಚ್.ಸಿ.ಚಂದ್ರಶೇಖರ್ ಮಾಜಿ ಅಧ್ಯಕ್ಷರು ಕ.ರಾ.ಸ.ನೌ.ಸಂಘ ಹೊನ್ನಾಳಿ,ಕೆ.ಅರುಣ್ ಕುಮಾರ್ ಗೌರವಾಧ್ಯಕ್ಷರು ಕ.ರಾ.ಸ.ಎನ್.ಪಿ.ಎಸ್.ನೌ.ಸಂಘ,ಎಚ್.ಜಿ.ಎA.ಬಸವರಾಜ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕ.ರಾ.ಸ.ಎನ್.ಪಿ.ಎಸ್.ನೌ.ಸಂಘ,ನಾಗರಾಜ್ ದೊಂಕತ್ತಿ ಗೌರವಾಧ್ಯಕ್ಷರು ಕ.ರಾ.ಪ್ರಾ.ಶಾ.ಶಿ.ಸಂಘ,ಎಚ್.ಕೆ.ಚAದ್ರಶೇಖರ್ ಸಹ ಕಾರ್ಯದರ್ಶಿ ಕ.ರಾ.ಪ್ರಾ.ಶಾ.ಶಿ.ಸಂಘ,ಎಚ್.ಜಿ.ಪುರುಷೋತ್ತಮ ಉಪಾಧ್ಯಕ್ಷರು ಕ.ರಾ.ಪ್ರಾ.ಶಾ.ಶಿ.ಸಂಘ,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅವಳಿ ತಾಲ್ಲೂಕುಗಳ ಎಲ್ಲಾ ನಿರ್ದೇಶಕರುಗಳು ಹಾಗೂ ವೃಂದ ಸಂಘಗಳ ಪದಾಧಿಕಾರಿಗಳು ಮತ್ತು ನೌಕರರು ಉಪಸ್ಥಿತರಿದ್ದರು.