ನನ್ನನ್ನು ಬಂಧಿಸಿ ಮೋದಿಗೆ ರಾಹುಲ್ ಸವಾಲು

ನವದೆಹಲಿ, ಮೇ 16- ನಮ್ಮ ಮಕ್ಕಳ ಲಸಿಕೆಯನ್ನು ಏಕೆ ವಿದೇಶಕ್ಕೆ ಕಳುಹಿಸುತ್ತೀರಾ ಎಂದು ಕೇಳುವ ಫೋಸ್ಟರ್ ನಲ್ಲಿನ ಚಿತ್ರವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ, ರಾಹುಲ್ ಗಾಂಧಿ ನನ್ನನ್ನೂ ಬಂಧಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ್ದಾರೆ.
ಲಸಿಕೆ ವಿಚಾರವಾಗಿ ರಾಷ್ಟ್ರ ರಾಜಧಾನಿಯ ಹಲವೆಡೆ ಫೋಸ್ಟರ್ ಅಂಟಿಸಿದ್ದ ಆರೋಪದ ಮೇರೆಗೆ 24 ಜನರನ್ನು ದೆಹಲಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಸವಾಲು ಹಾಕಿದ್ದಾರೆ.
ಇಂತಹ ಫೋಸ್ಟರ್ ಗಳನ್ನು ತನ್ನ ಮನೆಯ ಕಾಂಪೌಂಡ್ ಮೇಲೆ ಹಾಕುವುದಾಗಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
ಕೋವಿಡ್-19 ಲಸಿಕೆ ರಫ್ತು ನೀತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಫೋಸ್ಟರ್ ಅಂಟಿಸಿದ್ದ
ಹಲವರನ್ನು ಬಂಧಿಸಿರುವ ಕೇಂದ್ರದ ಕ್ರಮಕ್ಕೆ ಅವರು ತೀವ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಲಸಿಕೆಯನ್ನು ಏಕೆ ವಿದೇಶಗಳಿಗೆ ಕಳುಹಿಸುತ್ತಿರಾ ಎಂದು ಕೇಳುವ ಫೋಸ್ಟರ್ ನೊಂದಿಗೆ ಟ್ವಿಟರ್ ನಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿಕೊಂಡಿದ್ದಾರೆ. ಜನರಿಗೆ ಲಸಿಕೆ, ಔಷಧ ಮತ್ತು ಆಕ್ಸಿಜನ್ ಸಿಗದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಠಿಣ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಪ್ರತಿಪಕ್ಷಗಳು ಮುಂದಾಗಿವೆ.