ನನ್ನನ್ನು ತಡೆಯಲು ಸಾಧ್ಯವಿಲ್ಲ

ನವದೆಹಲಿ,ಮೇ.೧೩- ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಸನಿಹಕ್ಕೆ ಬರುತ್ತಿದ್ದಂತೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಇನ್ನು ಮುಂದೆ ಯಾರೂ ತಡೆಯಲಾರರು ಎನ್ನುವ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ಕಾಂಗ್ರೆಸ್ ತನ್ನ ಟ್ವಿಟ್ಟರ್ ನಲ್ಲಿ ನಾನು ಅಜೇಯ. ತುಂಬಾ ಆತ್ಮವಿಶ್ವಾಸ ಹೊಂದಿದ್ದೇನೆ. ಹೌದು, ಇನ್ನು ಮುಂದೆ ತಡೆಯಲಾಗದು ಎನ್ನುವ ವಿಡಿಯೋ ಹಂಚಿಕೊಂಡಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.ವಿಡಿಯೋದಲ್ಲಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ವೀಡಿಯೊ ಹಂಚಿಕೊಂಡಿದ್ದು ಗಮನ ಸೆಳೆದಿದೆ.೨೨೪ ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ೧೧೩ ರತ್ತ ಸಾಗಿದೆ. ಪಕ್ಷದ ನಾಯಕ ರಾಹುಲ್ ಗಾಂಧಿಯ ’ಭಾರತ್ ಜೋಡೋ ಯಾತ್ರೆಯ ವೀಡಿಯೊವನ್ನು ಟ್ವೀಟ್ ಮಾಡಿದೆ, ಸಿಯಾ ಅವರ “ಅನ್‌ಸ್ಟಾಪಬಲ್” ಹಾಡು ಹಿನ್ನೆಲೆಯಲ್ಲಿ ಮೂಡಿ ಬಂದಿದೆ.
ವೀಡಿಯೊದಲ್ಲಿ ಹಾಡಿನ ಸಾಹಿತ್ಯ ಹೀಗಿದೆ- ಇನ್ನು ತಡೆಯಲಾಗದು, ಅಜೇಯ ನಾನು. ಹೌದು, ಪ್ರತಿಯೊಂದು ಪಂದ್ಯ ಗೆಲ್ಲುತ್ತೇನೆ. ತುಂಬಾ ಶಕ್ತಿಶಾಲಿ. ಆಡಲು ತುಂಬಾ ಆತ್ಮವಿಶ್ವಾಸವಿದೆ. ಹೌದು, ಇನ್ನು ಮುಂದೆ ತಡೆಯಲಾಗದು ಎನ್ನುವ ಸಾಲು ಇದಾಗಿದೆ.
ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ಎಣಿಕೆಯ ಆರಂಭಿಕ ಟ್ರೆಂಡ್‌ಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿಯಿಂದ ಕಾಂಗ್ರೆಸ್‌ಗೆ ಬದಲಾದ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ-ಕೇಂದ್ರದಲ್ಲಿ ಹಿನ್ನಡೆಯಲ್ಲಿದ್ದಾರೆ.