ನನ್ನನಗರ ನನ್ನಬಜೆಟ್ ಅಭಿಯಾನ: ವರದಿ ಸಲ್ಲಿಕೆ

ಕಲಬುರಗಿ,ಮಾ 3: ಮಹಾನಗರ ಪಾಲಿಕೆ ಬಜೆಟ್ ಪ್ರಕ್ರಿಯೆಗೆ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನನ್ನ ನಗರ ನನ್ನ ಬಜೆಟ್ ಅಭಿಯಾನದ ವರದಿಯನ್ನು ಜನಾಗ್ರಹ ಸಂಸ್ಥೆಯಿಂದ ಪಾಲಿಕೆ ಆಯುಕ್ತ ಭುವನೇಶ್ ದೇವಿದಾಸ್ ಪಾಟೀಲ್ ಅವರಿಗೆ (ಕಲಬುರಗಿ ಮಹಾನಗರ ಪಾಲಿಕೆಗೆ) ಸಲ್ಲಿಸಲಾಯಿತು.
3,249 ನಾಗರಿಕರ ಸಲಹೆಗಳು ನಗರದ 55 ವಾರ್ಡ್ ಗಳಿಂದ 2023-24ರ ಹಣಕಾಸು ವರ್ಷದ ಕಲಬುರಗಿ ಮಹಾನಗರ ಪಾಲಿಕೆ ಬಜೆಟ್‍ನಲ್ಲಿಪರಿಗಣಿಸಲು ಸ್ವೀಕೃತವಾಗಿದ್ದು, ಈ ಬಜೆಟ್ ಸಲಹೆಯಲ್ಲಿ ನಾಗರಿಕರು ಹವಾಮಾನ ಸಂಬಂಧಿಸಿದ ವರ್ಗಕ್ಕೆ ಮುಖ್ಯ ಆದ್ಯತೆಯನ್ನುನೀಡಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ವಾರ್ಷಿಕವಾಗಿ ನಗರದಾದ್ಯಂತ ಹಲವಾರು ಸಂಘ ಸಂಸ್ಥೆಗಳ, ಕ್ಷೇಮಾಭಿವೃದ್ಧಿ ಸಂಘಗಳ, ಕಲಬುರಗಿ ವಾರ್ಡ್‍ಸಮಿತಿ ಬಳಗ ಹಾಗೂ ಜನಾಗ್ರಹ ಸಂಸ್ಥೆಯ ಸಹಯೋಗದೊಂದಿಗೆ ನಾಗರಿಕರ ಸಹಭಾಗಿತ್ವದ ಬಜೆಟ್ ಕುರಿತು ಅಭಿಪ್ರಾಯ ಸಂಗ್ರಹಣೆ ಮಾಡುವಪ್ರಕ್ರಿಯೆಯೇ ನನ್ನನಗರನನ್ನಬಜೆಟ್ ಅಭಿಯಾನವಾಗಿದ್ದು. 1ನೇ ಆವೃತ್ತಿ 2ನೇ ಫೆಬ್ರವರಿ 2023 ರಂದು ಕಲಬುರಗಿಮಹಾನಗರ ಪಾಲಿಕೆ ಆವರಣದಲ್ಲಿ ಚಾಲನೆ ನೀಡಲಾಗಿತ್ತು. ಬಜೆಟ್ ಸಲಹೆಗಳನ್ನು ಸ್ವೀಕರಿಸಲು 11 ದಿನಗಳವರೆಗೆ 3 ವಲಯಗಳಲ್ಲಿ ಎಲ್ಲಾ 55ವಾರ್ಡ್ ಗಳನ್ನು ಬಜೆಟ್ ಬಸ್ ತಲುಪಿ 3,249 ನಾಗರಿಕರ ಬಜೆಟ್ ಸಲಹೆಗಳನ್ನು ಸ್ವೀಕರಿಸಲಾಗಿದೆ. ನಾಗರಿಕರ ಈ ಬಜೆಟ್ ಸಲಹೆಗಳನ್ನುಪರಿಗಣಿಸಿ 2023-24ರ ಕಲಬುರಗಿ ಮಹಾನಗರ ಪಾಲಿಕೆ ಬಜೆಟ್ ನಲ್ಲಿ ಸೇರಿಸಲು ವಿವರವಾದ ವರದಿಯನ್ನು ಆಯುಕ್ತರ ಕಚೇರಿಯಲ್ಲಿ ಸಲ್ಲಿಸಲಾಗಿದೆ.
ತಮ್ಮ ವಾರ್ಡ ಮಟ್ಟದಲ್ಲಿ ತಕ್ಷಣವೇ ಗಮನಹರಿಸಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾಗರಿಕರುಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಬಜೆಟ್ ಸಲಹೆಗಳನ್ನು ನೀಡಿರುವುದು ಸಂತೋಷದ ಸಂಗತಿಯಾಗಿದೆ. ಕಲಬುರಗಿ ವಾರ್ಡ್ ಸಮಿತಿ ಬಳಗದನೆರವಿನೊಂದಿಗೆ ಈ ಅಭಿಯಾನ ಯಶಸ್ವಿಯಾಗಿ ಜರುಗಿದೆ. ಕಲಬುರಗಿ ಮಹಾನಗರ ಪಾಲಿಕೆ ಬಜೆಟ್ ನಲ್ಲಿ ನಾಗರಿಕರು ನೀಡಲಾದ ಸಲಹೆಗಳಿಗೆಸೂಕ್ತವಾದ ಹಣಕಾಸು ಹಂಚಿಕೆ ಸಂಭವಿಸಿದಾಗ ಇದರ ಯಶಸ್ಸನ್ನು ವೀಕ್ಷಿಸಬಹುದು ಎಂದುನಾಗರಿಕ ಸಹಭಾಗಿತ್ವದ(ಕರ್ನಾಟಕ) ಜನಾಗ್ರಹ ವ್ಯವಸ್ಥಾಪಕ ಮಂಜುನಾಥ ಹಂಪಾಪುರ ಎಲ್ ತಿಳಿಸಿದ್ದಾರೆ.
ಬಜೆಟ್ ಮತ್ತು ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ನಾಗರಿಕರ ತೊಡಗಿಸಿಕೊಳ್ಳುವಿಕೆಯ ಸಾಂಸ್ಥಿಕೀಕರಣದ ಕಡೆಗೆ ಇದು ಮಹತ್ವದ
ಹೆಜ್ಜೆಯಾಗಿದೆ. ಮುಂದಿನ ಸ್ವಾಭಾವಿಕ ಹಂತವೆಂದರೆ, ತಮ್ಮದೇ ಆದ ವಾರ್ಷಿಕ ವಾರ್ಡ್ ಅಭಿವೃದ್ಧಿ ಯೋಜನೆಗಳನ್ನು ಅಭಿವೃದ್ಧಿ ಪಡಿಸಲು
ಅನುವು ಮಾಡಿಕೊಡುವ ಮೂಲಕ ವಾರ್ಡ್ ಮಟ್ಟದಿಂದ ನಗರ ಮಟ್ಟಕ್ಕೆ ಪೂರ್ಣ ಪ್ರಮಾಣದ ತಳಮಟ್ಟದ ಬಜೆಟ್ ಸಮಗ್ರ
ಸಂಯೋಜನೆಯಾಗಿದೆ. ಕಲಬುರಗಿ ವಾರ್ಡ ಸಮಿತಿ ಬಳಗ, ಕಲಬುರಗಿ ಮಹಾನಗರ ಪಾಲಿಕೆಯ ಈ ಅಭಿಯಾನದ ನೇತೃತ್ವ ವಹಿಸಿದ್ದಕ್ಕೆ ಹೆಮ್ಮೆಇದೆ ಎಂದು ಜನಾಗ್ರಹದ ಮುಖ್ಯಸ್ಥ ಸಂತೋಷ ನರಗುಂದ ತಿಳಿಸಿದ್ದಾರೆ