ನನ್ನದೇ ಗೆಲವು ನಲಪಾಡ್ ವಿಶ್ವಾಸ

ಕೆ.ಆರ್.ಪುರ,ಜ.೧೩- ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಹೆಚ್ಚು ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸವನ್ನು ಮಹಮ್ಮದ್ ನಲಪಾಡ್ ಅವರು ವ್ಯಕ್ತಪಡಿಸಿದರು.ಕ್ಷೇತ್ರದ ಹೊರಮಾವು ವಾಡ್೯ನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮಾತಾನಾಡಿದರು.

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಸಂಘಟನೆಗೆ ಆದ್ಯತೆ ನೀಡುತ್ತೆನೆಂದು ಭರವಸೆ ನೀಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದ ಅವಧಿಯಲ್ಲಿ ಹಲವು ಜನಪ್ರಿಯ ಕಾರ್ಯಗಳನ್ನು ಮಾಡಿದ್ದು ಮುಂದಿನ ಭಾರಿ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಯುವ ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್, ಮಾಜಿ ಪಾಲಿಕೆ ಸದಸ್ಯೆ ರಾದಮ್ಮ ವೆಂಕಟೇಶ್, ಮುಖಂಡರಾದ ಅಗರ ಪ್ರಕಾಶ್,ಪ್ರಸನ್ನ, ದೀಪು,ಚಂದ್ರು,ಅಮರ್,ಶ್ಯಾಮ್ ಇದ್ದರು.