ನನಗೆ ಟಿಕೆಟ್ ಸಿಗುವ ಭರವಸೆ ಇದೆ.ಮುನಿಸ್ವಾಮಿ

ಮಾಲೂರು.ಮಾ.೨೦:ಮುಂದಿನ ತಿಂಗಳು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಪಕ್ಷಗಳಿಂದ ನನಗೆ ಟಿಕೆಟ್ ನೀಡುವ ಬಗ್ಗೆ ಭರವಸೆ ಇದೆ ರಾಜ್ಯ ಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ ಸಹ ಕೋಲಾರ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿರವರ ಸಮರ್ಥ ಅಭ್ಯರ್ಥಿ ಎಂಬುದಾಗಿ ನಾಯಕರು ಚುನಾವಣೆ ಸಮಿತಿಯಲ್ಲಿ ಚರ್ಚಿಸಿದ್ದಾರೆಂದು, ಕೋಲಾರ ಸಂಸದ ಎಸ್.ಮುನಿಸ್ವಾಮಿ ತಮ್ಮ ಮನದಾಳದ ಮಾತನ್ನು ತಿಳಿಸಿದರು.
ಅವರು ತಮ್ಮ ಸ್ವಗ್ರಾಮವಾದ ಯಲುವಗುಳಿ ಗ್ರಾಮದ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅನೇಕ ದಿನಗಳಿಂದ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೇಸ್ ಪಕ್ಷದ ವಿರುದ್ಧ ಆಯ್ಕೆ ಮಾಡಲು ಆ ಪಕ್ಷದ ವರಿಷ್ಟರು ಮಾಜಿ ಮುಖ್ಯಮಂತ್ರ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೊಂದಿಗೆ ಜೆಡಿಎಸ್ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಮುಖಂಡರೊಡನೆ ಚರ್ಚಿಸುತ್ತಿದ್ದು, ಈಗಲು ಚರ್ಚೆ ಮುಂದುವರೆಯುತ್ತಿದೆ. ಈ ಲೋಕಸಭಾ ವ್ಯಾಪ್ತಿಯಲ್ಲಿ ೮ ವಿಧಾನಸಭಾ ಕ್ಷೇತ್ರಗಳಿದ್ದು ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೆಚ್ಚು ಮತ ಬಂದಿದ್ದರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನೆ ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಚರ್ಚಿಸುತ್ತಿದ್ದಾರೆ. ಆದರೆ ಆ ಪಕ್ಷದಲ್ಲಿ ಅನೇಕ ಜನ ಆಕಾಂಕ್ಷಿಗಳಿದ್ದಾರೆ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಾಯಕರುಗಳಿಗೆ ಗೊಂದಲ ಉಂಟಾಗಿದೆ. ಆದುದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ ಬಿಜೆಪಿಯ ಹಾಲಿ ಸಂಸದರೇ ಸೂಕ್ತ ಅಭ್ಯರ್ಥಿ ಎಂಬ ಮಾತುಗಳು ಅಂತಿಮಗೊಂಡಂತೆ ಇವೆ. ಆದುದರಿಂದ ನನಗೆ ಟಿಕೆಟ್ ನೀಡುವ ಸಂಭವ ಇರುವುದರಿಂದ ಹಾಗೂ ಹೈಕಮಾಂಡ್ ನನಗೆ ಏನೇ ತೀರ್ಮಾನ ನೀಡಿದರೂ ನಾನು ಅದಕ್ಕೆ ಬದ್ದನಾಗಿರುತ್ತೇನೆ. ಆದುದರಿಂದ ನಾನು ನನ್ನ ಸ್ವಗ್ರಾಮದ ಮನೆದೇವರು ಕರಗದಮ್ಮನಿಗೆ ಪೂಜೆ ಸಲ್ಲಿಸಿ ಬಂದಿದ್ದು ಪೂಜೆ ಸುಸೂತ್ರವಾಗಿ ನೆರವೇರಿತು ಎಂದರು.
ಮೋದಿಯವರನ್ನು ಪ್ರಧಾನಿ ಮಾಡುವುದೇ ನಮ್ಮ ಧೇಯವಾಗಿದ್ದು, ಅದಕ್ಕೆ ನಾವು ಎಲ್ಲದಕ್ಕೂ ಸಿದ್ದರಿರಬೇಕೆಂದರು. ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಹೇಳಿಕೊಳ್ಳುವಂತೆ ಎಡಗೈ ಬಲಗೈ ಎಂಬ ತಾರತಮ್ಯ ನಮ್ಮ ಬಿಜೆಪಿ ಪಕ್ಷದಲ್ಲಿ ಇಲ್ಲ, ಕಾಂಗ್ರೇಸ್ ಪಕ್ಷವನ್ನು ಸೋಲಿಸುವದೇ ನಮ್ಮ ಗುರಿ ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳು ಕಾರ್ಯಕರ್ತರು ಬೇದಭಾವ ಮರೆತು ನಮ್ಮನ್ನು ಬೆಂಬಲಿಸಿ ಎಂದರು.
ಮಾ.ತಾ.ಪಂ.ಸದಸ್ಯ ರಮೇಶ್‌ಗೌಡ, ಮುನಿಸ್ವಾಮಿಗೌಡ, ಓಜರಹಳ್ಳಿ ಮುನಿಯಪ್ಪ, ಗೋಪಾಲಕೃಷ್ಣ, ಪ್ರಶಾಂತ್, ಸುರೇಶ್, ನಾಗರಾಜ್, ರಾಜೇಂದ್ರ, ಶ್ರೀನಿವಾಸ್, ಕೆ.ರಾಮಚಂದ್ರಪ್ಪ, ಈಶ್ವರ, ಇನ್ನೂ ಮುಂತಾದ ಕಾರ್ಯಕರ್ತರು ಮುಖಂಡರು ಹಾಜರಿದ್ದರು.