
ಬಳ್ಳಾರಿ, ಮಾ.13: ನನಗೆ ಕಾಂಗ್ರೆಸ್ ಪಕ್ಷ ಪ್ರಸಕ್ತ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೂ ಕಾಂಗ್ರೆಸ್, ಕೊಡದಿದ್ದರೂ ಕಾಂಗ್ರೆಸ್ ನಲ್ಲಿರುವೆ ಎಂದು ಮಾಜಿ ಶಾಸಕ ಅನಿಲ್ ಹೆಚ್, ಲಾಡ್ ಹೇಳಿದ್ದಾರೆ.
ಇಲ್ಲಿನ ವೀರನಗೌಡ ಕಾಲೋನಿಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು.
ನನಗೆ ಟಿಕೆಟ್ ಸಿಕ್ಕು ಗೆದ್ದರೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುವೆ, ತ್ಯಾಜ್ಯ ಸಂಸ್ಕರಣೆಗೆ ಒತ್ತು ನೀಡಲಿದೆಂದರು.
ಶ್ರೀರಾಮುಲು ಸಿಎಂ ಆಗಲಿ:
ನಾನು ಬಳ್ಳಾರಿಗನಾಗಿ, ಬಳ್ಳಾರಿ ಅಭಿವೃದ್ಧಿಗಾಗಿ ಬಿಜೆಪಿಯಲ್ಲಿ ಶ್ರೀರಾಮುಲು ಅವರು ಮುಖ್ಯ ಮಂತ್ರಿ ಆಗಲಿ ಎಂದು ಬಯಸುವೆ ಇದರಲ್ಲಿ ತಪ್ಪೇನಿದೆಂದರು.
ಅಕ್ರಮವಾಗಿ ಮನೆ ಖರೀದಿ:
ತಾವು ಯಾವ ಆಸ್ತಿ ಹಾಕಿಕೊಂಡಿಲ್ಲ ಎಂದು ಹೇಳುತ್ತಿದ್ದೀರಿ ಹಾಗದರೇ
2008 ರಲ್ಲಿ ವೀರನಗೌಡ ಕಾಲೋನಿಯಲ್ಲಿ ಮನೆ ಖರೀದಿ ಮಾಡಿದ್ದೆ, ಜನಾರ್ಧನರೆಡ್ಡಿಯವರೇ ಅದು ನಿಮ್ಮ ಮಾವನ ಹೆಸರಿನ ಮೇಲೆ ಆಗಿದೆ, ಹೇಗೆ ಆಯ್ತು ಹೇಳಿ ಎಂದರು.
ನಗರದ ಬೆಳಗಲ್ಲು ರಸ್ತೆಯಲ್ಲಿ ಮೂರುನೂರು ಎಕರೆ ಜಮೀನು ಖರೀದಿ ಮಾಡಿದ್ದು ಹೇಗೆ. ಟೀಚರ್ಸ್ ಕಾಲೋನಿಯಲ್ಲಿನ ಜನರನ್ನು ಒಕ್ಕಲು ಎಬ್ಬಿಸಿದಿರಿ, ಹಾವಂಬಾಯಿ ಬಳಿ 150 ಎಕರೆ ನಧಾಪ್ ಜನಾಂಗಕ್ಕೆ ಸೇರಿದ ಜಮೀನು ಹಾಕಿಕೊಂಡಿದ್ದೀರಿ.
ಡಿಸಿ ಶಿವಪ್ಪ ಇದ್ದಾಗ ಮಾಡಿದ್ದೀರಿ ಎಂದು ಆರೋಪಿಸಿದರು.
ಇಬ್ಬರು ಮೂವರು ಗಣ್ಯ ವ್ಯಕ್ತಿಗಳು, ಜಿಂದಾಲ್ ಸಂಸ್ಥೆಯ ಉಪಾಧ್ಯಕ್ಷರ ಸಮ್ಮುಖದಲ್ಲಿ ಜಿಂದಾಲ್ ಗೆಸ್ಟ್ ಹೌಸ್ ನಲ್ಲಿ ಕರೆದು ಬಂದ್ ಮಾಡಿದ್ದ ನಮ್ಮ ಮೈನ್ಸ್ ಶುರು ಮಾಡಲು ಆಂದ್ರ ಪ್ರದೇಶದ ಅಂದಿನ ಮುಖ್ಯ ಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಬಳಿ ಕೇಳಿದ್ದೆ ಆ ಹಿನ್ನಲೆಯಲ್ಲಿ ಜಿಂದಾಲ್ ಗೆ ಕರೆಸಿ ಮೈನ್ಸ್ ಆರಂಭ ಇನ್ನು ಮೂರು ದಿನದಲ್ಲಿ ಶುರು ಆಗಲಿದೆಂದರು.
2009 ರಲ್ಲಿ ಸಬ್ ರಿಜಿಸ್ಟರ್ ಕಚೇರಿಯೇ ಜಿಂದಾಲ್ ಗೆ ಬಂದು ನನ್ನ ಮನೆಯನ್ನು ಒತ್ತಾಯಪೂರ್ವಕವಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆಂದು ಆರೋಪಿಸಿದರು.
ರೆಡ್ಡಿ ಸಹೋದರರ ಜೊತೆ ನಾನು ಸಹ ಒಬ್ಬ ಸಹೋದರನಂತೆ ಐದನವನಾಗಿದ್ದೆ. 2006 ರಲ್ಲಿ ನನ್ನನ್ನು ಸೇರಿಸಿ ಅಂದಿನ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು 150 ಕೋಟಿ ರೂ ಹಗರಣದ ಬಗ್ಗೆ ಆರೋಪ ಮಾಡುತ್ತಾರೆ. ನಾನು ಅದಕ್ಕೆ ಒಪ್ಪಲಿಲ್ಲ. ಅದಕ್ಕಾಗಿ ನನಗೆ ಮುಂದೆ ಬಿಜೆಪಿ ಟಿಕೆಟ್ ಬರದಂತೆ ಮಾಡುವೆ ಎಂದು ಜನಾರ್ಧನರೆಡ್ಡಿ ಹೇಳಿದ್ದರು. ಇದಕ್ಕೆ ಯಡಿಯೂರಪ್ಪ ಅವರು ಸಹ ತಾಳ ಹಾಕಿದ್ದರು.
ಅದಕ್ಕಾಗಿ ನಾನು ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದೆ ಎಂದರು.
ನಾನು ಶಾಸಕನಾಗಿದ್ದಾಗ ಒಂದು ಕ್ಲಬ್ ಆರಂಭಿಸಲು 18 ಲಕ್ಷ ರೂ ಆಫರ್ ಬಂದರೂ ಒಪ್ಪಲಿಲ್ಲ. ಈಗ ನೋಡಿ ನಗರದಲ್ಲಿ ಹೇಗೆ ಕ್ಲಬ್ ಶುರುವಾಗಿವೆ ಎಂದರು.
ನಾನು 24 ಕ್ಯಾರೆಟ್ ಗೋಲ್ಡ್ ಅಲ್ಲ. ಆದರೆ ಅನಿಲ್ ಲಾಡ್ ಅಷ್ಟೇ ಎಂದರು.
ಒಟ್ಟಾರೆ ನಮಗಾದ ಅನ್ಯಾಯದ ಬಗ್ಗೆ ತನಿಖೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಲಿದೆ. ರೆಡ್ಡಿ ಅವರಿಂದ ಅನ್ಯಾಯಕ್ಕೆ ಒಳಗಾದ ಜನತೆ ದೂರುಗಳನ್ನು ನನಗೆ ನೀಡಿದರೆ ನಾನು ಅಮಿತ್ ಶಾ ಅವರಿಗೆ ಕಳಿಸುವೆ ಎಂದರು.
ತಾವು ರಾಜ್ಯ ಸಭಾ ಸದಸ್ಯರಾಗಿದ್ದಾಗ, ಶಾಸಕರಾಗಿದ್ದಾಗ, ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದಾಗ ಬಾಯಿ ಮುಚ್ಚಿಕೊಂಡಿದ್ದ ಇವರು. ಈಗ ಚುನಾವಣೆ ಬಂದಾಗ ಇಂತಹ ವಿಷಯ ಪ್ರಸ್ತಾಪಿಸಿದ್ದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ನಾನು ಸಚಿವನಾಗಬೇಕು:
ನನಗೆ ಟಿಕೆಟ್ ಸಿಗಲಿದೆಂಬ ವಿಶ್ವಾಸ ಇದೆ.
ಟಿಕೆಟ್ ನೀಡದಿದ್ದರೆ ಎಂಎಲ್ ಸಿ ಯಾಗಿ ಮಾಡಲಿ ಎಂದು ಮೇಡಂ ಸೋನಿಯಾ ಅವರಿಗೆ ಕೇಳುವೆ. ಒಟ್ಟಾರೆ ಮುಂದೆ ಬರುವ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಸಚಿವನಾಗಬೇಕು.
ಬೇರೆಯವರಿಗೆ ಟಿಕೆಟ್ ಸಿಕ್ಕರೆ ಗೆಲ್ಲಿಸುವ ಪ್ರಯತ್ನ ಮಾಡುವೆ.
ಭರತ್ ರೆಡ್ಡಿ ಒಳ್ಳೆಯವರು.
ಟಿಕೆಟ್ ಆಕಾಂಕ್ಷಿ ಭರತ್ ರೆಡ್ಡಿ ಅವರು ಒಳ್ಳೆಯವರು. ಅವರು ಹೊಸಪೇಟೆಯ ವಿಜಯನಗರ ಕ್ಷೇತ್ರಕ್ಕೆ ಹೋಗುತ್ತೇನೆ ಎಂದಿದ್ದರು. ಆದರೆ ಈಗ ಬಳ್ಳಾರಿ ಕ್ಷೇತ್ರ ಕೇಳುತ್ತಿದ್ದಾರೆ. ಜನ ಹೇಳುವಂತೆ ಅವರು 150 ಕೋಟಿ ಖರ್ಚು ಮಾಡ್ತಾರಂತೆ, ಬಹಳಷ್ಟು ದುಡ್ಡ ಇದೆಯಂತೆ.