ನನಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಗೆಲವು ನಿಶ್ಚಿತ: ಯಡಹಳ್ಳಿ

ವಿಜಯಪುರ,ಫೆ. 25:ವಿಜಯಪುರ ಲೋಕಸಭೆ ಎಸ್.ಸಿ. ಮೀಸಲು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷದ ಮುಖಂಡರಿಗೆ ಈಗಾಗಲೇ ಟಿಕೆಟ್ ಗಾಗಿ ಮನವಿ ಮಾಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ ಹಾಗೂ ವಿಜಯಪುರ ಲೋಕಸಭೆ ಟಿಕೆಟ್ ಆಕಾಂಕ್ಷಿ ರಾಜಶೇಖರ ಯಡಹಳ್ಳಿ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಳೆದ ಮೂರು ಬಾರಿ ಬಂಜಾರ ಜನಾಂಗಕ್ಕೆ ಟಿಕೆಟ್ ನೀಡಿತ್ತು. ಗೆಲವು ಸಾಧಿಸಲು ಆಗಿಲ್ಲ. ದಲಿತ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಹೆಚ್ಚು ಸಹಾಯಕಾರಿಯಾಗಲಿದೆ ಎಂದರು.
ನಮ್ಮ ಸಮುದಾಯಕ್ಕೆ ಅದರಲ್ಲೂ ನನಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಪಕ್ಷದ ಮುಖಂಡರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೇನೆ ಎಂದರು.
ಪಕ್ಷದಲ್ಲಿ ಬೇರೆಯವರಿಗೆವಟಿಕೆಟ್ ದೊರೆತರೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದೂ ಹೇಳಿದರು.
ಶಶಿಕಾಂತ ಹೊನವಾಡಕರ, ಸಿ.ಎಸ್. ನಿಂಬಾಳ, ಬಿ.ಎಸ್. ಬ್ಯಾಳಿ, ಎಂ.ಬಿ. ಹಳ್ಳದಮನಿ, ರಾಜೇಶ ತೊರವಿ, ನಾಗರಾಜ ಲಂಬು, ಭೀಮರಾವ ತಳಕೇರಿ, ಕೆಎಂ ಕೂಡಲಗಿ ಇದ್ದರು.