ನನಗೆ ಕಮೀಷನ್ ಬೇಡಗುಣಮಟ್ಟ ಬೇಕು: ಭರತ್ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.18: ನನಗೆ ಭಗವಂತ ಎಲ್ಲಾ  ನೀಡಿದ್ದಾನೆ. ನಾನು ಸರ್ಕಾರಿ ಕಾಮಗಾರಿಗಳಿಗೆ  ಯಾರಿಂದ ಕಮೀಷನ್ ಬಯಸಲ್ಲ. ನನಗೆ ಗುಣ ಮಟ್ಟದ ಕಾಮಗಾರಿ ಆಗಬೇಕು ಅಷ್ಟೇ ಎಂದು ನಗರ ಶಾಸಕ‌ ಭರತ್ ರೆಡ್ಡಿ ಹೇಳಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಗೋನಾಳ್  ಬಳಿ ಬುಡಾದಿಂದ ನಿರ್ಮಿಸುತ್ತಿರುವ ಸಿದ್ರಾಮೇಶ್ವರ ಬಡಾವಣೆ ಗುತ್ತಿಗೆದಾರ ಶೇಖರ್ ಅವರು ಕಾಮಗಾರಿ ಸ್ಥಗಿತಗೊಳಿಸಿರುವ ಬಗ್ಗೆ ಅನೇಕ ರೀತಿಯ ಮಾತುಗಳು ಕೇಳಿ ಬರುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ನನಗೆ ಗುಣಮಟ್ಟದ ಕೆಲಸ ಬೇಕು. ಸರರ್ಕಾರ ಅಸ್ತಿತ್ವಕ್ಕೆ ಬಂದಾಗ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿತ್ತು. ಈಗ ಪುನಃ ಆರಂಭ ಮಾಡುವಂತೆ ತಿಳಿಸಿದೆ. ಕಾಮಗಾರಿ ಸಧ್ಯದಲ್ಲೇ ಆರಂಭಿಸಲಿದ್ದಾರೆಂದರು.
 ಬೀಡಾಡಿ ದನಕ್ಕೆ ಮುಕ್ತಿ:
ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿರುವ,
ನಗರದಲ್ಲಿ ಹೆಚ್ಚಿರುವ ಬೀಡಾಡಿ ದನಗಳಿಗೆ ಮುಕ್ತಿ ತೋರಿಸಲು ನಿರ್ಧರಿಸಿದೆ. ಈ ಕುರಿತು ಪಾಲಿಕೆ ಆಯುಕ್ತರಿಗೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲು ಸೂಚಿಸಿರುವೆ. ಈ ಕಾರ್ಯವನ್ನು ಸಹ ಸಧ್ಯದಲ್ಲಿಯೇ ಮಾಡಿ ತೋರಿಸಲಿದೆ. ಧನಗಳನ್ನು ಹಿಡಿದು ಗೋಶಾಲೆಗೆ ಕಳಿಸಿದರೆ ನಾವು ಜನ ಪ್ರತಿನಿಧಿಗಳಾರು ಅಡ್ಡ ಬರುವುದಿಲ್ಲ. ಈ ಭರತ್ ರೆಡ್ಡಿ  ಹೇಳಿದಂತೆ ಇದನ್ನು ಮಾಡಿ ತೋರಿಸುತ್ತೇನೆ ನೋಡಿ ಎಂದು ಸುದ್ದಿಗಾರರಿಗೆ ಹೇಳಿದರು.
ಅದೇ ರೀತಿ  ಬೀದಿ ನಾಯಿಗಳನ್ನು ನಿಯಂತ್ರಿಸುವ ಕೆಲಸ ಪಾಲಿಕೆಯಿಂದ ಮಾಡಲಿದೆಂದರು.
ವಿದ್ಯುತ್ ಬಿಲ್ ಹೆಚ್ಚಳದಿಂದ  ಜೀನ್ಸ್  ಸಿದ್ದ ಉಡುಪು ಉತ್ಪಾದನೆಗೆ ಸಮಸ್ಯೆಯಾಗುತ್ತಿದೆಂದು ಉದ್ಯಮಿಗಳು ಹೇಳುತ್ತಿರುವ ಬಗ್ಗೆ ಕೇಳಿದರೆ ಅಒರೆಲ್ ಪಾರ್ಕ್ ಬಂದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆಂದು ಹೇಳಿದರು.
ಬಾಪೂಜಿ ನಗರದ ಮುಖ್ಯ ರಸ್ತೆಯನ್ನು ಒತ್ತುವರಿ‌ಮಾಡಿರುವ ಕೆಲ  ಮನೆಗಳನ್ನು ತೆರವುಗೊಳಿಸಿ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪೂರ್ಣಗೊಳಿಸಲಿದೆಂದು ಇದೇ ಸಂದರ್ಭದಲ್ಲಿ ಶಾಸಕರು ಹೇಳಿದರು.

One attachment • Scanned by Gmail