ನನಗೆ ಒಂದೇ ಹೆಂಡತಿ, ಒಂದೇ ಸಂಸಾರ

ಬೆಂಗಳೂರು, ಮಾ. ೨೪- ಮಾಜಿ ಸಚಿವ ಜಾರಕಿಹೊಳಿ ಅವರ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಕ್ಸ್‌ಮರ ತಾರಕಕ್ಕೇರಿದೆ. ಈ ನಡುವೆ ಸಚಿವ ಡಾ. ಸುಧಾಕರ್‌ರವರ ಹೇಳಿಕೆಗೆ ಡಿ.ಕೆ.ಶಿವಕುಮಾರ್ ನನಗಿರುವುದು ‘ಒಂದೇ ಹೆಂಡತಿ, ಒಂದೇ ಸಂಸಾರ’ ಎಂದು ತಿರುಗೇಟು ನೀಡಿದ್ದಾರೆ.
ಯಾರು ಏನೇ ಹೇಳಿದರೂ ನನಗಿರುವುದು ‘ಒಬ್ಬಳೇ ಹೆಂಡತಿ, ಒಂದೇ ಸಂಸಾರ’ ಸಚಿವ ಸುಧಾಕರ್, ಜಾರಕಿಹೊಳಿ ಸಿಡಿಗೆ ಸಂಬಂಧಿಸಿದಂತೆ ನುಡಿ ಮುತ್ತುಗಳನ್ನು ಉದುರಿಸುತ್ತಿದ್ದಾರೆ. ಈ ವಿಷಯ ಸಾಮೂಹಿಕ ವಿಷಯವಾಗಿವುದರಿಂದ ಸದನದಲ್ಲಿ ಚರ್ಚೆ ಮಾಡುವುದಾಗಿ ಗುಡುಗಿದ್ದಾರೆ.
ಸುಧಾಕರ್ ಅವರೇ ನೀವು ಶ್ರೀರಾಮಚಂದ್ರರಾ ಆಗಿದ್ದರೆ, ನ್ಯಾಯಾಲಯಕ್ಕೆ ಹೋಗಿ ಸಿಡಿಗಳನ್ನು ಬಿಡುಗಡೆಯಾಗದಂತೆ ತಡೆ ತಂದಿದ್ದೀರಿ ಎಂದು ಸುಧಾಕರ್ ಟಾಂಗ್ ನೀಡಿದ್ದಾರೆ.
ಇಂದು ಬೆಳಿಗ್ಗೆ ಸಚಿವ ಡಾ. ಸುಧಾಕರ್ ಅವರು ತನಿಖೆ ಆಗುವುದಾದರೆ ೨೨೫ ಶಾಸಕರು ಕುರಿತಂತೆ ತನಿಖೆಯಾಗಲಿ. ಯಾರು ಸತ್ಯಹರಿಶ್ಚಂದ್ರರಾ, ಯಾರು ಶ್ರೀರಾಮಚಂದ್ರಿರಾ ತನಿಖೆಯಿಂದ ತಿಳಿದು ಬರಲಿದೆ, ಏಕಪತ್ನಿ ವ್ರತಸ್ಥರಾ ಯಾರು ಎನ್ನುವುದು ರಾಜ್ಯದ ಜನರಿಗೂ ತಿಳಿಯಲಿ ಎಂದು ಸವಾಲು ಹಾಕಿದ್ದರು.