ನನಗೆ ಆಡಳಿತ ಭಾಷೆ ಗೊತ್ತಿದೆ

(ಸಂಜೆವಾಣಿ ವಾರ್ತೆ)
ರಾಯಚೂರು,ಏ.೨೭-
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಎಲ್ಲರನ್ನು ಸಮಾನರಾಗಿ ಕಂಡು ಆರ್ಥಿಕ ಸಮಾನತೆಗೆ ನಾಂದಿಯಾಡಿದೆ. ದೇಶದ ಸ್ವತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಗೆ ತನ್ನದೆಯಾದ ಇತಿಹಾಸವಿದೆ. ಅಂದಿನಿಂದಲೂ ಇಂದಿನವರೆಗೂ ದೇಶದ ಸಮಾನತೆ ಸೌಹಾರ್ಧತೆಗೆ, ಸ್ವಾವಲಂಬಗೆ ದಕ್ಕೆಯಾಗದಂತೆ ಸೇರಿ ಸರ್ವಾಂಗೀಣ ಅಭಿವೃದ್ಧಿಗಾಗಿ ಜನಪರವಾಗಿ ಕೆಲಸ ಮಾಡಿದೆ. ಇನ್ನು ಹೆಚ್ಚಿನ ಜನಪರ ಯೋಜನೆಗಳಿಗಾಗಿ ಕಾಂಗ್ರೆಸ್ ಗೆ ಬೆಂಬಲಿಸಿ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಅವರು ತಿಳಿಸಿದರು.
ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೋತ್ನಾಳ ಪಟ್ಟಣದಲ್ಲಿ ರಾಯಚೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ ಅವರ ಪರವಾಗಿ ಬೃಹತ್ ಮೆರವಣಿಗೆ ಮೂಲಕ ಸಾವಿರಾರು ಜನರೊಂದಿಗೆ ಮತಯಾಚನೆ ಮಾಡಿದರು.
ನಂತರ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ ನಾಯಕ ಮಾತನಾಡಿ ನಾನು ಜಿಲ್ಲಾಧಿಕಾರಿಯಾಗಿ ರಾಯಚೂರು ಜಿಲ್ಲೆಯ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಸರಕಾರಿ ಸೇವೆಯಿಂದ ಮಾತ್ರ ನಿವೃತ್ತಿ ಹೊಂದಿದ್ದೇನೆ ಜನರ ಸೇವೆಯಿಂದಲ್ಲ. ಈ ಭಾಗ ಅಭಿವೃದ್ದಿಗೊಳಿಸಲು ಆಡು ಭಾಷೆಯ ಜೊತೆಗೆ ಆಡಳಿತ ಭಾಷೆಯೂ ಗೊತ್ತಿದೆ. ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಮ್ಮೆಲ್ಲರ ಸೇವೆ ಮಾಡಲು ಬಂದಿರುವೆ ನೀವೆಲ್ಲರೂ ನನಗೆ ಆಶೀರ್ವಾದ ಮಾಡುವ ಮೂಲಕ ಇನ್ನು ಹೆಚ್ಚಿನ ಸೇವೆಗೆ ಅವಕಾಶ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ನಂತರ ಶಾಸಕ ಹಂಪಯ್ಯ ನಾಯಕ ಮಾತನಾಡಿ, ಕಳೆದ ೨೦ ವರ್ಷಗಳ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾದ ಕುಮಾರ್ ನಾಯಕ ಅವರು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಈ ಭಾಗದ ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಂಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚಿನ ಮತ ನೀಡುವ ಮೂಲಕ ಕುಮಾರ ನಾಯಕ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ವಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಕಪೂರ್ ಸಾಬ್ಣ ಮುಖಂಡರಾದ ಎಂ ಈರಣ್ಣ, ರಾಜ ವಸಂತ ನಾಯಕ್, ಶರಣಯ್ಯ ನಾಯಕ್, ಬ್ರಿಜ್ಜೇಶ ಪಾಟೀಲ್, ಪಂಪನಗೌಡ ಪೋತ್ನಾಳ, ಬಾಲಸ್ವಾಮಿ ಕೊಡ್ಲಿ, ಬಸವಂತಪ್ಪ, ಕಾಲಿದ್ ಖಾತ್ರಿ, ಬಸವರಾಜ್ ಗೌಡ ಪೋತ್ನಾಳ, ಡಾ, ಗುರು ಶರ್ಮ, ಬಿಕೆ ಅಮರೇಶಪ್ಪ, ಗುಂಡಮ್ಮ ಬಸವರಾಜಪ್ಪ ಎರಮಲದೊಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.