ನನಗೆ ಅನುಭವ ಇದೆ ನನ್ನದೇ ಕನಸು ಇದೆಕೆಅರ್ ಪಿಪಿ ಜೊತೆ ಒಳ ಒಪ್ಪಂದ ಇಲ್ಲ.  ಕಾಂಗ್ರೆಸ್ ನಮ್ಮ ನಡುವೆ  ಸ್ಪರ್ಧೆ: ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.20: ನಾನು ಈ ಮೊದಲಿನಿಂದ ಹೇಳುತ್ತಿರುವೆ. ಏನಿದ್ದರೂ ನಗರ ಕ್ಷೇತ್ರದಲ್ಲಿ  ನಮ್ಮ‌ ಬಿಜೆಪಿ  ಮತ್ತು ಕಾಂಗ್ರೆಸ್ ನಡುವೆ ಮಾತ್ರ  ತೀವ್ರ ಸ್ಪರ್ಧೆ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರು ನಿನ್ನೆ ಸಂಜೆ ತಮ್ಮ‌ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ.  ನಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಇರುವುದು ಕೇವಲ ರಾಷ್ಟ್ರೀಯ ಪಕ್ಷಗಳ ನಡುವೆ ಎಂದ ಅವರು. ಕೆಆರ್ ಪಿಪಿ ಪಕ್ಷದ ಜೊತೆ ಒಳ ಒಪ್ಪಂದ ಎಂಬುದೆಲ್ಲ ಸುಳ್ಳು ಎಂದರು. ನನಗೆ ಅನುಭವ ಇದೆ. ನಗರದ ಅಭಿವೃದ್ಧಿಗೆ ನನ್ನದೇ ಕನಸು ಇದೆಂದು ನಗರದ ಅಭಿವೃದ್ಧಿ ಕುರಿತಾದ ಮುನ್ನೋಟದ  ಕರಪತ್ರ ಬಿಡುಗಡೆ ಮಾಡಿ ತಿಳಿಸಿದರು.
ನಗರದ 34 ನೇ ವಾರ್ಡಿನಿಂದ ಕೌನ್ಸಿಲರಾಗಿ ಬಿಜೆಪಿಯಿಂದ  ಗೆದ್ದು, ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷನಾಗಿದ್ದೆ. ನಂತರ ಮೇಯರ್ ಆಗಿದ್ದೆ.
ಬಳಿಕ 2008 ರಿಂದ ನಗರ ಶಾಸಕನಾದೆ. ಟಫ್ ಪೈಟ್ ನಲ್ಲಿ ಗೆದ್ದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದು ನಗರದ ಅಭಿವೃದ್ಧಿಗೆ ಸಹಕಾರಿಯಾಯ್ತು.
ಎಲ್ ಎಲ್ ಸಿಯಿಂದ ಹೆಚ್ ಎಲ್ ಸಿ ಕಾಲಯವೆಗೆ ಪೈಪ್ ಲೈನ್ ಹಾಕಿ ಕುಡಿಯುವ ನೀರಿನ‌ವ್ಯವಸ್ಥೆ ಮಾಡಿದೆ.
ಜನರಿಗೆ  ಸಿಗ್ತಾರೆ, ಕೆಲಸ ಆಗುವುದಿದ್ದರೆ ಒಪ್ಪುತ್ತಾರೆ ಇಲ್ಲದಿದ್ದರೆ ಇಲ್ಲ ಎಂಬ ಭಾವನೆ ನನ್ನ ಬಗ್ಗೆ ಜನರಲ್ಲಿ ಇದೆ.
ನಂತರ 2013 ರಲ್ಲಿ  ಚುನಾವಣೆಗೆ ನಿಲ್ಲದಿದ್ದರೂ ಆ ಐದು ವರ್ಷಗಳ ಕಾಲ ಜನರ ಮಧ್ಯೆ ಇದ್ದೆ. ಅದಕ್ಕಾಗಿ 2018 ರಲ್ಲಿ ಮತ್ತೆ ಬಿಜೆಪಿ ಶಾಸಕನಾದೆ.
ದಿನ ಬೆಳಗಾದರೆ ನನಗೆ ಕೆಲಸ ಎಂದರೆ ಜನ ಸೇವೆ. ನನಗೆ ಬೇರೆ ವ್ಯಾಪಾರ ಗೀಪಾರ ಇಲ್ಲ ಎಂದರು.  ಈಗಾಗಲೇ 15 ವಾರ್ಡಿನಲ್ಲಿ ಸಂಚರಿಸಿ ಮತ ಯಾಚನೆ ಮಾಡಿರುವೆ ಜನ ಮತ್ತೊಮ್ಮೆ ಶಾಸಕನನ್ನಾಗಿ ಮಾಡುವ ಭರವಸೆ ನೀಡಿದ್ದಾರೆ ನನ್ನ ಗೆಲುವು ಖಚಿತ ಎಂದರು.
ನಗರದ ಅಭಿವೃದ್ದಿಯ ಮುನ್ನೋಟದ ಬಗ್ಗೆ ತಿಳಿಸುತ್ತ. ಕೆಎಂಆರ್ ಸಿ ಹಣ 25 ಸಾವಿರ ಕೋಟಿ ರೂ ಇದೆ.ಅದರಲ್ಲಿ 13378 ಕೋಟಿ ರೂ ಅಖಂಡ ಬಳ್ಳಾರಿ ಜಿಲ್ಲೆಗೆ. ಅದರಲ್ಲಿ
3900 ವಿಜಯನಗರ ಜಿಲ್ಲೆಗೆ ಉಳಿದ 9478 ಕೋಟಿ ಬಳ್ಳಾರಿ ಜಿಲ್ಲೆಗೆ ಇದೆ. ಇದರಲ್ಲಿ
265 ಕೋಟಿ ರೂಗಳಿಂದ ಎರಡನೇ ಹಂತದ 24*7 ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಹಂತದಲ್ಲಿದೆ. ಒಳ ಚರಂಡಿ ವ್ಯವಸ್ಥೆ ಮಾಡಬೇಕಿದೆ ಅದಕ್ಕೆ 335 ಕೋಟಿ ರೂ ಯೋಜನೆ ರೂಪಿಸಿದೆ. 376 ಕೋಟಿ ರೂ ವೆಚ್ಚದಲ್ಲಿಕೊಳಗಲ್ಲು ಕೆರೆ, ಮಿಂಚೇರಿ ಬಳಿ ಒಂದು ಕೆರೆ ನಿರ್ಮಾಣಕ್ಕೆ ಯೋಜಿಸಿದೆ. ಇದು 2060 ವರೆಗಿನ ಜನಸಂಖ್ಯೆ ಬೆಳವಣಿಗೆಯನ್ನು ಪರಿಗಣಿಸಿದೆ.  
15 ಎಂಎಲ್ ಡಿ ಪ್ರಮಾಣ ನೀರನ್ನು ಸಂಗನಕಲ್ಲು ಬಳಿ ಇರುವ ನೀರು ಶುದ್ದೀಕರಣ ಘಟಕ ಮಾಡುತ್ತಿದೆ. ಇಲ್ಲಿಯೇ ಮತ್ತೊಂದು 15 ಎಂಎಲ್ಡಿಯ ನೀರು ಶುದ್ದೀಕರಣ  ಘಟಕವನ್ನು  19.75 ಕೋಟಿ ರೂ ವೆಚ್ಚದಲ್ಲಿ ಮಾಡಲು ಉದ್ದೇಶಿಸಿದೆ. ಕೆಎಂಆರ್ ಸಿ ಅನುದಾನದಿಂದಲೇ ಸ್ಮಾರ್ಟ್ ಸಿಟಿ ಮಾಡಲಿದೆಂದರು.
ಪ್ರಚಾರಕ್ಕೆ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಪ್ರಧಾನಿ  ಮೋದಿ  ಅವರು ಬರುವ ಸಾಧ್ಯತೆ ಇದೆ. ಚಿತ್ರ ನಟರಾದ  ಪವನ್ ಕಲ್ಯಾಣ, ಸುದೀಪ್, ರಾಜ್ಯ ಮುಖಂಡರುಗಳಾದ  ಯಡಿಯೂರಪ್ಪ, ಬೊಮ್ಮಾಯಿ, ವಿಜಯೇಂದ್ರ ಅವರನ್ನು ಪ್ರಚಾರಕ್ಕೆ ಕರೆದಿದೆಂದರು.
ಸುದ್ದಿಗೋಷ್ಟಿಯಲ್ಲಿ  ಅನಿಲ್ ನಾಯ್ಡು, ವೀರಶೇಖರ ರೆಡ್ಡಿ, ಶ್ರೀನಿವಾಸ ಮೋತ್ಕರ್, ರಾಜೀವ್ ತೊಗರಿ, ವೆಂಕಟೇಶ್, ರಾಮಾಂಜಿನಿ ಮೊದಲಾದವರು ಇದ್ದರು.