ನನಗಾಗಿ ಯಾರು ಕಾಯಬೇಕಿಲ್ಲಪೋನ್ ಕರೆ ಮಾಡಿದರೆ ಸ್ಪಂದಿಸುತ್ತೇನೆ: ನಾಗೇಂದ್ರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.14:: ನನಗಾಗಿ ಯಾರು ಕಾಯಬೇಕಿಲ್ಲ, ನಾನು ಇಲ್ಲದ ಸಮಯದಲ್ಲಿ ಪೋನ್ ಕರೆ ಮಾಡಿದರೆ ಸಾಕು ನಾನು ಸ್ಪಂದಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದ್ದಾರೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ನಿನ್ನೆ ಸಂಜೆ ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆಂದು ಮನೆಗೆ ಕಳೆದ ಕೆಲ‌ ದಿನಗಳಿಂದ  ಬಂದು ಹೋಗಿದ್ದೆವು ಎಂದಾಗ. ನಾನು ಇಲ್ಲ ಬೇಸರವಾಗುವುದು ಬೇಡ. ಪೋನ್ ಮಾಡಿ, ನಿಮ್ಮ ‌ಸಮಸ್ಯೆಗೆ ತಕ್ಷಣ ಸ್ಪಂದಿಸುವೆ ಎಂದು ಹೇಳಿದರು.
ಕ್ಷೇತ್ರದ, ಜಿಲ್ಲೆಯ ಜನತೆ ಹಲವು ಸಮಸ್ಯೆ ಹಾಗೂ ಕುಂದು ಕೊರತೆಗಳ ಬಗ್ಗೆ ಕುರಿತು ಮಂಡಿಸಿದರು.   ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಸಚಿವರು ಪರಿಹರಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಕಾಂಗ್ರೆಸ್‌ನ  ಮುಖಂಡರು, ಕಾರ್ಯಕರ್ತರು ಹಾಗೂ  ಅಭಿಮಾನಿಗಳು ಇದ್ದರು.