ನದಿ ದಾಟಿ ಶಾಲೆಗೆ ತೆರಳುವ ಶಿಕ್ಷಕಿ

ಬಲರಾಂಪುರ, ಜು.೨೪- ಛತ್ತೀಸ್‌ಗಢ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಮಕ್ಕಳ ಭವಿಷ್ಯ ರೂಪಿಸಲು ದಿನನಿತ್ಯ ನದಿ ದಾಟಿ ಗ್ರಾಮವೊಂದರ ಶಾಲೆಗೆ ಹೋಗುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಧೂರ್‌ಪುರ ಗ್ರಾಮದಲ್ಲಿರುವ ಶಾಲೆಗೆ ತಲುಪಲು ಬೇರೆ ಮಾರ್ಗವಿಲ್ಲ ಕಾರಣ ಪ್ರತಿದಿನ ಕರ್ಮಿಲಾ ಟೊಪ್ಪೊ ಎಂಬ ಶಾಲಾ ಶಿಕ್ಷಕಿಯೂ ನದಿಯನ್ನು ದಾಟುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶಿಕ್ಷಕಿ,
ನನ್ನ ದಾರಿಯಲ್ಲಿ ಎರಡು ನದಿಗಳಿವೆ, ನಾನು ಶಾಲೆಗೆ ಹೋಗಬೇಕಾದರೆ ಅದನ್ನು ದಾಟಬೇಕು, ಬೇರೆ ದಾರಿಯಿಲ್ಲ.ನಾನು ಮಕ್ಕಳ ಭವಿಷ್ಯವನ್ನು ರೂಪಿಸಲು ನಾನು ಪ್ರತಿದಿನ ಬರುತ್ತೇನೆ ಎಂದು ಅವರು ಹೇಳಿದರು.
ಖಂಡಿತವಾಗಿಯೂ ಈ ಶಿಕ್ಷಕಿ ತನ್ನ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ನಾನು ಇತರ ಶಿಕ್ಷಕರಿಂದಲೂ ಇದೇ ರೀತಿಯ ಕೆಲಸವನ್ನು ನಿರೀಕ್ಷಿಸುತ್ತೇನೆ. ಇತರ ಶಿಕ್ಷಕರು ಸಹ ತಮ್ಮ ಕರ್ತವ್ಯದಲ್ಲಿ ನಿಷ್ಠರಾಗಿರಬೇಕು ಮತ್ತು ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಬೇಕು ಎಂದು ಅಲ್ಲಿನ ಜಿಲ್ಲಾಧಿಕಾರಿ ಎಕ್ಕಾ ಹೇಳಿದ್ದಾರೆ.