ನದಿ ತೀರದ ಗ್ರಾಮಸ್ಥರಿಗೆ ಧೈರ್ಯ ತುಂಬಿದ- ಸುಭಾಷಚಂದ್ರ

ರಾಯಚೂರು, ಜುಲೈ,೧೭, ಕೃಷ್ಣಾನದಿಯಿಂದ ೧೬೦ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಪ್ರತಿ ದಿನ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಗುರ್ಜಾಪುರ ಗ್ರಾಮದಲ್ಲಿ ಬ್ರಿಜ್.ಕಂ ಬ್ಯಾರೇಜ್ಗೆ ೧೯೪ ಗೇಟುಗಳಿದ್ದು, ಈಗಾಗಲೇ ೯೦ ಗೇಟ್ ಗಳನ್ನು ತೇರೆಯಲಾಗಿದೆ. ಇನ್ನುಳಿದ ೧೦೪ ಗೇಟ್ ಗಳನ್ನು ತಕ್ಷಣವೇ ತೆರೆಯಬೇಕೆಂದು ಕೆ ಪಿ ಸಿ ಇಂಜಿನಿಯರ್ ಗಳಿಗೆ ಗ್ರಾಮೀಣ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಆಕಾಂಕ್ಷಿ ಡಾ. ಸುಭಾಷಚಂದ್ರ ಅವರು ಒತ್ತಾಯಿಸಿದರು.
ಅವರು ಗುರ್ಜಾಪುರ ಬ್ರಿಜ್ ಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಗಮನಸಿ ಕೃಷ್ಣಾನದಿಯ ತೀರದ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳದಿದ್ದರು ತುಂತುರು ಮಳೆ ಬಿದ್ದಿರುವದರಿಂದ ಜಿಲ್ಲೆಯ ಎರಡು ನದಿಗಳ ಮಧ್ಯೆ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದರೆ ಅಲ್ಲಿನ ಡ್ಯಾಂಗಳಲ್ಲಿ ಭರ್ತಿಯಾದ ನೀರನ್ನು ಕೃಷ್ಣ ಮತ್ತು ತುಂಗಭದ್ರಾ ನದಿಗೆ ಹರಿಬಿಡಲಾಗುತ್ತದೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ ನದಿ ದಂಡೆಯ ಗ್ರಾಮದ ಹೋಲಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ ಆದರಿಂದ ಗುರ್ಜಾಪುರ ಬ್ಯಾರೇಜ್ ಎಲ್ಲಾ ಗೇಟ್ ಗಳನ್ನು ತೇರಿಯಬೇಕೆಂದು ಒತ್ತಾಯಿಸಿದರು. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಭಯ ಬೀತರಾಗಬೇಡಿ ನಿಮ್ಮ ಜೊತೆಯಲ್ಲಿ ನಾವಿದ್ದೇವೆ ಎಂದು ಡಾ. ಸುಭಾಷಚಂದ್ರ ಅವರು ಧೈರ್ಯ ಹೇಳಿದರು.