ನದಿ ಇಂಗಳಗಾಂವ ಪಿಕೆಪಿಎಸ್ ಅಧ್ಯಕ್ಷÀ, ಉಪಾಧ್ಯಕ್ಷರ ಆಯ್ಕೆ

(ಸಂಜೆವಾಣಿ ವಾರ್ತೆ)
ಅಥಣಿ : ಜು.8:ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ವಿಠ್ಠಲ ಚನಗೌಡಾ ರಾಚಗೌಡರ ಹಾಗೂ ಉಪಾಧ್ಯಕ್ಷರಾಗಿ ಶೇಖರ ಚನ್ನಪ್ಪಾ ಮೋಕಾಶಿ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್ ಎನ್ ನೂಲಿ, ಘೋಷಿಸಿದರು,
ಶುಕ್ರವಾರ ದಿ, 07/07/2023 ರಂದು ಮಧ್ಯಾಹ್ನ 3 ಗಂಟೆಯಿಂದ ಆರಂಭವಾದ ಚುನಾವಣಾ ಪ್ರಕ್ರಿಯೆ ಸಾಯಂಕಾಲ ಫಲಿತಾಂಶ ಘೋಷಿಸುವುದರೊಂದಿಗೆ ಮುಕ್ತಾಯವಾಯಿತು,
ಈ ವೇಳೆ ನೂತನ ಅಧ್ಯಕ್ಷ ವಿಠ್ಠಲ ಚನಗೌಡಾ ರಾಚಗೌಡರ ಸುದ್ದಿಗಾರರೊಂದಿಗೆ ಮಾತನಾಡಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಲಕ್ಷ್ಮಣ ಸವದಿ ಯವರ ಬೆಂಬಲದಿಂದ ಹಾಗೂ ನಮ್ಮ ಗ್ರಾಮದ ರೈತರ ಆಶೀರ್ವಾದದಿಂದ ನಾನು ಇವತ್ತು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಇದು ಬರಿ ನನ್ನ ಗೆಲವು ಅಲ್ಲ ಇದು ನಮ್ಮ ರೈತರ ಗೆಲವು ಬರುವ ದಿನಗಳಲ್ಲಿ ನಮ್ಮ ಗ್ರಾಮದ ಪ್ರತಿಯೊಬ್ಬರ ರೈತರ ಏಳಿಗೆಗಾಗಿ ಶ್ರಮಿಸುತ್ತೇನೆ ಹಾಗೂ ಸಹಕಾರ ಸಂಘದಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ಪ್ರಾಮಾಣಿಕವಾಗಿ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ಸಹಾಯಕ ಚುನಾವಣಾಧಿಕಾರಿಯಾಗಿ ಬಿ ಎಂ ಕನಾಳ ಕರ್ತವ್ಯ ನಿರ್ವಹಿಸಿದರು,
ಈ ವೇಳೆ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕರಾದ ಪ್ರಮೋದ್ ಕುಲಕರ್ಣಿ, ಗುರುಬಸಯ್ಯಾ ಮಠಪತಿ, ಮಲ್ಲಪ್ಪ ದಾಬೋಳಿ, ಅಶೋಕ ಮಂಗಸೂಳಿ, ಬಸಪ್ಪ ಮೋಕಾಶಿ, ಶಂಕರ ಠಕ್ಕಣ್ಣವರ, ಬಾಬಾಲಾಲ ಮುಕ್ಕೇರಿ, ಅಲಗೌಡಾ ಮುದಿಗೌಡರ, ಅಕ್ಬರ್ ಮುಕ್ಕೇರಿ, ಮಹಾಂತೇಶ ಪಾಟೀಲ, ಮಂಜು ಗಿರಿಮಲ್ಲನವರ, ಕುಮಾರ ಮಠಪತಿ, ಗುರು ಮೋಕಾಶಿ, ಅಶೋಕ ತೆವರಮನಿ, ಸಾತಪ್ಪಾ ಉಳ್ಳಾಗಡ್ಡಿ, ಮುರಿಗೆಪ್ಪ ರಾಚಗೌಡರ, ಚನ್ನಪ್ಪ ರಾಚಗೌಡರ, ಶಂಕರ ತೆವರಮನಿ, ಅಣ್ಣಪ್ಪ ರಾಚಗೌಡರ, ಸದಾಶಿವ ಉಳ್ಳಾಗಡ್ಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು