ನದಿ ಇಂಗಳಗಾಂವ ಗ್ರಾಪಂ ಕಾಂಗ್ರೇಸ್ ತೆಕ್ಕೆಗೆ: ಚನಗೌಡರ ಅಧ್ಯಕ್ಷೆ, ನನ್ನೆ ಉಪಾಧ್ಯಕ್ಷ

ಅಥಣಿ : ಜು.29:ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕಿನ ನದಿ ಇಂಗಳಗಾಂವ ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರ ಚುಣಾವಣೆ ಇಂದು ಜರುಗಿತು,
ಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಮತ್ತು ಕಾಗವಾಡ ಶಾಸಕ ರಾಜು ಕಾಗೆ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾದರು, ನೂತನ ಅಧ್ಯಕ್ಷರಾಗಿ ಶ್ರೀಮತಿ ಸಂಗೀತಾ ರಾಮಗೌಡ ಚನಗೌಡರ ಹಾಗೂ ಉಪಾಧ್ಯಕ್ಷರಾಗಿ ಪರೀಧ ಮಕಬೂಲಸಾಬ ನನ್ನೆ ಅವರು ಆಯ್ಕೆಯಾದರು. ಒಟ್ಟು 13 ಜನ (ಸದಸ್ಯರು) ಮತದಾರರಿದ್ದು ಈ ಚುನಾವಣೆಯಲ್ಲಿ ಅಧ್ಯಕ್ಷರು 08 ಉಪಾಧ್ಯಕ್ಷರು 09 ಮತಗಳನ್ನು ಪಡೆದು ಆಯ್ಕೆಯಾದರು.

ನೂತನ ಅಧ್ಯಕ್ಷೆ ಸಂಗೀತಾ ಚನಗೌಡರ ಅವರು ಮಾತನಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭದ ಮಾತಲ್ಲ. ಇಲ್ಲಿ ಸದಸ್ಯರ ಹಾಗೂ ಜನರ ನಂಬಿಕೆ ಬಹಳ ಮುಖ್ಯ, ನನ್ನ ಎರಡುವರೆ ವರ್ಷದ ಅಧಿಕಾರಾವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಕ್ರಮಗಳನ್ನು ಕೈಗೆuಟಿಜeಜಿiಟಿeಜಳ್ಳುತ್ತೇನೆ, ಮುಂಬರುವ ದಿನಮಾನದಲ್ಲಿ ಗ್ರಾಮದ ಎಲ್ಲ ಅಭಿವೃದ್ದಿ ಕೆಲಸಗಳನ್ನು ತ್ವರಿತವಾಗಿ ಮಾಡಿ ಜನತೆಯ ವಿಶ್ವಾಸ ಉಳಿಸಿಕೊಳ್ಳುವೆ, ಎಂದ ಅವರು ಈ ಗೆಲುವು ನನ್ನದಲ್ಲ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ, ನದಿ ಇಂಗಳಗಾಂವ ಗ್ರಾಮದ ಹಿರಿಯರು, ಮುಖಂಡರು, ಯುವಕರು ಹಾಗೂ ಸರ್ವ ಸದಸ್ಯರ ಸಹಕಾರದಿಂದ ನಾನು ಆಯ್ಕೆಯಾಗಿದ್ದೇನೆ, ಇವರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ ಎಂದರು,

ಅನಂತರ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಫರೀದ್ ನನ್ನೆ ಅವರು ಮಾತನಾಡಿ ಪಂಚಾಯಿತಿಯ ಎಲ್ಲ ಸದಸ್ಯರು ಆಂತರಿಕ ಮನಸ್ತಾಪ ಬದಿಗಿಟ್ಟು ಪಕ್ಷ ಭೇದ ತೊರೆದು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ. ಪಂಚಾಯಿತಿ ವತಿಯಿಂದ ದೊರಕುವ ಅನುದಾನಗಳನ್ನು ಸಮರ್ಪಕವಾಗಿ ಬಳಕೆಮಾಡಿಕೊಂಡು ಗ್ರಾಮದ ಸರ್ವತೋಮುಖ ಅಭಿವೃದ್ಧಿ ಮಾಡಿ ಇಲ್ಲಿ ದೊರೆಯುವ ಸೌಲಭ್ಯಗಳನ್ನು ಪ್ರತಿ ಮನೆ ಮನೆಗಳಿಗೆ ತಲುಪಿಸುವ ಕೆಲಸ ಮಾಡೋಣ’ ನನನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಶ್ರಮಿಸಿದ ಅಥಣಿ ಶಾಸಕರಾದ ಲಕ್ಷ್ಮಣ ಸವದಿ, ಕಾಗವಾಡ ಶಾಸಕರಾದ ರಾಜು ಕಾಗೆ ಹಾಗೂ ನದಿ ಇಂಗಳಗಾಂವ ಗ್ರಾಮದ ಸಮಸ್ತ ಗುರು ಹಿರಿಯರು, ಮುಖಂಡರು, ಯುವಕರು ಹಾಗೂ ಸರ್ವ ಸದಸ್ಯರ ಸಹಕಾರದಿಂದ ನಾನು ಆಯ್ಕೆಯಾಗಿದ್ದೇನೆ, ಇವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನ ಸಲ್ಲಿಸುತ್ತೇನೆ ಎಂದರು, ಎಂದರು

ಈ ವೇಳೆ ಪಂಚಾಯತ ಸದಸ್ಯರಾದ ಮಹಾಂತೇಶ ಪಾಟೀಲ, ಮಂಜುನಾಥ ಗಿರಮಲ್ಲನ್ನವರ, ವಿಠ್ಠಲ ಗುಡೆನ್ನವರ, ರುದ್ರಮ್ಮಾ ಏಳವಿ, ಮಲೀಕಮಾ ನದಾಫ, ತಿರುಮಲಾ ಕಾಂಬಳೆ, ವೀಣಾ ಕಾಂಬಳೆ, ಮಲಿಕಮಾ ನದಾಫ, ವೀಣಾ ಕಾಂಬಳೆ, ಶಿವಾನಂದ ಯಳವಿ, ವಿಲಾಸ ಕಾಂಬಳೆ, ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.