ನದಿಹೂಳೆತ್ತುವ ಕಾಮಗಾರಿ ಯಶಸ್ವಿಯಾಗಲಿ: ಭೋಯರ್


ಬೆಳಗಾವಿ,ಮೇ.28: : ಕಳೆದ ಬಾರಿಯಂತೆ ಈ ಬಾರಿಯು ಮಾರ್ಕಂಡೇಯ ನದಿಯ ಹೂಐu ಎತ್ತುವ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೊಯರ್ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜರುಗಿದ ಮಾರ್ಕಂಡೇಯ ನದಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳಗಾವಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಬಿಜಗರ್ಣಿ, ಬೆಳಗುಂದು, ತುರಮುರಿ, ಬೆಕ್ಕಿನಕೇರಿ, ಉಜಗಾಂವ, ಬೆನಕನಹಳ್ಳಿ, ಸುಳಗಾ(ಉ) ಹಿಂಡಲಗಾ ಹಂದಿಗನೂರ, ಅಂಬೇವಾಡಿ, ಅಗಸಗಾ, ಕೇದನೂರ, ಬಂಬರಗಾ, ಕಂಗ್ರಾಳಿ (ಕೆ.ಎಚ್.), ಕಂಗ್ರಾಳಿ (ಬಿ.ಕೆ), ಕಡೋಲಿ, ಕಾಕತಿ ಹಾಗೂ ಹೊನಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ, ತಾಲ್ಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಒಟ್ಟಾರೆ ಸೇರಿಕೊಂಡು ಈ ಕಾಮಗಾರಿಯನ್ನು ಯಶಸ್ವಿಗೊಳಿಸಬೇಕು ಮತ್ತು ಕಾಮರಿಯ ಕುರಿತು ಯಾವುದೇ ತೊಂದರೆಗಳು ಬಂದರೆ ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ವಿನಾಕಾರಣ ಕಾಮಗಾರಿಯನ್ನು ವಿಳಂಬ ಮಾಡಬಾರದು ಎಂದು ಹೇಳಿದರು.
ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ್, ಸಹಾಯಕ ನಿರ್ದೇಶಕರಾದ ರಾಜೇಂದ್ರ ಮೊರಬದ, ಜಿಲ್ಲಾ ಕಾರ್ಯಕ್ರಮಗಳ ಸಂಯೋಜಕ ಬಸವರಾಜ ಎನ್. ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ ಗೋಡೆಕರ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.